More

    ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?

    ನವದೆಹಲಿ: ಮಾರ್ಚ್​ 22 ರಿಂದ ಆರಂಭವಾಗಿರುವ 17ನೇ ಐಪಿಎಲ್​ ಸೀಸನ್​ ಅನೇಕ ಹೊಸ ವಿಷಯಗಳಿಗೆ ವೇದಿಕೆಯಾಗಿದೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಋತುವಿನ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳು. ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದು ವರ್ಷಗಳು ಕಳೆದಿವೆ. ಇನ್ನು ಹೊಸ ಸೀಸನ್​ ಆರಂಭಕ್ಕೂ ಒಂದು ಮುಂಚಿತವಾಗಿಯೇ ಧೋನಿ ನಾಯಕತ್ವದಿಂದ ಕೆಳಗಿಳಿದರು. ಧೋನಿ ಬದಲಿಗೆ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮಾಹಿ ಘೋಷಿಸಿದರು. ಆದರೆ ನಾಯಕತ್ವದ ವಿಷಯದಲ್ಲಿ ಕೊಹ್ಲಿ ಮತ್ತು ಧೋನಿಗಿಂತ ರೋಹಿತ್ ಕತೆ ಕೊಂಚ ಭಿನ್ನವಾಗಿದೆ. ಮುಂಬೈ ಇಂಡಿಯನ್ಸ್​ ತಂಡಕ್ಕೆ 5 ಟ್ರೋಫಿಗಳನ್ನು ನೀಡಿರುವ ಹಿಟ್‌ಮ್ಯಾನ್ ರೋಹಿತ್​ರನ್ನು ಮುಂಬೈ ಮ್ಯಾನೇಜ್‌ಮೆಂಟ್ ಅರ್ಧದಲ್ಲೇ ನಾಯಕತ್ವದಿಂದ ತೆಗೆದುಹಾಕಿತು. ಇದರಿಂದ ರೋಹಿತ್​ ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ. ಆದರೆ, ನಾಯಕತ್ವದಿಂದ ಕೆಳಗಿಳಿದಿದ್ದು ರೋಹಿತ್ ಶರ್ಮ ವರವಾಗಿ ಪರಿಣಮಿಸಿದೆ.

    ಇಡೀ ವರ್ಷ ಟೀಂ ಇಂಡಿಯಾ ಪರ ಆಡುವಾಗ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ರೋಹಿತ್ ತುಂಬಾ ದಣಿದಿದ್ದಾರೆ. ಅವರು ಐಪಿಎಲ್‌ನಲ್ಲಿ 45 ದಿನಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಜೊತೆಗೆ ಬ್ಯಾಟ್ಸ್‌ಮನ್ ಆಗಿ ತುಂಬಾ ಬ್ಯುಸಿಯಾಗಿರುತ್ತಿದ್ದರು. ಹೀಗಾಗಿ ಹಿಟ್‌ಮ್ಯಾನ್ ಯಾವಾಗಲೂ ಗಂಭೀರವಾಗಿರುತ್ತಿದ್ದರು ಮತ್ತು ನಗುವುದನ್ನೇ ಮರೆತಿದ್ದರು. ಪಂದ್ಯ ನಡೆಯುವಾಗ ಕೆಲವೊಮ್ಮೆ ರೋಹಿತ್​ ಹತಾಶರಾಗಿರುತ್ತಿದ್ದರು. ಬಹುಶಃ ಗೆಲುವಿನ ಒತ್ತಡದಿಂದಾಗಿ ರೋಹಿತ್ ಮುಖದಲ್ಲಿ ನಗು ಇರುತ್ತಿರಲಿಲ್ಲ. ಬಿಗಿಯಾದ ವೇಳಾಪಟ್ಟಿಯಿಂದಾಗಿ, ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ರೋಹಿತ್​ ದಣಿದಿದ್ದಾರೆ.

    ಆದರೆ, ನಾಯಕತ್ವದ ಹೊರೆ ಕಳಚಿ ಬೀಳುತ್ತಿದ್ದಂತೆ ರೋಹಿತ್​ ಅವರಲ್ಲಿ ಹೊಸ ಬದಲಾವಣೆಯಾಗಿದೆ. ನೆಟ್​ ಪ್ರಾಕ್ಟಿಸ್​ ವೇಳೆ ರೋಹಿತ್ ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದನ್ನು ಇತ್ತೀಚೆಗೆ ನೀವು ಗಮನಿಸಿರಬಹುದು. ಹಾರ್ದಿಕ್ ಪಾಂಡ್ಯ ಅವರೊಂದಿಗಿನ ನಾಯಕತ್ವ ವಿವಾದದ ಹಿನ್ನೆಲೆಯಲ್ಲಿ, ಹಿಟ್‌ಮ್ಯಾನ್ ತಂಡದ ಆಟಗಾರರನ್ನು ಹೆಚ್ಚು ಭೇಟಿಯಾಗುತ್ತಿಲ್ಲ. ಜಸ್ಪ್ರೀತ್ ಬುಮ್ರಾ ಅವರಂತಹ ಒಬ್ಬರು ಅಥವಾ ಇಬ್ಬರು ಹಿರಿಯರೊಂದಿಗೆ ಮಾತ್ರ ರೋಹಿತ್​ ಇರುತ್ತಾರೆ.

    ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಅವರನ್ನು ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುವಂತೆ ನೂತನ ನಾಯಕ ಹಾರ್ದಿಕ್ ಪಾಂಡ್ಯ ಆದೇಶಿಸಿದರು. ಈ ವೇಳೆ ಮೊದಲಿಗೆ ಕೊಂಚ ಅಚ್ಚರಿ ವ್ಯಕ್ತಪಡಿಸಿದ ಹಿಟ್​ಮ್ಯಾನ್ ನಂತರ ಕೂಲ್ ಆಗಿ ಓಕೆ ಎಂದು ಹೇಳಿ ಫೀಲ್ಡಿಂಗ್ ಮಾಡಿದರು. ಒಂದು ವೇಳೆ ಹಾರ್ದಿಕ್ ಹೇಳಿದಾಗ ರೋಹಿತ್ ಇಲ್ಲ ಎಂದು ಹೇಳಿದ್ದರೆ ಅದು ಕೂಡ ದೊಡ್ಡ ವಿವಾದ ಆಗುತ್ತಿತ್ತು. ಆದರೆ ವಿವಾದಗಳಿಂದ ದೂರ ಉಳಿಯಲು ಬಯಸುವ ಹಿಟ್‌ಮ್ಯಾನ್, ಹಾರ್ದಿಕ್​ ಹೇಳಿದ್ದನ್ನು ಕೂಲ್ ಆಗಿಯೇ ಮಾಡಿದರು. ಅಲ್ಲದೆ, ನಾಯಕತ್ವದ ಹೊರೆಯೂ ಹೋಗಿದ್ದರಿಂದ ಬ್ಯಾಟಿಂಗ್​ನಲ್ಲೂ ರೋಹಿತ್​ ಅಬ್ಬರಿಸಿದರು. ಕೇವಲ 29 ಎಸೆತಗಳಲ್ಲಿ 43 ರನ್​ ಗಳಿಸಿದರು. ರೋಹಿತ್​ ಅವರು ಮುಕ್ತವಾಗಿ ಬ್ಯಾಟ್​ ಬೀಸುವಾಗ ಎದುರಾಳಿಗಳಿಗೆ ಅಪಾಯಕಾರಿಯಾಗಿ ಕಾಣುತ್ತಿದ್ದರು.

    ಇತ್ತೀಚೆಗೆ ರೋಹಿತ್ ತನ್ನ ಪತ್ನಿ ರಿತಿಕಾ ಸಾಜ್ದೇಹ್​ ಮತ್ತು ಮಗಳು ಸಮೈರಾ ಅವರೊಂದಿಗೆ ಹೋಳಿ ಆಚರಣೆಯಲ್ಲಿ ತುಂಬಾ ಜಾಲಿ ಮೂಡ್​ನಲ್ಲಿ ಕಾಣಿಸಿಕೊಂಡರು. ಹಿಂದೆಂದೂ ಈ ರೀತಿ ರೋಹಿತ್​ರನ್ನು ಕಂಡಿರಲಿಲ್ಲ. ಬಣ್ಣಗಳನ್ನು ಎರಚುತ್ತಾ ಕುಟುಂಬದೊಂದಿಗೆ ಸಖತ್​ ಎಂಜಾಯ್​ ಮಾಡಿದರು. ಇತ್ತೀಚಿನ ದಿನಗಳಲ್ಲಿ ಹಿಟ್‌ಮ್ಯಾನ್‌ ಈ ರೀತಿ ನಗುತ್ತಾ ನಿರಾಳವಾಗಿರುವುದನ್ನು ನೋಡಿದ್ದು ಇದೇ ಮೊದಲು ಎಂದು ಅವರ ಅಭಿಮಾನಿಗಳು ಕೂಡ ಹೇಳುತ್ತಾರೆ. ರೋಹಿತ್​ ಅವರನ್ನು ಎಂಐ ನಾಯಕತ್ವದಿಂದ ತೆಗೆದುಹಾಕಿರುವುದು ಹಿಟ್‌ಮ್ಯಾನ್‌ಗೆ ದೊಡ್ಡ ಪ್ಲಸ್ ಆಗಿದೆ ಎಂದು ನೆಟಿಜನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್​ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು

    ಈ 6 ಐಟಂಗಳು ನಿಮ್ಮ ಅಡುಗೆ ಮನೆಯಲ್ಲಿದ್ರೆ ಇಂದೇ ಬಿಸಾಡಿ! ಇಲ್ಲದಿದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ

    ಕ್ರಿಕೆಟ್​ ಬಿಟ್ಟು 2 ತಿಂಗಳು ಕೊಹ್ಲಿ ಹೇಗಿದ್ರು ಗೊತ್ತಾ? ನಿಜಕ್ಕೂ ಅದ್ಭುತ ಅನುಭವ ಎಂದ ವಿರಾಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts