More

    ‘ನಿನ್ನ ಗಂಡನನ್ನು ಒಂದು ರಾತ್ರಿ ಕಳಿಸು’!: ಅಭಿಮಾನಿಗೆ ನಟಿ ಜೋತಿಕಾ ಕೊಟ್ಟ ಉತ್ತರ ಹೀಗಿತ್ತು ನೋಡಿ..

    ಚೆನ್ನೈ: ಹಿರಿಯ ನಟಿ ಜ್ಯೋತಿಕಾ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಮತ್ತೆ ಸಾಲು ಸಾಲಾಗಿ ಸಿನಿಮಾಗಳನ್ನು ಮಾಡಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡ್ಮೂರು ಚಿತ್ರಗಳಲ್ಲಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ. ಸಕ್ಸಸ್ ಎಂಜಾಯ್ ಮಾಡುತ್ತಿರುವ ಈ ನಟಿ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳೊಂದಿಗೆ ಕಾಮೆಂಟ್ಸ್​ ಮಾಡುತ್ತಾರೆ. ಇದೇ ಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು, ‘ನಿಮ್ಮ ಪತಿ ಸೂರ್ಯನನ್ನು ರಾತ್ರಿಗೆ ಕಳುಹಿಸು ವಿಶ್​ ಮಾಡ್ತೇನೆ’ ಎಂದು ವಿಚಿತ್ರವಾಗಿ ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ ಶಾಕಿಂಗ್ ಉತ್ತರ ನೀಡಿದ್ದಾರೆ. ಸದ್ಯ ಈ ಪೋಸ್ಟ್ ನೆಟ್ ನಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್​, ಮತ್ತಿತರ ಪಾತ್ರದಾರಿಗಳು!

    ಚಿತ್ರರಂಗದ ಸ್ಟಾರ್ ಜೋಡಿಗಳಲ್ಲಿ ಸೂರ್ಯ-ಜ್ಯೋತಿಕಾ ಕೂಡ ಒಂದು. 2006 ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಸೂರ್ಯ ಈಗ ಸ್ಟಾರ್ ಹೀರೋ ಆಗಿದ್ದಾರೆ. ಅದರಲ್ಲೂ ಹುಡುಗಿಯರಲ್ಲಿ ಸಾಕಷ್ಟು ಕ್ರೇಜ್ ಗಳಿಸಿದ್ದಾರೆ. ಆದರೆ ಜ್ಯೋತಿಕಾ ಚಿತ್ರರಂಗದಿಂದ ಬಿಡುವು ಮಾಡಿಕೊಂಡು ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

    ಆದರೆ ಇಷ್ಟು ವರ್ಷ ತುಂಬಾ ಆತ್ಮೀಯವಾಗಿದ್ದ ಈ ಜೋಡಿ ಈಗ ಬೇರೆಯಾಗಲಿದೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಸೂರ್ಯ ಅವರ ಕುಟುಂಬದ ಸದಸ್ಯರೊಂದಿಗೆ ಹೊಂದಿಕೊಳ್ಳಲು ಜ್ಯೋತಿಕಾಗೆ ಸಾಧ್ಯವಾಗಲಿಲ್ಲ. ಹೀಗಾಗಿಯೇ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಯಿತು ಎಂಬ ಸುದ್ದಿಯೂ ಹರಡಿತು. ಆದರೆ ಈ ವದಂತಿಗಳಿಗೆ ದಂಪತಿ ಫುಲ್​ಸ್ಟಾಪ್​ ಹಾಕಿದ್ದಾರೆ.

    ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಅವರು ಒಟ್ಟಿಗೆ ಇರುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಯಾವುದೇ ಜಗಳವಿಲ್ಲದೇ ಮುಂಬೈಗೆ ಶಿಫ್ಟ್ ಆಗಲು ಬೇರೆ ಕಾರಣವಿದೆ ಎಂದೂ ಹೇಳಿದ್ದಾರೆ.

    ಇನ್ನು ಈ ನಡುವೆ ಜ್ಯೋತಿಕಾ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗ್ಲಾಮರ್ ಪಾತ್ರಗಳ ಹೊರತಾಗಿ, ಅವರು ನಟನೆಗೆ ಆದ್ಯತೆ ನೀಡುವ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೇ ಎರಡ್ಮೂರು ಚಿತ್ರಗಳಲ್ಲಿ ನಟಿಸಿದ್ದು ಹಿಟ್‌ ಆಗಿವೆ. ನಿರ್ಮಾಪಕಿಯಾಗಿಯೂ ಸೂರ್ಯ ಮತ್ತು ಜ್ಯೋತಿಕಾ ಮಿಂಚುತ್ತಿದ್ದಾರೆ.

    ಇತ್ತೀಚೆಗಷ್ಟೇ ಸೈತಾನ್ ಚಿತ್ರದ ಮೂಲಕ ಜ್ಯೋತಿಗೆ ಬಾಲಿವುಡ್ ನಲ್ಲಿ ಮತ್ತೊಂದು ಹಿಟ್ ಸಿಕ್ಕಿದೆ. ಇದರಲ್ಲಿ ಮಾಧವನ್ ಮತ್ತು ಅಜಯ್ ದೇವಗನ್ ಒಟ್ಟಿಗೆ ನಟಿಸಿದ್ದಾರೆ.
    ಯಶಸ್ಸಿನ ಖುಷಿಯಲ್ಲಿರುವ ಜ್ಯೋತಿಕಾ, ಸೂರ್ಯ, ಮಾಧವನ್ ಮತ್ತು ಅಜಯ್ ದೇವ್ ಗನ್ ಒಟ್ಟಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಯೊಬ್ಬ ತನ್ನ ವಿಚಿತ್ರ ಆಸೆಯನ್ನು ಬಹಿರಂಗಪಡಿಸಿದ್ದಾಳೆ. ಒರು ಕಾದಲ್ ಸಿನಿಮಾದಂತೆ ನಿಮ್ಮ ಪತಿ ಸೂರ್ಯನನ್ನು ಒಂದು ದಿನ ನನಗೆ ಕಳುಹಿಸಿ ಎಂದು ಕೇಳಿದ್ದಾಳೆ.

    ಇದಕ್ಕೆ ಜ್ಯೋತಿಕಾ ಉತ್ತರಿಸಿದ್ದು, ‘ಹಾಗೆ ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. ಜ್ಯೋತಿಕಾ ಉತ್ತರ ನೀಡಿದಾಗ ಅಭಿಮಾನಿಯ ಸಂತಸಕ್ಕೆ ಮಿತಿಯೇ ಇರಲಿಲ್ಲ. ನೀವು ಉತ್ತರ ನೀಡಿದ್ದೇ ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ ಎಂದು ಉತ್ತರಿಸಿದದ್ದಾಳೆ.

    ಜ್ಯೋತಿಕಾ ಉತ್ತರದೊಂದಿಗೆ, ಅಭಿಮಾನಿ ಮತ್ತೊಮ್ಮೆ ಸೂರ್ಯನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಆಗ ಜ್ಯೋತಿಕಾ ‘ಇದು ರೀಲ್ ಲೈಫ್ ಅಲ್ಲ, ರಿಯಲ್ ಲೈಫ್’ ಎಂದು ಉತ್ತರಿಸಿದ್ದಾರೆ. ಇದರೊಂದಿಗೆ ದಂಪತಿ ನಡುವೆ ಮನಸ್ತಾಪವಿದೆ ಎಂಬ ಅನುಮಾನವೂ ದೂರವಾದಂತಾಗಿದೆ.

    ಪ್ರಸ್ತುತ ಸೂರ್ಯ ಕಂಗುವಾ ಎಂಬ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ನಿರ್ದೇಶಕ ಶಿವ ನಿರ್ದೇಶನ ಮಾಡುತ್ತಿದ್ದಾರೆ.

    ಕೇಂದ್ರದ ಅದ್ಭುತ ಯೋಜನೆ.. ರೈತರು ಪ್ರತಿ ತಿಂಗಳು 3 ಸಾವಿರ ರೂ. ಪಡೆಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts