More

    ಬೇರೆಯವರ ಮನೆಯ ಹೆಸರನ್ನು ಯಾರಾದರೂ ಬದಲಾಯಿಸಿದರೆ ಅದು ಅವರದಾಗುತ್ತದೆಯೇ?: ಚೀನಾಗೆ ಛೀಮಾರಿ ಹಾಕಿದ ಕೇಂದ್ರ ಸಚಿವರು    

    ಚೀನಾ: ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಬದಲಿಸಿ ಅದು ತನ್ನದೇ ಎಂದು ಹೇಳಿಕೊಳ್ಳುವ ಚೀನಾದ ಹಕ್ಕು ನಿರಾಧಾರ ಎಂದು ಭಾರತ ಬಣ್ಣಿಸಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದೀಗ ಚೀನಾಗೆ ಛೀಮಾರಿ ಹಾಕಿದ್ದಾರೆ. ಒಂದು ದಿನದ ಹಿಂದೆ, ಚೀನಾ ಜಂಗ್‌ಜಾಂಗ್ ಪ್ರಾಂತ್ಯದ 30 ಸ್ಥಳಗಳ ಬದಲಾದ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆಗಳು ಆಧಾರರಹಿತವಾಗಿವೆ. ಇಂತಹ ಹೇಳಿಕೆಗಳಿಂದ ಐತಿಹಾಸಿಕ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.     

    ಅರುಣಾಚಲ ಪ್ರದೇಶದ ಜನರು ದೇಶಭಕ್ತರು ಮತ್ತು ಭಾರತೀಯರು. ಅವರು ಭಾರತದ ಎಲ್ಲಾ ಮಾನದಂಡಗಳನ್ನು ಅನುಸರಿಸುತ್ತಾರೆ. ಚೀನಾ ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಲೇ ಇದೆ. ಆದರೆ ಇದು ನೆಲದ ವಾಸ್ತವ ಮತ್ತು ಐತಿಹಾಸಿಕ ಸತ್ಯಗಳನ್ನು ಬದಲಾಯಿಸುವುದಿಲ್ಲ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ರಿಜಿಜು ಹೇಳಿದ್ದಾರೆ.   

    ಅರುಣಾಚಲ ಪ್ರದೇಶದ ಸ್ಥಳಗಳ ಹೆಸರನ್ನು ಬದಲಾಯಿಸಿರುವ ಚೀನಾಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಛೀಮಾರಿ ಹಾಕಿದ್ದಾರೆ. ಬೇರೆಯವರ ಮನೆಯ ಹೆಸರನ್ನು ಯಾರಾದರೂ ಬದಲಾಯಿಸಿದರೆ ಅದು ಅವರದಾಗುತ್ತದೆಯೇ?, ಅರುಣಾಚಲ ಪ್ರದೇಶವು ದೇಶದ ಭಾಗವಾಗಿಯೇ ಇತ್ತು. ಹೆಸರನ್ನು ಬದಲಾಯಿಸುವುದರಿಂದ ಏನನ್ನೂ ಮಾಡಲಾಗುವುದಿಲ್ಲ ಅಥವಾ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲಿ ನಮ್ಮ ಸೇನೆ ಸಿದ್ಧವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಸೇನೆಗೂ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ವಿದೇಶಾಂಗ ಸಚಿವರು ಹೇಳಿದರು.

    ಚೀನಾ ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಅರುಣಾಚಲ ಪ್ರದೇಶದ ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಈ ಮೂಲಕ ಅವರು ಈ ಪ್ರದೇಶಗಳಲ್ಲಿ ತನ್ನ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ತಮ್ಮದೆಂದು ಹೇಳಿಕೊಂಡು ಬದಲಾಯಿಸಿದ್ದರು. ಚೀನಾದಿಂದ ಪ್ರಕಟವಾದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಅರುಣಾಚಲದ 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, ಒಂದು ಕೊಳ ಮತ್ತು ಪರ್ವತ ಮಾರ್ಗಕ್ಕೆ ಹೊಸ ಹೆಸರುಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ಹೆಸರುಗಳನ್ನು ರೋಮನ್ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ, ಕೆಲವು ಹೆಸರುಗಳನ್ನು ಚೈನೀಸ್ ಮತ್ತು ಟಿಬೆಟಿಯನ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.    

    ಪರ್ವತಗಳು, ಸರೋವರಗಳು ಸೇರಿದಂತೆ ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಮತ್ತೆ ಬದಲಾಯಿಸಿದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts