More

    56 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿ ಭ್ರೂಣ! ತೆಗೆದರೆ..

    ಬ್ರೆಸಿಲಿಯಾ(ಬ್ರೆಜಿಲ್): ಸಾಮಾನ್ಯವಾಗಿ ತಾಯಿ ಮಗುವಿಗೆ ಜನ್ಮ ನೀಡುವ ಮೊದಲು ಒಂಬತ್ತು ತಿಂಗಳವರೆಗೆ ಗರ್ಭಾವಸ್ಥೆಯನ್ನು ಹೊಂದುತ್ತಾರೆ. ಕೆಲವರಿಗೆ 9 ತಿಂಗಳ ನಂತರವೂ ಕೆಲದಿನಗಳ ವರೆಗೆ ಹೆರಿಗೆಯಾಗುತ್ತದೆ. ಆದರೆ ಇಲ್ಲೊಂದು ಬಹಳ ಅಪರೂಪದ ಪ್ರಕರಣ ನಡೆದಿದೆ. ಮಹಿಳೆ 56 ವರ್ಷಗಳ ಕಾಲ ತನ್ನ ಗರ್ಭದಲ್ಲಿ ಒಂದಲ್ಲ ಎರಡಲ್ಲ ಹಲವು ಭ್ರೂಣಗಳನ್ನು ಹೊತ್ತಿದ್ದಳು.

    ವಿಚಿತ್ರವೆಂದರೆ ಆ ಮಹಿಳೆಗೆ ಹೊಟ್ಟೆಯಲ್ಲಿ ಭ್ರೂಣವಿರುವುದು ಗೊತ್ತೇ ಇರಲಿಲ್ಲ. ಇತ್ತೀಚಿಗೆ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿಕೊಂಡ ಮಹಿಳೆಗೆ ಈ ವಿಚಿತ್ರ ಕಂಡು ಹೌಹಾರುವಂತಾಯಿತು. ಆಕೆಗಷ್ಟೇ ಅಲ್ಲ ವೈದ್ಯರಿಗೂ ಆಶ್ಚರ್ಯವಾಯಿತು.

    ಬ್ರೆಜಿಲ್ ಡೇನಿಯಲಾ ವೆರಾ (81) ಎಂಬ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇತ್ತೀಚೆಗೆ ಪರಾಗ್ವೆಯ ಸಮೀಪದ ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಕೆಲವು ಔಷಧಿಗಳನ್ನು ನೀಡಿ ಕಳುಹಿಸಿದರು. ಎರಡು ದಿನಗಳ ನಂತರ, ಡೇನಿಯಲಾ ಅದೇ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬಂದರು. ಆಗ ವೈದ್ಯರು ಆಕೆಗೆ 3ಡಿ ಸ್ಕ್ಯಾನ್ ಮಾಡಿ ಶಾಕ್ ರಿಸಲ್ಟ್​ ನೀಡಿದ್ದಾರೆ.

    ಭ್ರೂಣಗಳು ಸಾವನ್ನಪ್ಪಿವೆ ಎಂದು ವೈದ್ಯರು ಬಹಿರಂಗಪಡಿಸಿದರು. ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಡೇನಿಯಲಾಗೆ ವೆರಾ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆದಿದ್ದಾರೆ. ಆದರೆ ಡೇನಿಯಲಾ ವೆರಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

    ಆಕೆಗೆ ಆಗಲೇ ಏಳು ಮಕ್ಕಳಿದ್ದರು. ಅಪಸ್ಥಾನೀಯ ಗರ್ಭಧಾರಣೆಯ ಸಂದರ್ಭಗಳಲ್ಲಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ವೈದ್ಯರು ವಿವರಿಸಿದರು.

    ಗರ್ಭಾಶಯದ ಹೊರಗೆ ಭ್ರೂಣವು ಬೆಳವಣಿಗೆಯಾದರೆ ಅದನ್ನು ಅಪಸ್ಥಾನೀಯ ಗರ್ಭಧಾರಣೆ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಭ್ರೂಣವು ಸತ್ತು ದೀರ್ಘಕಾಲದವರೆಗೆ ಗರ್ಭಾಶಯದ ಹೊರಗೇ ಇದ್ದಾಗ ಇದು ಸಂಭವಿಸುತ್ತದೆ ಎಂದು ವೈದ್ಯರು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts