More

    ಕೊಡಗಿನಲ್ಲಿ ಭರದ ಮತದಾನ

    ಮಡಿಕೇರಿ:

    ಮಲೆನಾಡು ಜಿಲ್ಲೆ ಕೊಡಗಿನಲ್ಲಿ ನೆತ್ತಿ ಸುಡುವ ಬಿಸಿಲಿನ ಅನುಭವದ ಮಧ್ಯೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಕೆಲವು ಕಡೆಗಳಲ್ಲಿ ಮತಯಂತ್ರಗಳಲ್ಲಿ ಚಿಕ್ಕಪುಟ್ಟ ತಾಂತ್ರಿಕ ದೋಷಗಳು ಕಂಡುಬAದಿದ್ದು ಹೊರತುಪಡಿಸಿದರೆ ಮತದಾರನ ಹಕ್ಕು ಚಲಾವಣೆಗೆ ಯಾವುದೇ ತೊಂದರೆ ಆಗಿಲ್ಲ. ವಿರಾಜಪೇಟೆ ತಾಲೂಕಿ ಬಿ. ಶೆಟ್ಟಿಗೇರಿಯಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಕಹಿ ಘಟನೆಗೂ ಈ ಚುನಾವಣೆ ಸಾಕ್ಷಿ ಆಯಿತು.

    ಜಿಲ್ಲೆಯಲ್ಲೂ ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಯಿತು. 5-6 ಮತಗಟ್ಟೆಗಳ ಮತಯಂತ್ರಗಳಲ್ಲಿ ಚಿಕ್ಕ ಪುಟ್ಟ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಆ ಮತಗಟ್ಟೆಗಳಲ್ಲಿ ಮತದಾನ ಕೆಲ ನಿಮಿಷಗಳಷ್ಟು ತಡ ಆಯಿತು. ಇತರೆಡೆಗಳಲ್ಲಿ ಯಾವುದೇ ರೀತಿಯ ದೊಡ್ಡ ಸಮಸ್ಯೆಗಳು ಕಂಡುಬಾರದೆ ಮತದಾನ ಸುಸೂತ್ರವಾಗಿ ನಡೆಯಿತು.

    ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ಮತಗಟ್ಟೆ ಸಂಖ್ಯೆ 158 ರಲ್ಲಿ ಮತಯಂತ್ರದ ಬ್ಯಾಟರಿ ಕೈಕೊಟ್ಟಿದ್ದರಿಂದ ಮತದಾನ ಪ್ರಕ್ರಿಯೆ ಕೆಲಕಾಲ ಸ್ಥಗಿತಗೊಂಡಿದ್ದು. ಒಟ್ಟು 54 ಮತ ಚಲಾವಣೆ ಆಗುತ್ತಿದ್ದಂತೆಯೇ ಬ್ಯಾಟರಿ ವೈಫಲ್ಯ ಕಂಡು ಬಂತು. ನಂತರ ಈ ಸಮಸ್ಯೆ ಸರಿಪಡಿಸಿ ಮತದಾನ ಮುಂದುವರಿಸಲಾಯಿತು.

    ತುರ್ತು ಕಾರ್ಯದ ನಿಮಿತ್ತ ಹೊರಗಡೆ ತೆರಳಲು ನಿರ್ಧರಿಸಿದ್ದವರು, ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದ್ದವರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಹೊತ್ತೇರುತ್ತಿದ್ದಂತೆಯೇ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದ ಕಾರಣ ಕೆಲವರು ಬೆಳಗ್ಗೆ 9 ಗಂಟೆಯೊಳಗೆಯೇ ಮತದಾನ ಮಾಡಿ ತೆರಳಿದ್ದರು. ಬೆಳಗ್ಗೆ 9 ಗಂಟೆ ಸಮಯಕ್ಕೆ ಜಿಲ್ಲೆಯಲ್ಲಿ ಶೇ. 13.50 ಪ್ರಮಾಣದಲ್ಲಿ ಮತದಾನವಾಗಿತ್ತು.

    ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಬೆಳಗ್ಗಿನ ಹೊತ್ತಿನಲ್ಲಿ ಬಿರುಸಿನ ಮತದಾನ ನಡೆಯಿತು. ನಕ್ಸಲ್
    ಪೀಡಿತ ಮತಗಟ್ಟೆ ಎಂದು ಗುರುತಿಸಲಾಗಿದ್ದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ವಣಚಲು ಮತಗಟ್ಟೆಯಲ್ಲಿ ಬೆಳಗ್ಗೆ 11.15ರ ಸುಮಾರಿಗೆ 194 ಮತದಾರರ ಪೈಕಿ 80 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

    ಗಾಳಿಬೀಡು ಮತ್ತು 1ನೇ ಮೊಣ್ಣಂಗೇರಿ ಗ್ರಾಮಗಳ ವ್ಯಾಪ್ತಿಯ ಗಾಳಿಬೀಡು ಮತಗಟ್ಟೆಯಲ್ಲಿ ಬೆಳಗ್ಗೆ 11.40ರ ಹೊತ್ತಿಗೆ ಶೇ.36ರಷ್ಟು ಮತ ಚಲಾವಣೆ ಆಗಿತ್ತು. ಇಲ್ಲಿ 1190 ಮತದಾರರಿದ್ದು, ಬೆಳಗ್ಗೆಯೇ 330 ಮತಗಳು ದಾಖಲಾಗಿದ್ದವು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರದ ಮತಗಟ್ಟೆಯಲ್ಲಿ ಮಧ್ಯಾಹ್ನ 1.30ಕ್ಕೆ 194 ಮತದಾರರ ಪೈಕಿ 121 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

    82 ವರ್ಷದ ಉದ್ಯಮಿ ಮಿಟ್ಟು ಚಂಗಪ್ಪ ಸತತ 31ನೇ ಬಾರಿಗೆ ಮೊದಲಿಗರಾಗಿ ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ಮಡಿಕೇರಿ ಸಂತ ಮೈಕೆಲರ ಶಾಲಾ ಮತಗಟ್ಟೆಯಲ್ಲಿ ಪತ್ನಿ ಜೊತೆ ಬಂದು ಇವರು ಮತದಾನ ಮಾಡಿದರು
    ಕಡಗದಾಳು ಗ್ರಾಮದಲ್ಲಿ ಶುಕ್ರವಾರ ಮದುವೆ ನಿಶ್ಚಯವಾಗಿದ್ದ ತೀರ್ಥೇಶ್ ಎಂಬವರು ಮದುವೆ ಸಂಭ್ರಮದ ಮಧ್ಯೆಯೂ ಮತದಾನದ ಕರ್ತವ್ಯ ಮರೆಯಲಿಲ್ಲ. ಕಡಗದಾಳು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದರು. ವಿರಾಜಪೇಟೆ ತಾಲೂಕು ಬಿ. ಶೆಟ್ಟಿಗೇರಿ ಗ್ರಾಮದಲ್ಲಿ ಮತದಾನಕ್ಕಾಗಿ ಮತದಾನ ಕೇಂದ್ರದಲ್ಲಿ ನಿಂತಿದ್ದ ಸಂದರ್ಭ ಕುಸಿದು ಬಿದ್ದು ಪದಾರ್ಥಿ ಮನೋಹರ್ (58) ಎಂಬವರು ಮೃತಪಟ್ಟಿದ್ದಾರೆ. ಇವರು ಉತ್ಸವಗಳ ಸಂದರ್ಭದಲ್ಲಿ ಚಂಡೆವಾದಕರಾಗಿ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು.

    ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಾಲೂಕು ಪಂಚಾಯಿತಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ನಂತರ ಎಸ್‌ಪಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಹಾಗೂ ಉಪವಿಭಾಗಾಧಿಕಾರಿ ನರ್ವಾಡೆ ಜತೆಗೂಡಿ ಪ್ರಸಿದ್ಧ ಪ್ರವಾಸಿತಾಣ ರಾಜಸೀಟ್‌ಗೆ ತೆರಳಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು. ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು.

    ಮುಖ್ಯಮAತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ
    ಹುದಿಕೇರಿಯ ಬೆಳ್ಳೂರು ಬೂತ್ ನಂ 246ರಲ್ಲಿ ಮತ ಚಲಾಯಿಸಿದರು. ಪತ್ನಿ ಕಾಂಚನ ಪೊನ್ನಣ, ಸಹೋದರ ನರೇನ್ ಕಾರ್ಯಪ್ಪ ಸೇರಿದಂತೆ ಕುಟುಂಬಸ್ಥರು ಜತೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
    ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ 74 ರಲ್ಲಿ ಪತ್ನಿ ದಿವ್ಯಾ ಜತೆ ಆಗಮಿಸಿದ ಮತದಾನ ಮಾಡಿದರು.
    ಚಿತ್ರನಟಿ ತೇಜಸ್ವಿನಿ ಶರ್ಮಾ ಮಡಿಕೇರಿ ಜೂನಿಯರ್ ಕಾಲೇಜು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts