More

    ಸೋಲಿನ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಾಕ್; ಇಂಜುರಿಗೆ ತುತ್ತಾದ ಪ್ರಮುಖ ಆಟಗಾರ

    ನವದೆಹಲಿ: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ಗೆ ವರ್ಣರಂಜಿತೆ ಚಾಲನೆ ದೊರೆತ್ತಿದ್ದು, ಈಗಾಗಲೇ ಮೂರು ಪಂದ್ಯಗಳು ಮುಕ್ತಾಯವಾಗಿದೆ. ಆದರೆ, ಈ ಬಾರಿಯ ಟೂರ್ನಿಯಲ್ಲಿ ಗಾಯದ ಸಮಸ್ಯೆ ಹೆಚ್ಚು ಸದ್ದು ಮಾಡುತ್ತಿದ್ದು, ಟೂರ್ನಿ ಆರಂಭವಾದ ಬಳಕವೂ ಇದು ಮುಂದುವರೆದಿದೆ. ಇದಕ್ಕೆ ಪೂರಕವೆಂಬಂತೆ ಆಟಗಾರನೋರ್ವ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದಾನೆ.

    ಐಪಿಎಲ್ 2024 ರಲ್ಲಿ ಮಾರ್ಚ್ 23 ರಂದು ನಡೆದ ಡಬಲ್ ಹೆಡರ್ ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಿತ್ತು. ಗಾಯದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಭ್ ಪಂತ್ ಪುನರಾಗಮನ ಮಾಡಿದರು. ಪಂತ್ ಕಮ್​ಬ್ಯಾಕ್ ಖುಷಿಯ ನಡುವೆ ಡೆಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತ ಉಂಟಾಗಿದೆ.

    Ishant Sharma

    ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಕೆಕೆಆರ್​ ಗೆಲುವಿನ ರೂವಾರಿಗೆ ಭಾರೀ ದಂಡ

    ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಟಾರ್ ವೇಗಿ ಇಶಾಂತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ಪಂಜಾನ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ ಪವರ್‌ಪ್ಲೇಯ ಅಂತಿಮ ಓವರ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಇಶಾಂತ್ ಕೆಳಗೆ ಬಿದ್ದು ಪಾದಕ್ಕೆ ಗಾಯ ಮಾಡಿಕೊಂಡಿದ್ದಾರೆ. ಗಾಯದ ಪ್ರಮಾಣ ಜೋರಾಗಿದ್ದ ಕಾರಣ ಇಶಾಂತ್ ಮೈದಾನದಿಂದ ಹೊರನಡೆಯಬೇಕಾಯಿತು.

    ಇಶಾಂತ್ ಶರ್ಮಾ ಅವರ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ. ಇಶಾಂತ್ ಶರ್ಮಾ ಶಿಖರ್ ಧವನ್ ವಿಕೆಟ್ ಕಿತ್ತರೆ ಮತ್ತು ಅಪಾಯಕಾರಿ ಜಾನಿ ಬೈರ್‌ಸ್ಟೋವ್ ಅವರನ್ನು ರನ್ ಔಟ್ ಮಾಡಿದ್ದರು. ಇನ್ನೂ ಗಾಯದ ಕಾರಣದಿಂದಾಗಿ ಡೆಲ್ಲಿ ತಂಡಕ್ಕೆ ಗೈರುಹಾಜರಾದ ವೇಗದ ಬೌಲರ್‌ಗಳ ಪಟ್ಟಿಗೆ ಇಶಾಂತ್ ಕೂಡ ಸೇರುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಈಗಾಗಲೇ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts