More

  ಪರ್ವತಗಳು, ಸರೋವರಗಳು ಸೇರಿದಂತೆ ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಮತ್ತೆ ಬದಲಾಯಿಸಿದ ಚೀನಾ

  ಬೀಜಿಂಗ್: ಚೀನಾ ತನ್ನ ಕುತಂತ್ರ ಬುದ್ಧಿ ಬಿಡುವಂತೆ ಕಾಣುತ್ತಿಲ್ಲ. ಅರುಣಾಚಲ ಪ್ರದೇಶದ ಬಗ್ಗೆ ಮತ್ತೆ ಮತ್ತೆ ಹೇಳಿಕೆ ನೀಡುತ್ತಿದೆ. ಭಾರತವು ಸತ್ಯವನ್ನು ಹೇಳಿದ ಮೇಲೆ ಈಗ ‘ಡ್ರಾಗನ್’ ತೊಂದರೆಯಲ್ಲಿರುವಂತೆ ತೋರುತ್ತದೆ. ಮುಜುಗರಕ್ಕೀಡಾಗಿರುವ ಚೀನಾ ಅರುಣಾಚಲ ಪ್ರದೇಶದ ಹಲವು ಸ್ಥಳಗಳ ಹೆಸರನ್ನು ಪೇಪರ್ ನಲ್ಲಿ ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆ.

  ಇತ್ತೀಚಿನ ಬೆಳವಣಿಗೆಯಲ್ಲಿ, ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಚೀನಾ ಅರುಣಾಚಲ ಪ್ರದೇಶವನ್ನು ಜಂಗ್ನಾನ್ ಎಂದು ಕರೆಯುತ್ತದೆ ಮತ್ತು ಅದನ್ನು ಟಿಬೆಟಿಯನ್ ಸ್ವಾಯತ್ತ ಪ್ರದೇಶದ ಭಾಗವೆಂದು ಪರಿಗಣಿಸುತ್ತದೆ.

  ಚೀನಾದ ಹಳೆಯ ತಂತ್ರ 

  ಕಳೆದ 7 ವರ್ಷಗಳಲ್ಲಿ ಇದು ನಾಲ್ಕನೇ ಬಾರಿ ಅರುಣಾಚಲದ ಸ್ಥಳಗಳ ಹೆಸರನ್ನು ಚೀನಾ ಬದಲಾಯಿಸಿದೆ ಎಂಬುದು ಗಮನಾರ್ಹ. ಏಪ್ರಿಲ್ 2023 ರಲ್ಲಿ ಚೀನಾ ತನ್ನ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಬದಲಾಯಿಸಿತ್ತು. ಇದಕ್ಕೂ ಮುನ್ನ ಚೀನಾ 2021ರಲ್ಲಿ 15 ಹಾಗೂ 2017ರಲ್ಲಿ 6 ಸ್ಥಳಗಳ ಹೆಸರನ್ನು ಬದಲಾಯಿಸಿತ್ತು.

  ಪ್ರಧಾನಿ ಮೋದಿಯವರ ಅರುಣಾಚಲ ಭೇಟಿ 

  ನರೇಂದ್ರ ಮೋದಿಯವರ ಅರುಣಾಚಲ ಭೇಟಿಯ ನಂತರ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಪ್ರತಿಪಾದಿಸಲು ಚೀನಾದಿಂದ ಇತ್ತೀಚಿನ ಹೇಳಿಕೆಗಳು ಪ್ರಾರಂಭವಾದವು. ಕೆಲವು ತಿಂಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದ್ದರು. ಇದು ಗಡಿ ಪ್ರದೇಶಗಳಲ್ಲಿ ಭಾರತೀಯ ಸೈನಿಕರ ಉತ್ತಮ ಸಂಚಾರವನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.

  ಅರುಣಾಚಲ ಪ್ರದೇಶ ಎಂದಿಗೂ ಭಾರತದ ಭೂಭಾಗ: ಚೀನಾ ವಾದಕ್ಕೆ ಅಮೆರಿಕ ತಿರುಗೇಟು

  ‘ನಾನು ಅಧಿಕಾರಕ್ಕಾಗಿ ಅಥವಾ ಮತಕ್ಕಾಗಿ ಹೀಗೆ ಮಾಡುತ್ತಿಲ್ಲ’:  ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೀಗಂದಿದ್ದೇಕೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts