More

    ಅರುಣಾಚಲ ಪ್ರದೇಶ ಎಂದಿಗೂ ಭಾರತದ ಭೂಭಾಗ: ಚೀನಾ ವಾದಕ್ಕೆ ಅಮೆರಿಕ ತಿರುಗೇಟು

    ನವದೆಹಲಿ: ಅರುಣಾಚಲ ಪ್ರದೇಶ ಎಂದಿಗೂ ಭಾರತದ ಭೂಭಾಗವೆಂದು ಅಮೆರಿಕ ಗುರುತಿಸುತ್ತದೆ ಎಂದು ಹೇಳುವ ಮೂಲಕ ಸದಾ ತನ್ನ ಮೂಲ ಪ್ರದೇಶ ಎಂದು ವಾದಿಸುವ ಚೀನಾ ನಡೆಯನ್ನು ಯುನೈಟೆಡ್​ ಸ್ಟೇಟ್ಸ್​ ಅಧಿಕಾರಿ ಖಂಡಿಸಿದ್ದಾರೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಸುತ್ತ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಪ್ರಯತ್ನಗಳನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

    ಯುಎಸ್ ಸ್ಟೇಟ್​ ಡಿಪಾರ್ಟ್​ಮೆಂಟ್​ನ ಉಪ ವಕ್ತಾರ ವೇದಾಂತ್ ಪಟೇಲ್ ಅವರು ಎಂದಿನಂತೆಯೇ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ, ಚೀನಾ ನಡೆಯನ್ನು ಖಂಡಿಸಿದರು. ಯುನೈಟೆಡ್ ಸ್ಟೇಟ್ಸ್ ಅರುಣಾಚಲ ಪ್ರದೇಶವನ್ನು ಭಾರತೀಯ ಭೂಪ್ರದೇಶವೆಂದು ಗುರುತಿಸುತ್ತದೆ ಮತ್ತು ವಾಸ್ತವ ನಿಯಂತ್ರಣ ರೇಖೆಯಾದ್ಯಂತ ಆಕ್ರಮಣಗಳು ಅಥವಾ ಅತಿಕ್ರಮಣಗಳು, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎನ್ನುವ ಮೂಲಕ ಚೀನಾಗೆ ಖಡಕ್​ ಸಂದೇಶವನ್ನು ರವಾನಿಸಿದರು.

    ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ಜಾಂಗ್ ಕ್ಸಿಯೋಗಾಂಗ್, ಭಾರತವು ಅಕ್ರಮವಾಗಿ ಸ್ಥಾಪಿಸಿರುವ ಅರುಣಾಚಲ ಪ್ರದೇಶವನ್ನು ಬೀಜಿಂಗ್ ಎಂದಿಗೂ ಅಂಗೀಕರಿಸುವುದಿಲ್ಲ ಮತ್ತು ದೃಢವಾಗಿ ವಿರೋಧಿಸುತ್ತದೆ ಎಂದು ಹೇಳಿಕೆ ನೀಡಿದ ಮೂರು ದಿನಗಳ ಬಳಿಕ ಯುಎಸ್ ಅಧಿಕಾರಿಯ ಈ ಹೇಳಿಕೆ ಬಂದಿದೆ.

    ಚೀನಾದ ಹೇಳಿಕೆಯನ್ನು ಅಸಂಬದ್ಧ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್​ ಜೈಸ್ವಾಲ್,​ ಅರುಣಾಚಲ ಪ್ರದೇಶ ಹಿಂದೆ, ಇಂದು ಮತ್ತು ಎಂದೆಂದಿಗೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗ ಎಂದು ಮಂಗಳವಾರ ಪುನರುಚ್ಛರಿಸಿದರು.

    ಈ ವಿಷಯದಲ್ಲಿ ಆಧಾರರಹಿತ ವಾದಗಳನ್ನು ಮಂಡಿಸುವ ಮತ್ತು ಅಂತಹ ಹಕ್ಕುಗಳಿಗೆ ಯಾವುದೇ ಮಾನ್ಯತೆಯನ್ನು ನೀಡುವುದಿಲ್ಲ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಅಲ್ಲಿನ ಜನರು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಯೋಜನೆಗಳಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ರಣಧೀರ್​ ಜೈಸ್ವಾಲ್ ತಿಳಿಸಿದರು.

    ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಕ್ಕೆ ಈ ತಿಂಗಳ ಆರಂಭದಲ್ಲಿ ಚೀನಾ ಖಂಡಿಸಿತು. ಮೋದಿ ತಮ್ಮ ಭೇಟಿಯ ಸಮಯದಲ್ಲಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಇದು ವಿಶ್ವದ ಅತಿ ಉದ್ದದ ದ್ವಿ-ಪಥ ಸುರಂಗವಾಗಿದ್ದು, ಉತ್ತರ ಭಾಗದಲ್ಲಿ ಚೀನಾದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ತವಾಂಗ್‌ಗೆ ಎಲ್ಲ ರೀತಿಯ ಸಂಪರ್ಕವನ್ನು ಖಚಿತಪಡಿಸುತ್ತದೆ.

    825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗವು ವಾಸ್ತವ ಗಡಿ ನಿಯಂತ್ರಣದ ಉದ್ದಕ್ಕೂ ಭಾರತೀಯ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳ ಉತ್ತಮ ಚಲನೆಗೆ ಅವಕಾಶ ನೀಡುತ್ತದೆ. ಇದು ಚೀನಾ ಹೊಟ್ಟೆ ಉರಿಗೆ ಕಾರಣವಾಗಿದ್ದು, ಭಾರತವು ಅಕ್ರಮವಾಗಿ ಸ್ಥಾಪಿಸಿದ ಅರುಣಾಚಲ ಪ್ರದೇಶವನ್ನು ಎಂದಿಗೂ ಭಾರತದ ಭೂಭಾಗ ಎಂದು ಚೀನಾ ಗುರುತಿಸುವುದಿಲ್ಲ ಮತ್ತು ದೃಢವಾಗಿ ವಿರೋಧಿಸುತ್ತದೆ ಎಂದು ಹೇಳಿದೆ. (ಏಜೆನ್ಸೀಸ್​)

    ಬೇರೆಯವರ ಜತೆ ಮಲಗಿ ಸಂಪಾದಿಸುವ ಪತ್ನಿ, ಅದೇ ದುಡ್ಡಿಂದ ಬದುಕು ನಡೆಸುವ ಗಂಡ! ಭಾರತದಲ್ಲಿದೆ ಈ ವಿಚಿತ್ರ ಆಚರಣೆ

    ವಿರಾಟ್​ ಕೊಹ್ಲಿ ಹೆಂಡತಿ… ಕೀಳುಮಟ್ಟದ ಕಾಮೆಂಟ್​ ಮಾಡಿದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ!

    ಕಾಂಗ್ರೆಸ್ ಫೈನಲ್ ಪಟ್ಟಿಗೆ ಶುಕ್ರವಾರ ಮುಹೂರ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts