More

    ಮಗಳಿದ್ರೂ ಪರ್ವಾಗಿಲ್ಲ ಮೀನಾ ಓಕೆ ಅಂದ್ರೆ ನಾನು ರೆಡಿ ಎಂದ ಯೂಟ್ಯೂಬರ್! ಈತನ ಅವಾಂತರ ಒಂದೆರಡಲ್ಲ

    ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.

    ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಸಿನಿಮಾ ರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

    ಎರಡನೇ ಮದುವೆ ವದಂತಿ
    ಪತಿ ವಿದ್ಯಾಸಾಗರ್ ನಿಧನರಾದಾಗಿನಿಂದ ಮೀನಾ ಬಗ್ಗೆ ನಾನಾ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲಿ ಎರಡನೇ ಮದುವೆಯಾಗುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಮೀನಾ ಅವರು ನಾಯಕ ಧನುಷ್ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಗೊತ್ತೇ ಇದೆ. ಈ ಬಗ್ಗೆ ಮೀನಾ ಕೂಡ ಪ್ರತಿಕ್ರಿಯೆ ನೀಡಿದ್ದು, ದಯವಿಟ್ಟು ಇಂತಹ ಸುದ್ದಿ ಹಬ್ಬಿಸಬೇಡಿ, ಇದರಿಂದ ತನಗೆ ಹಾಗೂ ಕುಟುಂಬದವರಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಆದರೂ ವದಂತಿಗಳು ಮಾತ್ರ ಇನ್ನೂ ನಿಂತಿಲ್ಲ.

    ಓಕೆ ಅಂದ್ರೆ ಮದುವೆ ಆಗುವೆ
    ವದಂತಿಗಳ ನಡುವೆಯೇ ಕೇರಳ ಮೂಲದ ಸಿನಿಮಾ ವಿಮರ್ಶಕ ಮತ್ತು ಯೂಟ್ಯೂಬರ್​ ಸಂತೋಷ್​ ವಾರ್ಕಿ ಆಡಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ. ಅಷ್ಟಕ್ಕೂ ಸಂತೋಷ್​ ಹೇಳಿದ್ದೇನು ಎಂಬುದನ್ನು ನೋಡುವುದಾದರೆ, ಮೀನಾ ಅವರು ಒಪ್ಪಿಕೊಂಡರೆ, ಅವರನ್ನು ಮದುವೆಯಾಗಿ ಮತ್ತೊಂದು ಬಾಳು ಕೊಡ್ತೀನಿ ಎಂದಿದ್ದಾನೆ. ಮೀನಾ ಅವರಿಗೆ ಮಗಳಿದ್ದರೂ ನನಗೇನೂ ತೊಂದರೆ ಇಲ್ಲ, ಮೀನಾ ಅವರು ಮಂಜು ವಾರಿಯರ್​ ರೀತಿಯ ಒಳ್ಳೆಯ ಮಹಿಳೆ ಎಂದು ಸಂತೋಷ್​ ಕಾಮೆಂಟ್​ ಮಾಡಿದ್ದಾನೆ. ಇದೀಗ ಈ ಕಾಮೆಂಟ್​ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತದೆ.

    ನಿತ್ಯಾ ಮೆನನ್​ ಬಗ್ಗೆಯೂ ಕಾಮೆಂಟ್​
    ಈ ಹಿಂದೆಯೂ ಒಮ್ಮೆ ಸಂತೋಷ್​ ಭಾರಿ ಸುದ್ದಿಯಾಗಿದ್ದ. ಮದುವೆ ಆಗಲು ಅನುಮತಿ ಕೇಳಲು ನಿತ್ಯಾ ಮನೆಗೆ ಹೋಗಿದ್ದನು ಎಂದು ಸುದ್ದಿಯಾಗಿತ್ತು. ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್​ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್​ ಮಾಡಿ, ನಿತ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾನು ಇನ್ನೆಂದಿಗೂ ನಿತ್ಯಾ ಮೆನನ್​ ಅವರನ್ನು ಮದುವೆ ಆಗುವುದಿಲ್ಲ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್​ ನಂಬರ್​ ಅನ್ನು ಕೊಡಬಹುದಿತ್ತು ಎಂದು ಬರೆದುಕೊಂಡಿದ್ದ. ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್​ ಟೀಕಿಸಿದ್ದರು.

    ನಿತ್ಯಾ ಮೆನನ್​ ಪ್ರತಿಕ್ರಿಯೆ
    ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದ ನಿತ್ಯಾ, ಸಂತೋಷ್​ ವಾರ್ಕಿ ಹೆಸರೇಳದೆ ಗಂಭೀರ ಆರೋಪ ಮಾಡಿದ್ದರು. ನಾನು ಸಹಿಸಲಾಗದಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ಬಹಳ ಸಮಯದಿಂದಲೂ ಆತ ತುಂಬಾ ಕಿರುಕುಳ ನೀಡುತ್ತಿದ್ದ. ಆತ ವೈರಲ್​ ಆದ ಬಳಿಕ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾನೆ. ನನ್ನ ಪಾಲಕರನ್ನು ಹೆಸರನ್ನು ಉಲ್ಲೇಖಿಸುವ ಮೂಲಕ ಅವರಿಗೆ ಹಿಂಸೆ ಕೊಟ್ಟಿದ್ದಾನೆ. ತುಂಬಾ ಕ್ರೂರವಾಗಿ ಮಾತನಾಡುತ್ತಿದ್ದಾನೆ. ಈವರೆಗೂ ಆತನ 30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ. ಅವನನ್ನು ನಂಬುವವರು ಮತ್ತು ಆತನ ಮಾತುಗಳನ್ನು ನಂಬುವವರು ನಿಜವಾಗಿಯೂ ಮೂರ್ಖರು. ಆತನ ವಿರುದ್ಧ ದೂರು ನೀಡುವಂತೆ ಅನೇಕರು ಹೇಳಿದರು. ಆದರೆ, ಬೇಡ ಎಂದು ಆತನನ್ನು ಕ್ಷಮಿಸಿದ್ದೇನೆ ಎಂದು ನಿತ್ಯಾ ಅಸಮಾಧಾನ ಹೊರಹಾಕಿದ್ದರು.

    ನಿತ್ಯಾ ಆರೋಪಕ್ಕೂ ತಿರುಗೇಟು
    ನಿತ್ಯಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಂತೋಷ್​ ವಾರ್ಕಿ, ನಾನು 30ಕ್ಕೂ ಹೆಚ್ಚು ನಂಬರ್​ನಿಂದ ಕರೆ ಮಾಡಿ ಕಿರುಕುಳ ನೀಡಿರುವುದಾಗಿ ನಿತ್ಯಾ ಹೇಳಿದ್ದಾರೆ. ಆದರೆ, ಓರ್ವ ವ್ಯಕ್ತಿ ತನ್ನ ಹೆಸರಲ್ಲಿ ಎಷ್ಟು ಸಿಮ್​ಗಳನ್ನು ತೆಗೆದುಕೊಳ್ಳಬಹುದು ಎಂದು ಜನರೇ ಯೋಚಿಸುತ್ತಾರೆ. ನಿತ್ಯಾ ಈಗಾಗಲೇ ಪ್ರೀತಿಯಲ್ಲಿ ಇರುವ ಬಗ್ಗೆ ಅವರ ತಾಯಿ ಹೇಳಿದ್ದಾರೆ. ಆದರೆ, ಆಕೆ ಯಾರೊಂದಿಗೂ ಎಂಗೇಜ್​ ಆಗಿಲ್ಲ ಎಂದು ಅವರ ತಂದೆ ಹೇಳುತ್ತಾರೆ. ಅವರ ಮನೆಯಲ್ಲಿ ವಿಭಿನ್ನ ಅಭಿಪ್ರಾಯ ಇರುವುದನ್ನು ನೋಡಿ ನಾನು ಗೊಂದಲಕ್ಕೆ ಒಳಗಾದೆ. ನನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುತ್ತಾರೆ ಎಂಬುದು ನನಗೆ ತಿಳಿದಿದೆ. ನನ್ನ ತಂದೆ ಮರಣದ ನಂತರ ನಾನು ಯಾರ ತಂಟೆಗು ಹೋಗದೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಅವಳ ಬಗ್ಗೆ ಮೊದಲೇ ನನಗೆ ತಿಳಿದಿದ್ದರೆ, ನಾನು ಅವಳನ್ನು ಪ್ರೀತಿಸುತ್ತಿರಲಿಲ್ಲ ಮತ್ತು ಅವಳನ್ನು ಹಿಂಬಾಲಿಸುತ್ತಿರಲಿಲ್ಲ ಎಂದು ಸಂತೋಷ್​ ಹೇಳಿದ್ದರು.

    ಹನಿರೋಸ್​ ಬಗ್ಗೆಯೂ ಕಾಮೆಂಟ್​
    ಇತ್ತೀಚೆಗಷ್ಟೇ ಸಂತೋಷ್​ ವಾರ್ಕಿ, ಕಾರ್ಯಕ್ರಮವೊಂದರಲ್ಲಿ ನಟಿ ಹನಿರೋಸ್​ ಭೇಟಿಯಾಗಿದ್ದರು. ಈ ವೇಳೆ ಹನಿ ರೋಸ್​ ಎದ್ದು ನಿಂತು ಸಂತೋಷ್​ಗೆ ಶೇಕ್​ ಹ್ಯಾಂಡ್​ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೇ ಸಂದರ್ಭದಲ್ಲಿ ಸಂತೋಷ್​, ಹನಿ ರೋಸ್​ ಬಗ್ಗೆ ಮಾತನಾಡಿರುವ ಇನ್ನೊಂದು ವಿಡಿಯೋ ವೈರಲ್​ ಆಗಿತ್ತು. ಹನಿ ರೋಸ್ ನೋಡಲು​ ತುಂಬಾ ಹಾಟ್​ ಮತ್ತು ಸೆಕ್ಸಿ ಎಂದಿದ್ದರು. ನಮ್ಮ ಇಂದ್ರಿಯಗಳನ್ನು ಕೆರಳಿಸುವ ದೇಹದ ಆಕಾರವನ್ನು ಹೊಂದಿದ್ದಾರೆ ಎನ್ನುವ ಮೂಲಕ ಹನಿ ರೋಸ್​ ಅವರ ನಿತಂಬ ಮತ್ತು ಎದೆಯ ಬಗ್ಗೆ ಕಾಮದ ಮಾತುಗಳನ್ನಾಡಿದ್ದರು. ನಮ್ಮ ಭಾವನೆಗಳನ್ನು ಕೆರಳಿಸುವಂತಹ ಪಾತ್ರಗಳನ್ನು ಹನಿ ರೋಸ್​ ಮಾಡುತ್ತಿದ್ದಾರೆ. ಅವರು ಮುಂದಿನ ಸಿಲ್ಕ್ ಸ್ಮಿತಾ ಆಗಲಿದ್ದಾರೆ. ಇದಿಷ್ಟೇ ಅಲ್ಲದೆ, ಹನಿ ರೋಸ್ ಯುವಕರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದಿದ್ದರು.

    ಅಂದಹಾಗೆ ಈ ಸಂತೋಷ್​ ವಾರ್ಕಿ, ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್​ಲಾಲ್​ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಅಲ್ಲದೆ, ಪ್ರಚಾರಕ್ಕಾಗಿ ಈ ರೀತಿ ಏನೇನೋ ಮಾತನಾಡುತ್ತಿರುತ್ತಾರೆ ಎಂಬ ಆರೋಪವೂ ಸಂತೋಷ್​ ವಾರ್ಕಿ ಮೇಲಿದೆ. (ಏಜೆನ್ಸೀಸ್​)

    ದಯವಿಟ್ಟು ಈ ರೀತಿ ಮಾಡ್ಬೇಡಿ ತುಂಬಾ ನೋವಾಗಿದೆ! ಕ್ಯಾಮೆರಾ ಮುಂದೆ ನಟಿ ಮೀನಾ ಕಣ್ಣೀರು

    ‘ನಿನ್ನ ಗಂಡನನ್ನು ಒಂದು ರಾತ್ರಿ ಕಳಿಸು’!: ಅಭಿಮಾನಿಗೆ ನಟಿ ಜೋತಿಕಾ ಕೊಟ್ಟ ಉತ್ತರ ಹೀಗಿತ್ತು ನೋಡಿ..

    ಮದುವೆಯಾಗದೆ ತಾಯಿಯಾದೆ, 23ರ ಹರೆಯದಲ್ಲಿ ಎಲ್ಲವನ್ನೂ ನೋಡಿದೆ ಎಂದ್ರು ಶಕೀಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts