More

    ಹೊತ್ತು ಊಟಕ್ಕಾಗಿ ಪರದಾಡಿದ ನಟ ಇಂದು ಒಟಿಟಿಯ ಸೂಪರ್​ಸ್ಟಾರ್​

    ಮುಂಬೈ: ಚಿತ್ರರಂಗದಲ್ಲಿ ಅನೇಕ ನಟರು ಯಾವುದೇ ಹಿನ್ನೆಲೆ, ಗಾಡ್‌ಫಾದರ್‌ನ ಬೆಂಬಲವಿಲ್ಲದೆ ಪ್ರೇಕ್ಷಕರ ವಿಶ್ವಾಸ ಗಳಿಸಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಇದನ್ನಲ್ಲಾ ಭೇದಿಸಿ ಕೆಲವು ನಟರು ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗದಲ್ಲಿ ಗೆದ್ದು ಬೀಗಿರುವುದನ್ನು ನಾವು ನೋಡಿದ್ದೇವೆ. ಇದೀಗ ಅದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಒಟಿಟಿ ಸೂಪರ್​ಸ್ಟಾರ್​ ಆಗಿರುವ ನಟ ನಡೆದು ಸಾಧನೆಯ ಹಾದಿ ಬಗ್ಗೆ ನಾವು ಹೇಳುತ್ತೇವೆ.

    ಒಂದು ಕಾಲದಲ್ಲಿ ಹೊತ್ತು ಊಟಕ್ಕಾಗಿ ಪರದಾಡಿದ ವ್ಯಕ್ತಿ ಇಂದು ಒಟಿಟಿ ಸೂಪರ್​ಸ್ಟಾರ್​ ಆಗಿ ಬೆಳೆದಿದ್ದಾರೆ. ಅಮೆಜಾನ್​ ಪ್ರೈಮ್​, ನೆಟ್​ಫ್ಲಿಕ್ಸ್​, ಹಾಟ್​​ಸ್ಟಾರ್​ನಂತಹ ವೇದಿಕೆಗಳಲ್ಲಿ ಈ ನಟನ ವೆಬ್​ ಸೀರೀಸ್​ ಹಾಗೂ ಚಲನಚಿತ್ರಗಳು ಹೆಚ್ಚು ಜನಪ್ರಿಯವಾಗಿದ್ದು, ಈತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾನೆ.

    ಬಾಲಿವುಡ್​ ಖ್ಯಾತನಾಮರಿಗೆ ಸೆಡ್ಡು ಹೊಡದು ಒಟಿಟಿ ಸ್ಟಾರ್​ ಆಗಿ ಮಿಂಚುತ್ತಿರುವ ದಿವ್ಯೇಂದು ಶರ್ಮಾ ತಮ್ಮದೇ ಆದ ಫ್ಯಾನ್​ ಬೇಸ್​ ಹೊಂದಿದ್ದಾರೆ. ದೆಹಲಿ ಮೂಲದವರಾದ ದಿವ್ಯೇಂದು ಶರ್ಮಾ ಕಿರೋರಿ ಮಾಲ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿದ್ದಾರೆ. 2011ರಲ್ಲಿ ಚಿತ್ರರಂಗ ಪ್ರವೇಶಿಸಿದ ದಿವ್ಯಂದು ಅವರಿಗೆ ಆರಂಭದಲ್ಲಿ ಲಕ್​ ಅಷ್ಟಾಗಿ ಕೈ ಹಿಡಿಯಲಿಲ್ಲ.

    Divyendu Sharma

    ಇದನ್ನೂ ಓದಿ: ವಿಚಾರಣೆ ವೇಳೆ ಆಸನ ಬದಲಿಸಿದ್ದಕ್ಕೆ ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು: ಸಿಜೆಐ ಡಿ.ವೈ. ಚಂದ್ರಚೂಡ್

    ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ದಿವ್ಯೆಂದು ಶರ್ಮಾ, ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮೂರು ವರ್ಷ ಕಷ್ಟಪಟ್ಟಿದ್ದಾಗಿ ಹೇಳಿದ್ದಾರೆ. ಗೋರೆಗಾಂವ್‌ನಲ್ಲಿ ಸ್ನೇಹಿತರ ಜೊತೆ ರೂಮ್​ ಮಾಡಿಕೊಂಡಿದ್ದೆ ಒಂದು ಹೊತ್ತಿನ ಊಟಕ್ಕೆ 32 ರೂಪಾಯಿ ವೆಚ್ಚವಾಗುತ್ತಿತ್ತು. ಅದನ್ನು ಭರಿಸುವ ಶಕ್ತಿಯೂ ನನ್ನ ಬಳಿ ಇರಲಿಲ್ಲ. ಸ್ನೇಹಿತರು ನನಗೆ ಸಹಾಯ ಮಾಡುತ್ತಿದ್ದರು.

    ಲವ್​ ರಂಜನ್​ ಅವರ ಪ್ಯಾರ್​ ಕಾ ಪಂಚ್​ನಾಮದಲ್ಲಿ ನನ್ನ ಪಾತ್ರಕ್ಕೆ ಸಿಕ್ಕ ಮನ್ನಣೆಯಿಂದಾಗಿ ಡೇವಿಡ್ ಧವನ್ ಅವರ ಚಶ್ಮೆ ಬದ್ದೂರ್, ಅಕ್ಷಯ್ ಕುಮಾರ್ ಅವರ ಟಾಯ್ಲೆಟ್: ಏಕ್ ಪ್ರೇಮ್ ಕಥಾ, ಶಾಹಿದ್ ಕಪೂರ್ ಅವರ ಬತ್ತಿ ಗುಲ್ ಮೀಟರ್ ಚಾಲು ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ಇದಾದ ಬಳಿಕ 2018 ಹಾಗೂ 20ರಲ್ಲಿ ಬಿಡುಗಡೆಯಾದ ಮಿರ್ಜಾಪುರ್​ ಕ್ರೈಂ ಥ್ರಿಲ್ಲರ್​ ಸರಣಿಯಲ್ಲಿ ನಟಿಸಿದೆ ಇದು ಕೂಡ ನನಗೆ ಹೆಚ್ಚಿನ ಜನಪ್ರಿಯತೆಯನ್ನು ನೀಡಿತ್ತು. ನಾನು ಮೂರುವರೆ ವರ್ಷಗಳ ಕಾಲ ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ದೊರೆಯುತ್ತಿದ್ದು, ಜನರು ನನ್ನ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಒಬ್ಬ ಕಲಾವಿದನಾಗಿ ನನಗೆ ಇಷ್ಟು ಸಾಕು ಎಂದು ನಟ ದಿವ್ಯೆಂದು ಶರ್ಮಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts