More

    ಮನೆಮನೆಗೆ ಸೌಹಾರ್ದ ಬಸವ ಜ್ಯೋತಿ

    ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮ ಮಠದ ಆವರಣದಲ್ಲಿ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ನಿಯಮಿತದ ವತಿಯಿಂದ ಹುಣ್ಣಿಮೆಯ ಪ್ರಯುಕ್ತ ಪ್ರತಿ ತಿಂಗಳು ನಡೆಯುವ 143ನೇ ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ ಮನೆಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮವವು ಸೋಮವಾರ ಕದಂಬ ಜಂಗಮ ಮಠದ ಮುಖ್ಯಸ್ಥ ಶ್ರೀ ರೇಣುಕಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.

    ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ನಾಗರಾಜು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಮೌಲ್ಯಯುತ ವಚನಗಳನ್ನು ಮನೆಗಳಲ್ಲಿ ಮಕ್ಕಳಿಗೆ ಹಾಗೂ ಕುಟುಂಬ ಸದಸ್ಯರೆಲ್ಲರಿಗೂ ಬೋಧಿಸಿರುವುದರಿಂದ ವ್ಯಕ್ತಿಗತ ಸುಧಾರಣೆ ಆಗುತ್ತದೆ ಎಂದು ಹೇಳಿದರು.
    ಬಸವಣ್ಣನವರು ಶಿಕ್ಷಣಕ್ಕೆ ಮಹತ್ತರ ಹಾಗೂ ಮೌಲ್ಯಯುತ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ವಚನಗಳು ಪ್ರಾಣ ಇದ್ದಂತೆ, ಅವುಗಳೆಲ್ಲವನ್ನೂ ಸಂರಕ್ಷಿಸುವ ಹೊಣೆ ನಮ್ಮದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

    ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆಲ್ಲಾ ಅನ್ನಸಂತರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರುದ್ರಸ್ವಾಮಿ, ಉಪಾಧ್ಯಕ್ಷ ಡಿ.ದ್ಯಾವಣ್ಣ, ವೀರಶೈವ ಜನಾಂಗದ ಮುಖಂಡರಾದ ಬಸವಣ್ಣ, ಮಹದೇವಯ್ಯ, ಮಧುಸೂದನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts