ಶ್ರೀ ಕೃಷ್ಣನನ್ನು ಮದುವೆಯಾಗಲು ಸಿದ್ಧಳಾದ ಬಿಕಾಂ ಪದವೀಧರೆ; ಈ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ...

lordshri
Published on

ಉತ್ತರಪ್ರದೇಶ: ಯುವತಿಯೊಬ್ಬಳು ಶ್ರೀ ಕೃಷ್ಣನನ್ನು ಮದುವೆಯಾಗಲಿದ್ದಾಳೆ. ಈ ಮದುವೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಈ ಕುರಿತಾದ ಸುದ್ದಿ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಏಕೆಂದರೆ ಈ ಮದುವೆಯು ಯಾವುದೇ ಮನುಷ್ಯರ ಜತೆ ಅಲ್ಲ ಭಗವಾನ್ ಶ್ರೀ ಕೃಷ್ಣನೊಂದಿಗೆ ನಡೆಯಲಿದೆ. ಭಕ್ತಿಯಲ್ಲಿ ಮುಳುಗಿರುವ ಗ್ವಾಲಿಯರ್ ನ ಬಿಕಾಂ ಪಧವೀಧರೆ ಆಗಿರವ ಶಿವಾನಿ (23) ಶ್ರೀ ಕೃಷ್ಣನೊಂದಿಗೆ ಮದುವೆಯಾಗಲು ಹೊರಟಿದ್ದಾಳೆ.

ಭಗವಾನ್ ಶ್ರೀ ಕೃಷ್ಣನು ತನ್ನ ಕನಸಿನಲ್ಲಿ ಅನೇಕ ಬಾರಿ ಬಂದನು, ವಿಹಾವಾಗಲು ಹೇಳಿದ್ದಾನೆ ಶ್ರೀ ಕೃಷ್ಣ ಎಂದು ಶಿವಾನಿ ಹೇಳುತ್ತಾರೆ. ಆದರೆ ಈಗ ಶಿವಾನಿ ಈ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಇದೀಗ ಈ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಭಗವಾನ್ ಶ್ರೀ ಕೃಷ್ಣನೊಂದಿಗಿನ ಶಿವಾನಿಯ ವಿವಾಹಕ್ಕೆ ಮದುವೆ ದಿನಾಂಕ ಕೂಡ ಬಹಿರಂಗವಾಗಿದೆ. ಈ ವಿವಾಹವು ಏಪ್ರಿಲ್ 17 ರಂದು ವಿಜೃಂಭಣೆಯಿಂದ ನೆರವೇರಲಿದೆ. ಇದರಲ್ಲಿ ವೃಂದಾವನದಿಂದ ಶಿವಾನಿಯ ಮದುವೆ ಮೆರವಣಿಗೆ ಬರಲಿದೆ. ಮದುವೆ ಮುಗಿದ ನಂತರ, ಏಪ್ರಿಲ್ 18 ರಂದು ಬೀಳ್ಕೊಡುಗೆ ಇರುತ್ತದೆ. ಶಿವಾನಿ ಮದುವೆ ನಿಮಿತ್ತ ಗ್ವಾಲಿಯರ್ ನ ನ್ಯೂ ಬ್ರಿಜ್ ವಿಹಾರ್ ಕಾಲೋನಿ ನಿವಾಸಿ ಶಿವಾನಿ ಈಗ ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ಕೃಷ್ಣನೊಂದಿಗೆ ಮದುವೆಯಾಗುವುದು ಬಾಲ್ಯದಿಂದಲೂ ನನ್ನ ಕನಸಾಗಿತ್ತು. ನನ್ನ ತಾಯಿ ಕೃಷ್ಣನ ಹಿತ್ತಾಳೆಯ ಪ್ರತಿಮೆಯನ್ನು ಸಹ ನೀಡಿದ್ದಾರೆ, ಪ್ರತಿ ಕ್ಷಣವೂ ತನ್ನೊಂದಿಗೆ ಇಟ್ಟುಕೊಂಡಿರುತ್ತಿದ್ದೇನು. ಈ ಮದುವೆಯಿಂದ ತನ್ನ ಸಂಬಂಧಿಕರಿಗೆ ಸಂತೋಷವಿಲ್ಲ, ನನಗೆ ಈ ಬದುಕನ್ನು ಕೊಟ್ಟವನಿಗೆ ಮಾತ್ರ ಈ ಬದುಕನ್ನು ಮುಡಿಪಾಗಿಡಬೇಕು ಎಂದು ಶಿವಾನಿ ಹೇಳಿದರು.

ಏಪ್ರಿಲ್ 15ರಿಂದಲೇ ಶಿವಾನಿ ಮದುವೆ ಕಾರ್ಯಕ್ರಮ ಆರಂಭವಾಗಲಿದೆ. ಮೊದಲ ದಿನ ಅರಿಶಿಣ ಶಾಸ್ತ್ರ  ನಡೆಯಲಿದೆ. ಇದಾದ ನಂತರ ಏಪ್ರಿಲ್ 16ರಂದು ಮಂಟಪ ಆಗಮಿಸಲಿದ್ದು, 17ರಂದು ಮೆರವಣಿಗೆ ಆಗಮಿಸಲಿದೆ. ಅಂತಿಮವಾಗಿ, ಏಪ್ರಿಲ್ 18 ರಂದು ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಗ್ವಾಲಿಯರ್‌ನ ಶಿವನ ದೇವಸ್ಥಾನದಲ್ಲಿ ಶಿವಾನಿಯ ವಿವಾಹವು  ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net