More

    ಜಿಯೋದಿಂದ ‘ಭಾರತ್​ ಜಿಪಿಟಿ’ ಅಭಿವೃದ್ಧಿ; ಐಐಟಿ ಬಾಂಬೆ ಸಹಯೋಗ

    ಮುಂಬೈ: ಐಐಟಿ ಬಾಂಬೆ ಸಹಯೋಗದಲ್ಲಿ ‘ಭಾರತ್​ ಜಿಪಿಟಿ’ ರೂಪಿಸಲಾಗುತ್ತಿದೆ ಎಂದು ರಿಲಯನ್ಸ್​ ಜಿಯೋ ಇನ್ಫೋಕಾಮ್​ ಅಧ್ಯಕ್ಷ ಆಕಾಶ್​ ಅಂಬಾನಿ ಹೇಳಿದ್ದಾರೆ.

    ಪ್ರಸ್ತುತ ನಾವು ದೊಡ್ಡ ಮಟ್ಟದ ಭಾಷಾ ಮಾದರಿಗಳು ಮತ್ತು ಜನರೇಟಿವ್​ ಎಐ ಬಗ್ಗೆ ಕೆಲಸ ಮಾಡಿದ್ದೇವೆ. ಮುಂದಿನ ದಶಕವನ್ನು ಈ ಅಪ್ಲಿಕೇಶನ್​ಗಳು ನಿರ್ಧರಿಸಲಿವೆ. ಕೃತಕ ಬುದ್ಧಿಮತ್ತೆಯು ಪ್ರತಿಯೊಂದು ಕ್ಷೇತ್ರಗಳನ್ನು ಪರಿವರ್ತಿಸುತ್ತದೆ. ಮಾಧ್ಯಮ ಕ್ಷೇತ್ರ, ವಾಣಿಜ್ಯ, ಸಂವಹನ ಮತ್ತು ಸಾಧನಗಳಲ್ಲಿ ಎಐ ಉತ್ಪನ್ನ ಮತ್ತು ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.

    ಕಂಪನಿಯು 5ಜಿ ಖಾಸಗಿ ನೆಟ್​ವರ್ಕ್​ಗಳನ್ನು ನೀಡಲು ಉತ್ಸುಕವಾಗಿದೆ. ಮುಂದಿನ ದಶಕದಲ್ಲಿ ಭಾರತ ಅತಿದೊಡ್ಡ ನಾವೀನ್ಯತೆ ಕೇಂದ್ರವಾಗಲಿದೆ. ದಶಕದ ಅಂತ್ಯದ ವೇಳೆಗೆ ದೇಶವು 6 ಟ್ರಿಲಿಯನ್​ ಡಾಲರ್​ ಆರ್ಥಿಕತೆಯನ್ನು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts