More

  ವಿರಾಟ್​ ಕೊಹ್ಲಿ ಹೆಂಡತಿ… ಕೀಳುಮಟ್ಟದ ಕಾಮೆಂಟ್​ ಮಾಡಿದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ!

  ಹೈದರಾಬಾದ್​: ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತರು. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ.

  ವೇಣುಸ್ವಾಮಿ ಕೆಲವೊಮ್ಮೆ ವಿವಾದಕ್ಕೂ ಸಿಲುಕಿದ್ದಾರೆ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ಕೆಲವರ ಕೆಂಗಣ್ಣಿಗು ಗುರಿಯಾಗಿದ್ದಾರೆ. ಇತ್ತೀಚೆಗೆ ವೇಣುಸ್ವಾಮಿ ಕೆಲವು ಚೀಪ್​ ಕಾಮೆಂಟ್​ಗಳನ್ನು ಮಾಡಿದ್ದಾರೆ. ಬೇರೊಬ್ಬರ ಮೇಲೆ ತಮ್ಮ ಕೋಪವನ್ನು ಹೊರಹಾಕಲು ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಹೆಸರನ್ನು ಬಳಸಿದರು. ಅಲ್ಲದೇ ಕೆಲವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

  ಅಂದಹಾಗೆ ವೇಣುಸ್ವಾಮಿ ಸದಾ ವೈರಲ್ ಆಗುತ್ತಲೇ ಇರುತ್ತಾರೆ. ಏಕೆಂದರೆ ಅವರ ಕಾಮೆಂಟ್‌ಗಳು ಅಷ್ಟರ ಮಟ್ಟಿಗೆ ಚರ್ಚೆಯಾಗುತ್ತವೆ. ಯಾರು ಯಾವಾಗ ಮದುವೆಯಾಗುತ್ತಾರೆ? ಯಾವ ಸೆಲೆಬ್ರಿಟಿ ಜೋಡಿಗಳ ಮದುವೆ ಮುರಿದು ಬೀಳುತ್ತದೆ? ಯಾವ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ? ಮುಂತಾದ ವಿಚಾರಗಳ ಬಗ್ಗೆ ಯಾರೂ ಕೇಳದಿದ್ದರೂ ಭವಿಷ್ಯ ನುಡಿಯುತ್ತಾರೆ. ಅದಕ್ಕಾಗಿಯೇ ಅವರು ಸಾಮಾನ್ಯವಾಗಿ ಟೀಕೆಗೆ ಗುರಿಯಾಗುತ್ತಾರೆ. ಆದರೆ, ನೆಟ್ಟಿಗರು ಮತ್ತು ತೆಲುಗು ರಾಜ್ಯಗಳ ಜನರ ಟ್ರೋಲ್​ಗೆ ವೇಣು ಸ್ವಾಮಿ ಮಾತ್ರ ತಲೆಕೆಡಿಸಿಕೊಳ್ಳುವುದಿಲ್ಲ.

  ಇತ್ತೀಚೆಗಷ್ಟೇ ವೇಣುಸ್ವಾಮಿ ಅವರು ತನ್ನನ್ನು ವಿಮರ್ಶಿಸುವ ಜ್ಯೋತಿಷಿಗಳಿಗೆ ವಿಡಿಯೋ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಈ ವೇಳೆ ರೋಹಿತ್​ ಮತ್ತು ಕೊಹ್ಲಿ ಹೆಸರನ್ನು ಬಳಸಿಕೊಂಡಿದ್ದಾರೆ. ಕೊಹ್ಲಿ ಶತಕ ಬಾರಿಸಿದರೆ, ನಾನು ಕೂಡ ಇದಕ್ಕಿಂತ ದೊಡ್ಡ ಶತಕ ಬಾರಿಸಬೇಕು ಅಂತಾ ರೋಹಿತ್​ ಅಂದುಕೊಳ್ಳುತ್ತಾರೆ. ರೋಹಿತ್​ ಚೆನ್ನಾಗಿ ಆಡುತ್ತಾರೆ, ಅವರ ಶೂ ಚೆನ್ನಾಗಿ, ರೋಹಿತ್​ ಹೆಂಡತಿ ಸುಂದರವಾಗಿದ್ದಾಳೆ, ಕೊಹ್ಲಿ ಪತ್ನಿ ಅನುಷ್ಕಾ ಸಖತ್ತಾಗಿರುವುದರಿಂದ ಕೊಹ್ಲಿ ಚೆನ್ನಾಗಿ ಆಡುತ್ತಾರೆ ಹೇಗೆ? ಇದೆಲ್ಲವೂ ಅರ್ಥವಿಲ್ಲದ ಚರ್ಚೆ. ನಿಮಗೆ ಧಮ್​ ಇದ್ದರೆ ನನ್ನನ್ನು ವಿಮರ್ಶಿಸಿ. ಆದರೆ, ಅಂತಾ ಜ್ಯೋತಿಷಿ ಯಾರೂ ಇಲ್ಲ. ಏಕೆಂದರೆ, ನೀವೆಲ್ಲ ಸಾಂಪ್ರದಾಯ ಬದ್ಧ ಮಾಡುವಂಥವರು. ಆದರೆ, ನಾನು ಸನ್ನಿ ಲಿಯೋನ್​ ಸಿನಿಮಾ ಮಾಡುವಂಥವನು ಅಂತಾ ಮೊದಲೇ ಹೇಳಿದ್ದೇನೆ. ಹೀಗಾಗಿ ನನ್ನ ಸಹವಾಸಕ್ಕೆ ಬರಬೇಡಿ. ನಾನು ಹೇಗೆ ಎಂಬುದು ನನ್ನ ಅಭಿಮಾನಿಗಳಿ ಗೊತ್ತು. ನಾನು ತುಂಬಾ ಕೆಟ್ಟದಾಗಿ ಮಾತನಾಡುತ್ತೇನೆ ಎಂಬುದು ಸಹ ತಿಳಿದಿದೆ ಎಂದು ವೇಣುಸ್ವಾಮಿ ಹೇಳಿದರು. ಇದಿಷ್ಟೇ ಅಲ್ಲದೆ, ಕೆಲವು ಡಬಲ್ ಮೀನಿಂಗ್ ಡೈಲಾಗ್‌ಗಳು ಮತ್ತು ಕೆಲವು ಒರಟಾದ ಗಾದೆಗಳ ಮೂಲಕ ಸಹ ಜ್ಯೋತಿಷಿಗಳಿಗೆ ತಿರುಗೇಟು ನೀಡಿದ್ದಲ್ಲದೆ, ತನ್ನನ್ನು ಟೀಕಿಸುವ ಹಕ್ಕು ಯಾವ ಜ್ಯೋತಿಷಿಗೂ ಇಲ್ಲ ಎಂದರು. ತಾನು ನೀಡಿರುವ ಜಾತಕಗಳಲ್ಲಿ ಯಾವುದಾದರೂ ನಕ್ಷತ್ರ ತಪ್ಪಿದ್ದರೆ, ಜಾತಕ ದೋಷವಿದ್ದರೆ ತೋರಿಸಿ ಟೀಕಿಸಬೇಕು ಎಂದು ಸವಾಲು ಹಾಕಿದರು.

  ತೆಲಂಗಾಣದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ವೇಣುಸ್ವಾಮಿ ಹೇಳಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬರಲ್ಲ ಎಂದು ಹೇಳುವ 3 ನಿಮಿಷದ ವಿಡಿಯೋ ಇದ್ದರೆ ಪ್ರೆಸ್ ಕ್ಲಬ್​ನಲ್ಲಿ ಪ್ರದರ್ಶಿಸಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಮತ್ತು ಜ್ಯೋತಿಷ್ಯವನ್ನು ಬಿಟ್ಟುಬಿಡುತ್ತೇನೆ ಎಂದರು. ಇದೀಗ ವೇಣುಸ್ವಾಮಿ ಕಾಮೆಂಟ್​ಗಳು ವೈರಲ್​ ಆಗಿದ್ದು, ಕೊಹ್ಲಿ ಮತ್ತು ವಿರಾಟ್​ ಪತ್ನಿಯರ ಬಗ್ಗೆ ಮಾತನಾಡಿದ್ದಕ್ಕೆ ಅಭಿಮಾನಿಗಳು ವೇಣುಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

  ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

  ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts