

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ 'ಭಾರತ್ ರೈಸ್' ಶ್ರೀಘ್ರದಲ್ಲೇ ಕೆ.ಜಿ.ಗೆ 25 ರೂ. ದರದಲ್ಲಿ ಸಿಗಲಿದೆ. ಸರ್ಕಾರವೇ ಈ ಅಕ್ಕಿಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ, ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಮೊಬೈಲ್ ವ್ಯಾನ್ಗಳ ಮೂಲಕ ಸಾರ್ವಜನಿಕರಿಗೆ ಸರಬರಾಜು ಮಾಡಲಿದೆ.
ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಅಕ್ಕಿಯ ಸರಾಸರಿ ಚಿಲ್ಲರೆ ಬೆಲೆ ಕೆ.ಜಿ.ಗೆ 43.30 ಆಗುವ ಮೂಲಕ ಕಳೆದ ವರ್ಷಕ್ಕಿಂತ ಶೇ. 14.1 ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಭಾರತ್ ರೈಸ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ಆ ಬಳಿಕ ರಿಯಾಯಿತಿ ದರದಲ್ಲಿ ಗೋಧಿಹಿಟ್ಟು, ಧಾನ್ಯ ಕೂಡ ಕೊಡಲಾಗುವುದು. ಪ್ರಸ್ತುತ ಭಾರತ್ ಫ್ಲೋರ್ ಕೆ.ಜಿ.ಗೆ 27.50 ಮತ್ತು ಭಾರತ್ ದಾಲ್ ಕೆ.ಜಿ.ಗೆ 60 ರೂ. ದರದಲ್ಲಿ ಸರ್ಕಾರ ನೀಡುತ್ತಿದೆ.