More

    ‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್​, ಮತ್ತಿತರ ಪಾತ್ರದಾರಿಗಳು!

    ಮುಂಬೈ: ರಾಮಾಯಣ ಚಿತ್ರೀಕರಣಕ್ಕೆ ಮುನ್ನ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಮಿತಿಗೊಳಿಸಿದ್ದಾರೆ.

    ಇದನ್ನೂ ಓದಿ: ಇಸ್ಲಾಮಿಕ್​ ಉಗ್ರರ ಕೃತ್ಯ..300 ಅಪಹೃತ ಶಾಲಾ ಮಕ್ಕಳು 2ವಾರದ ನಂತರ ಬಿಡುಗಡೆ!

    ನಿತೇಶ್ ತಿವಾರಿ ನಾಯಕತ್ವದ ತಂಡವು ‘ರಾಮಾಯಣ’ ಚಿತ್ರೀಕರಣವನ್ನು ಏಪ್ರಿಲ್ ಮಧ್ಯದಿಂದ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕೂ ಮೊದಲು, ಪ್ರಮುಖ ಪಾತ್ರಧಾರಿಗಳಾದ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಸಾರ್ವಜನಿಕ ಪ್ರದರ್ಶನಗಳನ್ನು ಸೀಮಿತಗೊಳಿಸುತ್ತಿದ್ದಾರೆ. ಹೀಗಿರಲು ಸ್ವತಃ ನಿರ್ಮಾಪಕ ನಿತೇಶ್ ತಿವಾರಿ ಸೂಚಿಸಿದ್ದಾರೆ ಎನ್ನಲಾಗಿದೆ.

    ಹಿಂದು ಮಹಾಕಾವ್ಯ ರಾಮಾಯಣವನ್ನು ಚಲನಚಿತ್ರವನ್ನಾಗಿಸುತ್ತಿರುವ ಈ ಸಂದರ್ಭದಲ್ಲಿ ತಿವಾರಿ ಪ್ರಭಾವಶಾಲಿ ನಟರನ್ನು ಒಟ್ಟುಗೂಡಿಸಿದ್ದಾರೆ. ಇದು ಪೌರಾಣಿಕ ಮತ್ತು ಭಕ್ತಿಪ್ರಧಾನವಾಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಿರುತ್ತದೆ. ಹೀಗಾಗಿ ತಂಡ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ನಿರ್ಮಾಪಕರ ಮಾತಾಗಿದೆ.

    ಇನ್ನು ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ಶ್ರೀರಾಮ ಚಂದ್ರನ ಪಾತ್ರ ನಿರ್ವಹಿಸಲಿದ್ದಾರೆ, ಸಾಯಿ ಪಲ್ಲವಿ ಸೀತಾ ದೇವಿಯಾಗಿ, ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ. ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ನಟಿಸುವ ಸಾಧ್ಯತೆಯಿದೆ. ಚಿತ್ರತಂಡದ ಪ್ರಕಾರ ಮುಂದಿನ ತಿಂಗಳಿನಿಂದ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಹೀಗಾಗಿ ಪಾತ್ರವರ್ಗದವರನ್ನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

    ಇನ್ನು ಚಿತ್ರ ತಂಡವು ಚಿತ್ರಕ್ಕಾಗಿ ತಯಾರಿ ಮತ್ತು ಇತರ ಪಾತ್ರಗಳಿಗೆ ಕಲಾವಿದರನ್ನು ಗುರುತಿಸುವ ಕೆಲಸದಲ್ಲಿ ನಿರತವಾಗಿದೆ. ಏಪ್ರಿಲ್ ಮಧ್ಯದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ, ಹೆಚ್ಚಿನ ಚಿತ್ರೀಕರಣವು ಫಿಲ್ಮ್ ಸಿಟಿ, ಮುಂಬೈನಲ್ಲಿ ನಿರ್ಮಿಸಲಾದ ದೈತ್ಯಾಕಾರದ ಸೆಟ್‌ಗಳಲ್ಲಿ ನಡೆಯುತ್ತದೆಯಂತೆ.

    ಸನ್ನಿ ಡಿಯೋಲ್, ಬಾಬಿ ಡಿಯೋಲ್, ರಾಕುಲ್ ಪ್ರೀತ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ನಟರು ಸಹ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಏಪ್ರಿಲ್ 17 ರಂದು ಶ್ರೀರಾಮವಮಿಯಂದು ಚಿತ್ರದ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.

    ಇದಕ್ಕೂ ಮೊದಲು, ರಣಬೀರ್ ಕಪೂರ್ ಲೈವ್ ಚಾಟ್‌ನಲ್ಲಿ ಚಿತ್ರವು ಅದ್ಧೂರಿಯಾಗಿರಲಿದೆ. ಅಷ್ಟೇ ಅಲ್ಲ, ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ.

    ನಿತೇಶ್ ನೇತೃತ್ವದ ತಂಡವು ಹಲವಾರು ತಿಂಗಳುಗಳಿಂದ ಮುಂಬೈ ಮತ್ತು ಲಾಸ್ ಏಂಜಲೀಸ್‌ನಲ್ಲಿ ಸ್ಥಳಗಳ ವೀಕ್ಷಣೆ ಮತ್ತು ಪೂರ್ವಾಭ್ಯಾಸ ಸೇರಿದಂತೆ ವ್ಯಾಪಕ ಸಿದ್ಧತೆಗಳನ್ನು ನಡೆಸುತ್ತಿದೆ. ಚಿತ್ರವನ್ನು ದೀಪಾವಳಿ 2025 ರ ಆಸುಪಾಸಿನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ,

    ಈ ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆಯಲಿದೆ ಎಂಬ ಆಶಾಭಾವ ತಂಡಕ್ಕಿದೆ.

    ಕೇಂದ್ರದ ಅದ್ಭುತ ಯೋಜನೆ.. ರೈತರು ಪ್ರತಿ ತಿಂಗಳು 3 ಸಾವಿರ ರೂ. ಪಡೆಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts