More

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್​ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು

  ಚೆನ್ನೈ: ಇಳಯದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ಸಿನಿಮಾ “ಬಿಗಿಲ್​” ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಖ್ಯಾತ ನಿರ್ದೇಶಕ ಆಟ್ಲೀ ಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾ 2019ರ ಅಕ್ಟೋಬರ್​ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಲೇಡಿ ಸೂಪರ್ ಸ್ಟಾರ್​ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದರು. ಕ್ರೀಡೆ ಆಧಾರಿತ ಸಿನಿಮಾ ಆಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತು.

  ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ಪ್ರೇಕ್ಷಕರನ್ನು ಹುರಿದುಂಬಿಸಿತು. ಮಹಿಳೆಯರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಫುಟ್​ಬಾಲ್​ ಆಡಿ, ಟ್ರೋಫಿ ಗೆಲ್ಲುವುದು ಚಿತ್ರದ ಕತೆಯಾಗಿದ್ದು, ನಟ ವಿಜಯ್​ ಕೋಚ್​ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಾಮಾಜಿಕ ಸಂದೇಶವೂ ಇದ್ದು, ವಿಜಯ್​ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಯಿತು. ಈ ಸಿನಿಮಾದಲ್ಲಿ ತುಂಬಾ ಗಮನ ಸೆಳೆಯುವ ಪಾತ್ರಗಳಲ್ಲಿ ಪಾಂಡಿಯಮ್ಮನ ಪಾತ್ರವೂ ಕೂಡ ಒಂದು. ಇದೀಗ ಆ ಪಾಂಡಿಯಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಬಿಗಿಲ್​ ಸಿನಿಮಾದಲ್ಲಿ ಅಮೃತ ಅಯ್ಯರ್​, ವರ್ಷಾ ಬೊಲ್ಲಮ್ಮ ಹಾಗೂ ರೆವಾ ಮೋನಿಕಾ ಜಾನ್​ ಸಹ ನಟಿಸಿದ್ದಾರೆ. ಅದರಲ್ಲೂ ಈ ಸಿನಿಮಾ ನೋಡಿದವರಿಗೆ ಪಾಂಡಿಯಮ್ಮ ಹೆಸರು ನೆನಪಿರಲೇಬೇಕು. ತನ್ನ ದೈತ್ಯ ದೇಹದೊಂದಿಗೆ ಫುಟ್​ಬಾಲ್​ ಆಡುವ ಪಾಂಡಿಯಮ್ಮ ಅಲ್ಲಲ್ಲಿ ಕಾಮಿಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾಳೆ. ಅದರಲ್ಲೂ ನಟ ವಿಜಯ್​ ಅವರು ಪಾಂಡಿಯಮ್ಮಳನ್ನು ಕಿಚಾಯಿಸುವ ದೃಶ್ಯ ನೋಡುಗರಿಗೆ ತುಂಬಾ ಮಜಾ ಕೊಡುತ್ತದೆ.

  ಅಂದಹಾಗೆ ಪಾಂಡಿಯಮ್ಮಳ ನಿಜವಾದ ಹೆಸರು ಇಂದ್ರಜಾ ಶಂಕರ್​. ಈಕೆ ನಟ ರೋಬೋ ಶಂಕರ್​ ಅವರು ಮಗಳು. ಬಿಗಿಲ್​ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ಇಂದ್ರಜಾ ನಟಿಸಿದ್ದಾರೆ. ಆದರೆ, ಬಿಗಿಲ್​ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಮಾರ್ಚ್​ 24ರಂದು ಇಂದ್ರಜಾ, ತನ್ನ ಸ್ನೇಹಿತ ಹಾಗೂ ನಿರ್ದೇಶಕ ಕಾರ್ತಿಕ್​ ಎಂಬವರನ್ನು ಮದುವೆಯಾಗಿದ್ದಾರೆ. ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧಿಕರು, ಸೆಲೆಬ್ರಿಟಿಗಳು ಹಾಗೂ ಆಪ್ತ ಬಳಗ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು. ಇಂದ್ರಜಾ ಅವರು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿವೆ. ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

  ಅಂದಹಾಗೆ ಇಂದ್ರಜಾ ಮತ್ತು ಕಾರ್ತಿಕ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಸ್ವತಃ ಇಂದ್ರಜಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನ್ನ ತಂದೆ-ತಾಯಿಗಿಂತ ಕಾರ್ತಿಕ್​ ಹೆಚ್ಚಾಗಿ ಬೆಂಬಲಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದೇ ನಾನು ನಾಲ್ಕು ತಿಂಗಳ ನಂತರ ಕಾರ್ತಿಕ್ ಪ್ರೀತಿಯನ್ನು ಒಪ್ಪಿಕೊಂಡ ಎಂದು ಹೇಳಿದ್ದಾರೆ. ಅಂದಹಾಗೆ ಇಂದ್ರಜಾಗೆ ಕೇವಲ 20 ವರ್ಷ ವಯಸ್ಸು. 2003ರ ಮೇ 17ರಂದು ಜನಿಸಿದರು. ಕೇವಲ 20 ವರ್ಷ ವಯಸ್ಸು ಎಂಬುದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

  ಇಂದ್ರಜಾ ಅವರ ತಂದೆ ಶಂಕರ್​, ರೋಬೋ ಡ್ಯಾನ್ಸ್‌ಗೆ ಫೇಮಸ್ ಆಗಿರುವುದರಿಂದ ಅವರನ್ನು ಎಲ್ಲರೂ ರೋಬೋ ಶಂಕರ್ ಎಂದೇ ಕರೆಯುತ್ತಾರೆ. ಅಲ್ಲದೆ, ಕಾಮಿಡಿಯನ್​ ಕೂಡ ಆಗಿದ್ದಾರೆ. (ಏಜೆನ್ಸೀಸ್​)

  ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​! 4 ದಿನದಲ್ಲೇ ಕತಾರ್​​ ರಹಸ್ಯ ಬಯಲು

  ಆಕಾಶ್​ ಅಂಬಾನಿ ಮುಂದೆಯೇ ಹಾರ್ದಿಕ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೋಹಿತ್!​ ವಿಡಿಯೋ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts