More

    ಅರುಣಾಚಲದ ಮೇಲೆ ಚೀನಾ ಹಕ್ಕು ಸ್ಥಾಪನೆ ‘ಹಾಸ್ಯಾಸ್ಪದ’: ಸಿಂಗಾಪುರದಲ್ಲಿ ಜೈಶಂಕರ್ ಅಸಮಾಧಾನ

    ಸಿಂಗಾಪುರ: ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕುಗಳನ್ನು ಬಲವಾಗಿ ಖಂಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಈಶಾನ್ಯ ರಾಜ್ಯವು ಭಾರತದ ಭಾಗವಾಗಿದೆ ಎಂದು ಒತ್ತಿ ಹೇಳಿದರು.

    ಇದನ್ನೂ ಓದಿ: ಕೆರಿಯರ್​ ಬಗ್ಗೆ ಸಮಂತಾ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?

    ಬೀಜಿಂಗ್‌ನ ಹೇಳಿಕೆಗಳನ್ನು ‘ಹಾಸ್ಯಾಸ್ಪದ’ ಎಂದು ಉಲ್ಲೇಖಿಸುವಾಗ, ಅರುಣಾಚಲ ಪ್ರದೇಶವು ಭಾರತದ ಒಂದು ಭಾಗವಾಗಿದೆ. ವಿದೇಶವೊಂದು ಹಾಗೆ ಹೇಳುವುದರಿಂದ ಅದು ಆ ದೇಶದ ಭೂಭಾಗವಾಗದು ಎಂದು ಹೇಳಿದರು.

    ಮೂರು ರಾಷ್ಟ್ರಗಳ ಭೇಟಿಯ ಭಾಗವಾಗಿ ಸಿಂಗಾಪುರದಲ್ಲಿರುವ ಜೈಶಂಕರ್ ಅವರು ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಸೌತ್ ಏಷ್ಯನ್ ಸ್ಟಡೀಸ್ ಸಂಸ್ಥೆಯಲ್ಲಿ ತಮ್ಮ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್’ ಕುರಿತು ಮಾತನಾಡುತ್ತಿದ್ದರು.

    ಕಾರ್ಯಕ್ರಮದ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, “ಇದು ಹೊಸ ವಿಷಯವಲ್ಲ. ಚೀನಾ ಹಕ್ಕು ಮಂಡಿಸಿದೆ, ತನ್ನ ಹಕ್ಕು ವಿಸ್ತರಿಸಿದೆ. ಹಕ್ಕುಗಳು ಹಾಸ್ಯಾಸ್ಪದವಾಗಿವೆ. ಏಕೆಂದರೆ ಅರುಣಾಚಲ ಪ್ರದೇಶವು ಭಾರತದ ಭಾಗವಾಗಿದೆ. ಬೇರೆ ದೇಶವು ಭಾರತದ ಭಾಗವೆಂದು ಹೇಳುವುದರಿಂದ ಅಲ್ಲ. ಆದ್ದರಿಂದ, ನಾವು ಈ ಬಗ್ಗೆ ಬಹಳ ಸ್ಪಷ್ಟವಾಗಿ ಮತ್ತು ಸ್ಥಿರವಾಗಿರುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದರು.

    ಇದು ಗಡಿ ಚರ್ಚೆಯ ಭಾಗವಾಗಿದೆ. ಇತ್ತೀಚೆಗಷ್ಟೇ ಚೀನಾ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಮಂಡಿಸಲು ಮುಂದಾಗಿದೆ. ಭಾರತದ ರಾಜ್ಯವನ್ನು “ಝಂಗ್ನಾನ್ – ಚೀನಾದ ಭೂಪ್ರದೇಶದ ಅಂತರ್ಗತ ಭಾಗ” ಎಂದು ಕರೆಯುವ ಚೀನಾದ ರಕ್ಷಣಾ ಸಚಿವಾಲಯವು ಅಕ್ರಮವಾಗಿ ಸ್ಥಾಪಿಸಿರುವ ಬೀಜಿಂಗ್ ವಾದವನ್ನು ಭಾರತವು ಎಂದಿಗೂ ಅಂಗೀಕರಿಸುವುದಿಲ್ಲ ಎಂದು ಹೇಳಿದರು.

    2020 ರಲ್ಲಿ ಗಡಿಯಲ್ಲಿ ತಿಳಿನೀರಂತಿದ್ದ ‘ಸಮತೋಲನ’ವನ್ನು ಕದಡಿದ ಚೀನಾವನ್ನು ತರಾಟೆಗೆ ತೆಗೆದುಕೊಂಡರು. “ನಾವು ಗಡಿ ವಿವಾದವನ್ನು ಪರಿಹರಿಸುವ ಬಗ್ಗೆ ಮಾತನಾಡುವುದಿಲ್ಲ, ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಬಗ್ಗೆ ಮಾತನಾಡುತ್ತಿದ್ದೇವೆ. 1975 ರಿಂದ 2020 ರವರೆಗೆ ಗಡಿಯಲ್ಲಿ ಯಾರೂ ಕೊಲ್ಲಲ್ಪಟ್ಟಿಲ್ಲ, ಆದ್ದರಿಂದ 45 ವರ್ಷಗಳ ಕಾಲ ಶಾಂತಿಯಿಂದಿರುವ ಗಡಿಯಲ್ಲಿ ಈಗ ಏಕೆ ಅಶಾಂತಿ ಉಂಟು ಮಾಡಬೇಕು ಎಂದು ಇಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು ಎಂದು ತಿಳಿಸಿದರು.

    ಮುಂಬೈ ಪೊಲೀಸರ ವಶಕ್ಕೆ 35 ಸೋಮಾಲಿಯನ್​ ಕಡಲ್ಗಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts