More

    ಗ್ಯಾಸ್ ಉಳಿಸಲು ಅದ್ಭುತ ಟ್ರಿಕ್; ಹೀಗೆ ಮಾಡಿ, ಒಂದು ತಿಂಗಳು ಬರುವ ಗ್ಯಾಸ್ 2 ತಿಂಗಳು ಬರುತ್ತದೆ…

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮಹಿಳೆಯೊಬ್ಬರು ಗ್ಯಾಸ್ ಉಳಿಸಲು ಅದ್ಭುತ ತಂತ್ರವನ್ನು ತೋರಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ಜನರು ಈ ಯೋಚನೆ ನಮೆಗೆ ಬಂದೆ ಇರಲಿಲ್ಲ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

    ಹಣ ಉಳಿತಾಯದ ವಿಷಯ ಬಂದಾಗಲೆಲ್ಲಾ ಭಾರತೀಯ ಮಹಿಳೆಯರು ಮಾತ್ರ ನಂಬರ್ ಒನ್ ಸ್ಥಾನದಲ್ಲಿರುತ್ತಾರೆ. ತರಕಾರಿಗಳೊಂದಿಗೆ ಕೊತ್ತಂಬರಿ ಸೊಪ್ಪನ್ನು ಉಚಿತವಾಗಿ ಪಡೆಯುವುದರಿಂದ ಹಿಡಿದು ಮನೆ ಪಡಿತರಕ್ಕಾಗಿ ಚೌಕಾಶಿ ಮಾಡುವವರೆಗೆ, ಭಾರತೀಯ ಮಹಿಳೆಯರು ಸ್ವಲ್ಪ ಹಣವನ್ನು ಉಳಿಸುತ್ತಾರೆ. ಮಹಿಳೆಯೊಬ್ಬರು ಕೂಡ ಅದೇ ರೀತಿ ಮಾಡಿದ್ದು, ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡು ಬಂದಿದೆ. ತರಕಾರಿ ಬೇಯಿಸಲು ಒಲೆಯ ಮೇಲೆ ಕುಕ್ಕರ್ ಇಟ್ಟುಕೊಂಡಿದ್ದಾರೆ. ಇದರ ನಂತರ ಅವಳು ಕುಕ್ಕರ್ ಮೇಲೆ ಒನ್ನೊಂದು ಬಾಣಲೆ ಇರಿಸಿ ಅದರಲ್ಲಿ ಎಣ್ಣೆಯನ್ನು ಸುರಿಯುತ್ತಾಳೆ. ಸ್ವಲ್ಪ ಸಮಯದ ನಂತರ, ಬಾಣಲೆಯಲ್ಲಿ ಇಟ್ಟ ಎಣ್ಣೆ ಬಿಸಿಯಾಗುತ್ತದೆ. ಮಹಿಳೆ ಅದರಲ್ಲಿ ಪುರಿಯನ್ನು ಬೇಯಿಸಲು ಪ್ರಾರಂಭಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ ವಿಡಿಯೋವನ್ನು 3 ಲಕ್ಷ 12 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ನೆಟ್ಟಿಗರು, ನನಗೆ ನಿಜ ಹೇಳಿ, ಮೊದಲು ಎಣ್ಣೆಯನ್ನು ಬಿಸಿ ಮಾಡಿ ನಂತರ ಅದನ್ನು ಹಾಕಿದ್ರಾ?. ಕುಕ್ಕರ್‌ನ ಒತ್ತಡದಿಂದಾಗಿ ಬಾಣಲೆ ಪುಟಿದರೆ ನಿಮಗೆ ಏನಾಗುತ್ತದೆ? ನಾನು ಈ ವಿಡಿಯೋ ನನ್ನ ಹೆಂಡ್ತಿಗೆ ತೋರಿಸಲಾ? ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ. ಕೆಲವರು ಮೆಚ್ಚಿದ್ದಾರೆ, ಇನ್ನು ಕೆಲವರು ಕುಕ್ಕರ್‌ನ ಒತ್ತಡದಿಂದಾಗಿ ಮೇಲೆ ಇಟ್ಟಿರುವ ಪಾತ್ರೆ ಸಿಡಿಯುವ ಸಾಧ್ಯೆ ಇರುತ್ತದೆ ಎಚ್ಚರ ಎಂದು ಸಲಹೆ ಕೊಟ್ಟಿದ್ದಾರೆ.

    ಈ 8 ಷರತ್ತುಗಳು ಓಕೆ ಆದ್ರೆ.. ನಾನು ನಿಮ್ಮ ಜತೆ ಡೇಟ್​​ ಮಾಡೋಕೆ ರೆಡಿ ಎಂದಳು ಚೆಲುವೆ!

    ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

    ಅತಿಯಾಗಿ ಬೆವರುತ್ತಿದ್ದೀರಾ? ಈ ಮಾರಣಾಂತಿಕ ಕಾಯಿಲೆ ಬರಬಹುದು ಇರಲಿ ಎಚ್ಚರ..

    ಕಣ್ತುಂಬ ನಿದ್ದೆ ಮಾಡಿ ತುಂಬಾ ದಿನವಾಯ್ತು ಎಂದ್ರು ಸೀತಾಮಹಾಲಕ್ಷ್ಮೀ; ಈ ನಟಿಗೆ ಇರುವ ಸಮಸ್ಯೆ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts