More

    ಇಸ್ಲಾಮಿಕ್​ ಉಗ್ರರ ಕೃತ್ಯ..300 ಅಪಹೃತ ಶಾಲಾ ಮಕ್ಕಳು 2ವಾರದ ನಂತರ ಬಿಡುಗಡೆ!

    ಅಬುಜಾ(ನೈಜೀರಿಯಾ): ವಾಯುವ್ಯ ನೈಜೀರಿಯಾದ ಕಡುನಾ ರಾಜ್ಯದಲ್ಲಿ ಶಾಲೆಯಿಂದ ಅಪಹರಣಕ್ಕೊಳಗಾದ 287 ಶಾಲಾ ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲ ಭಾನುವಾರ ಹೇಳಿದ್ದಾರೆ.

    ಇದನ್ನೂ ಓದಿ: ಕೇಂದ್ರದ ಅದ್ಭುತ ಯೋಜನೆ.. ರೈತರು ಪ್ರತಿ ತಿಂಗಳು 3 ಸಾವಿರ ರೂ. ಪಡೆಯಬಹುದು!

    ಕಡೂನಾದ ಕುರಿಗಾ ಪಟ್ಟಣದಲ್ಲಿನ ಶಾಲೆಯಿಂದ ಮಾರ್ಚ್ 7 ರಂದು ಮಕ್ಕಳನ್ನು ಅಪಹರಣ ಮಾಡಲಾಗಿತ್ತು. ಮಕ್ಕಳನ್ನು ಯಾವುದೇ ಹಾನಿ ಮಾಡದ ಬಿಡುಗಡೆ ಮಾಡಲಾಗಿದೆ ಎಂದು ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಉತ್ತರ ನೈಜೀರಿಯಾದ ಶಾಲೆಗಳಿಂದ ವಿದ್ಯಾರ್ಥಿಗಳ ಅಪಹರಣಗಳು ಸಾಮಾನ್ಯವಾಗಿದೆ. 2014 ರಿಂದ ಇಸ್ಲಾಮಿಕ್ ಉಗ್ರಗಾಮಿಗಳು ಬೊರ್ನೊ ರಾಜ್ಯದ ಚಿಬೊಕ್ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಅಪಹರಿಸಿದ್ದರು.

    ಇತ್ತೀಚಿನ ವರ್ಷಗಳಲ್ಲಿ ಅಪಹರಣಗಳು ದೇಶದ ವಾಯುವ್ಯ ಮತ್ತು ಮಧ್ಯ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಅಲ್ಲಿ ಡಜನ್‌ಗಟ್ಟಲೆ ಸಶಸ್ತ್ರ ಗುಂಪುಗಳು ಸಾಮಾನ್ಯವಾಗಿ ಗ್ರಾಮಸ್ಥರು ಮತ್ತು ಪ್ರಯಾಣಿಕರನ್ನು ಸುಲಿಗೆಗಾಗಿ ಗುರಿಯಾಗಿಸಿಕೊಳ್ಳುತ್ತವೆ.

    ಅರುಣಾಚಲದ ಮೇಲೆ ಚೀನಾ ಹಕ್ಕು ಸ್ಥಾಪನೆ ‘ಹಾಸ್ಯಾಸ್ಪದ’: ಸಿಂಗಾಪುರದಲ್ಲಿ ಜೈಶಂಕರ್ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts