More

    ಮುಂಬೈ ಪೊಲೀಸರ ವಶಕ್ಕೆ 35 ಸೋಮಾಲಿಯನ್​ ಕಡಲ್ಗಳ್ಳರು!

    ಮುಂಬೈ: ಭಾರತೀಯ ನೌಕಾಪಡೆಯು ಸೆರೆಹಿಡಿದಿದ್ದ 35 ಸೋಮಾಲಿಯನ್​ ಕಡಲ್ಗಳ್ಳರನ್ನು ಶನಿವಾರ ವಿಚಾರಣೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿತು.

    ಇದನ್ನೂ ಓದಿ: 56 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿ ಭ್ರೂಣ! ತೆಗೆದರೆ..

    ಕಳೆದ ವಾರ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಕೊಲ್ಕತ್ತಾ ಅರಬ್ಬಿ ಸಮುದ್ರದಲ್ಲಿ ದಾಳಿ ನಡೆಸಿ ಸೆರೆಹಿಡಿಯಲ್ಪಟ್ಟ 35 ಸೋಮಾಲಿ ಕಡಲ್ಗಳ್ಳರನ್ನು ಶನಿವಾರ ಬೆಳಗ್ಗೆ ಮುಂಬೈ ನೇವಲ್ ಡಾಕ್‌ಯಾರ್ಡ್‌ಗೆ ಕರೆತಂದು ಹಳದಿ ಗೇಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

    ಮುಂಬೈ ಪೊಲೀಸರು ಕಡಲ್ಗಳ್ಳರ ವಿರುದ್ಧ ಸಮುದ್ರಯಾನ ಅಕ್ರಮ ಪ್ರವೇಶ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದ ನಂತರ ಐಎನ್​ಎಸ್​ ಕೋಲ್ಕತ್ತಾ ನೌಕೆಯು ಮಾರ್ಚ್ 15 ರಂದು ಸೊಮಾಲಿಯಾ ಕರಾವಳಿಯಲ್ಲಿ 40 ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಕಳೆದ ಡಿಸೆಂಬರ್‌ನಲ್ಲಿ ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಎಂವಿ ರುಯೆನ್ ಮತ್ತು ಇತರ ವಾಣಿಜ್ಯ ಹಡಗುಗಳನ್ನು ವಶಪಡಿಸಿಳ್ಳಲಾಗಿತ್ತು.

    ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ನಿಂದ ಕಳೆದ ವಾರ ಭಾರತೀಯ ನೌಕಾಪಡೆಗೆ ಖಚಿತ ಮಾಹಿತಿ ಬಂದಿದ್ದು, ಅದರ ಆಧಾರದ ಮೇರೆಗೆ ಅರಬ್ಬಿ ಸಮುದ್ರದಲ್ಲಿ ಐಎನ್​ಎಸ್​ ಕೊಲ್ಕತ್ತಾ ನೆರವಿನಿಂದ ಅಪಹರಿಸಲ್ಪಟ್ಟ ವ್ಯಾಪಾರಿ ಹಡಗನ್ನು ತಡೆಹಿಡಿದಿತ್ತು.

    ಕಡಲ್ಗಳ್ಳರನ್ನು ಶರಣಾಗಲು ಒತ್ತಾಯಿಸಿದರೂ ಲೆಕ್ಕಿಸದೆ ಗುಂಡು ಹಾರಿಸಿದರು ಮತ್ತು ಸ್ಪಾಟರ್ ಡ್ರೋನ್ ಅನ್ನು ಹೊಡೆದುರುಳಿಸಿದರು. ಆದರೆ ನೌಕಾಪಡೆ ಅಪಹರಿಸಲ್ಪಟ್ಟ ನೌಕೆಯ ಪ್ರೊಪೆಲ್ಲರ್ ಮತ್ತು ನ್ಯಾವಿಗೇಷನ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿತು. ಯುದ್ಧನೌಕೆ, ಹೆಲಿಕಾಪ್ಟರ್‌ಗಳು ಮತ್ತು ವೈಮಾನಿಕ ಕಣ್ಗಾವಲುಗಾಗಿ ಸ್ಪಾಟರ್ ಡ್ರೋನ್‌ಗಳ ಜೊತೆಗೆ ದೀರ್ಘ-ಶ್ರೇಣಿಯ ಕಡಲ ಗಸ್ತು ವಿಮಾನ, ಪಿ81 ವಿಮಾನ, ಸೀ ಗಾರ್ಡಿಯನ್ ಯುಎವಿ ಜತೆ ಐಎನ್​ಎಸ್​ ಸುಭದ್ರಾ ಡೆಸ್ಟ್ರಾಯರ್ ಬಳಸಿ 35 ಸಶಸ್ತ್ರ ಕಡಲ್ಗಳ್ಳರನ್ನು ಸೆರೆಹಿಡಿಯಲಾಯಿತು. ಇದರ ಜತೆಗೆ ಅಪಹರಿಸಿದ ಹಡಗು ಮತ್ತು ಅದರಲ್ಲಿದ್ದ 17 ಸಿಬ್ಬಂದಿಯನ್ನು ರಕ್ಷಿಸಸಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

    ಆ ಸಮಯದಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿದ್ದೆ..! ಸಮಂತಾ ಶಾಕಿಂಗ್ ಕಾಮೆಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts