More

    “ವೀಳ್ಯದೆಲೆ ಪಲಾವ್​”ಮಾಡಿದ್ರೆ ರುಚಿ ಜತೆ ಆರೋಗ್ಯವು ನಿಮ್ಮದಾಗುತ್ತದೆ…

    ಬೆಂಗಳೂರು: ವೀಳ್ಯದೆಲೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳಿವೆ. ಇದನ್ನು ಸೇವಿಸುವುದರಿಂದ ಗಂಭೀರ ಸೋಂಕುಗಳನ್ನು ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.

    ಊಟದ ನಂತರ ವೀಳ್ಯದೆಲೆ ಜತೆ ಅಡಿಕೆ ಸೇವನೆ ಮಾಡುತ್ತಾರೆ. ಆದರೆ ವೀಳ್ಯದೆಲೆಯಿಂದ ಕೆಲವು ರುಚಿಯಾದ ರೆಸಿಪಿಯನ್ನು ತಯಾರಿಸಬಹುದು ಎನ್ನುವುದು ನಿಮಗೆ ತಿಳಿದಿದ್ಯಾ?  ವೀಳ್ಯದೆಲೆ ಪಲಾವ್​, ಪುಳಿಯೋಗರೆ, ಚಿತ್ರಾನ್ನ ಮಾಡುತ್ತಾರೆ. ನಾವು ಇಂದು ನಿಮಗೆ ವೀಳ್ಯದೆಲೆ  ಬಳಸಿ ಮಾಡುವ ಈ ರೈಸ್​ ಕುರಿತಾಗಿ ಇಂದು ಹೇಳುತ್ತೇವೆ. ಈ ಐಟಂ ಸವಿಯಲು ರುಚಿ ಜತೆ ಆರೋಗ್ಯವನ್ನು ನೀಡುತ್ತದೆ.

    ಬೇಕಾಗುವ ಸಾಮಗ್ರಿಗಳು:
    ವೀಳ್ಯದೆಲೆ- 5
    ಈರುಳ್ಳಿ- 1 ಕಪ್
    ಸಾಸಿವೆ-1 ಟೀಸ್ಪೂನ್
    ಅಕ್ಕಿ- 2ಕಪ್
    ಬೆಳ್ಳುಳ್ಳಿ-2
    ಕೆಂಪು ಮೆಣಸು-4
    ಎಳ್ಳು-2 ಚಮಚ
    ಅರಿಶಿಣ- 1ಚಮಚ
    ಗೋಡಂಬಿ- 5
    ಜೀರಿಗೆ- 1 ಚಮಚ
    ಉಪ್ಪು – ರುಚಿಗೆತಕ್ಕಷ್ಟು
    ಅಡುಗೆ ಎಣ್ಣೆ- ಅರ್ಧ ಕಪ್

    ಉದ್ದಿನ ಬೇಳೆ- 1 ಚಮಚ ( ಬೇಕಾದಲ್ಲಿ ನಿಮಗೆ ಇಷ್ಟವಾದ ತರಕಾರಿಗಳನ್ನು ಸೇರಿಸಿಕೊಳ್ಳಬಹುದು)

    ಮಾಡುವ ವಿಧಾನ:  ಅಕ್ಕಿಯನ್ನು ತೊಳೆದು ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಿ.

    ಒಂದು ಪಾತ್ರೆಗೆ ಬೆಳ್ಳುಳ್ಳಿ, ಒಣ ಮೆಣಸು ಹಾಗೂ ಉದ್ದಿನ ಬೇಳೆ, ಎಳ್ಳು ಇವುಗಳನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಆ ಎಲ್ಲಾ ಹುರಿದ ಪದಾರ್ಥಗಳನ್ನುಚೆನ್ನಾಗಿ ಪುಡಿ ಮಾಡಿಕೊಳ್ಳಿ.

    ಕುಕ್ಕರ್​ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಐದು ವೀಳ್ಯದೆಲೆಗಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕಟ್​ ಮಾಡಿಹಾಕಿ, ನಂತರ ಮಿಕ್ಸಿಯಲ್ಲಿ ಮಾಡಿಟ್ಟುಕೊಂಡ ಪೌಡರ್ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ. ಬೇಕಾದಲ್ಲಿ ನಿಮಗೆ ಇಷ್ಟವಾದ ತರಕಾರಿಗಳನ್ನು ಸೇರಿಸಿಕೊಳ್ಳಬಹುದು

    ನಂತರ ಇದೆ ಕುಕ್ಕರ್​ಗೆ ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಇಡಿ, ಮೂರು ಸೀಟಿ ಆದರೆ ರುಚಿಯಾ ಪಲಾವ್​ ಸವಿಯಲು ಸಿದ್ಧವಾಗುತ್ತದೆ.

    ಅಬ್ಬಬ್ಬಾ.. ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತಾ? ನಿಮ್ಮ ಊಹೆಗೂ ನಿಲುಕದ ಕಟು ಸತ್ಯ ಇಲ್ಲಿದೆ…

    ಶ್ರೀ ಕೃಷ್ಣನನ್ನು ಮದುವೆಯಾಗಲು ಸಿದ್ಧಳಾದ ಬಿಕಾಂ ಪದವೀಧರೆ; ಈ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts