More

    ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

    ನವದೆಹಲಿ: ಜಾಗತಿಕ ಮಟ್ಟದಲ್ಲಿ ಐಪಿಎಲ್‌ಗೆ ಅತಿದೊಡ್ಡ ಕ್ರೇಜ್​ ಇದೆ. ಇದರ ಹಿಂದೆ ಸಾಕಷ್ಟು ಮಂದಿಯ ಶ್ರಮವೂ ಇದೆ. ಭಾರತದ ಸ್ಟಾರ್​ ಆಟಗಾರರು ಮತ್ತು ವಿದೇಶಿ ಆಟಗಾರರ ಜನಪ್ರಿಯತೆಯಿಂದಾಗಿ ಕ್ಯಾಶ್ ರಿಚ್ ಲೀಗ್ ಇಷ್ಟೊಂದು ಫೇಮಸ್ ಆಗಿದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್​ ಅಭಿಮಾನಿಗಳು ಹೆಚ್ಚಿರುವುದರಿಂದ ಐಪಿಎಲ್​ಗೆ ಈ ಮಟ್ಟದ ಕ್ರೇಜ್ ಇದೆ. ಕೆಲ ಆಟಗಾರರು ತಮ್ಮ ವಿಶಿಷ್ಟ ಆಟದ ಶೈಲಿಯಿಂದ ಲೀಗ್ ಅನ್ನು ಅಗ್ರಸ್ಥಾನಕ್ಕೆ ತಂದಿದ್ದಾರೆ.

    ಪ್ರತಿ ಸೀಸಸ್​ನಲ್ಲೂ ಅಮೋಘವಾಗಿ ಆಡುವ ಮೂಲಕ ಐಪಿಎಲ್​ ಲೀಗ್ ಕ್ರೇಜ್ ಅನ್ನು ಇಮ್ಮಡಿಗೊಳಿಸಿರುವ ಆಟಗಾರರಿದ್ದಾರೆ. ಇಂತಹ ಅಪರೂಪದ ಆಟಗಾರರ ಪಟ್ಟಿಯಲ್ಲಿ ಆರ್​ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಪಂದ್ಯದಲ್ಲಿದರೆ ಸಾಕು ಸ್ಟೇಡಿಯಂಗಳು ತುಂಬಿ ತುಳುಕುತ್ತವೆ, ಪ್ರೇಕ್ಷಕರು ಟಿವಿ, ಮೊಬೈಲ್ ಫೋನ್​ಗಳ ಮುಂದೆಯೂ ಸ್ಟ್ರೀಮಿಂಗ್ ಮಾಡಲು ಸಿದ್ಧರಾಗುತ್ತಾರೆ. ಕೊಹ್ಲಿ ಇಲ್ಲದ ಲೀಗ್ ಅನ್ನು ಊಹಿಸಲೂ ಸಾಧ್ಯವಿಲ್ಲ.

    ಐಪಿಎಲ್​ ಎಂದರೆ ಕೊಹ್ಲಿ.. ಕೊಹ್ಲಿ ಎಂದರೆ ಐಪಿಎಲ್ ಎನ್ನುವಂತಾಗಿದೆ. ವಿರಾಟ್ ಪ್ರತಿ ವರ್ಷ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್‌ನೊಂದಿಗೆ ಎಲ್ಲರನ್ನು ರಂಜಿಸುತ್ತಾರೆ. ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್, ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟಕ್ಕೂ ರಾಹುಲ್​ ಈ ರೀತಿ ಹೇಳಿದ್ಯಾಕೆ? ಕೊಹ್ಲಿಯನ್ನು ಯಾಕೆ ಬ್ಯಾನ್​ ಮಾಡಬೇಕು? ಕೊಹ್ಲಿ ಅಂಥದ್ದೇನು ಮಾಡಿದ್ರು ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿರಬಹುದು. ಆದರೆ, ಇದನ್ನು ತುಂಬಾ ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ. ಏಕೆಂದರೆ, ಕೆ.ಎಲ್​. ರಾಹುಲ್​ ಹೇಳಿದ್ದು ತಮಾಷೆಯಾಗಿ.

    ಐಪಿಎಲ್ ಹೊಸ ಸೀಸನ್ ಆರಂಭಕ್ಕೂ ಮುನ್ನ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೂರು ವರ್ಷದ ಹಿಂದಿನ ಹಳೆಯ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಕೊಹ್ಲಿ ಹಾಗೂ ಕೆಎಲ್ ರಾಹುಲ್​ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕರೆ ಮೂಲಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್​ರನ್ನು ಐಪಿಎಲ್​ನಿಂದ ಬ್ಯಾನ್​ ಮಾಡಬೇಕು ಎಂದು ರಾಹುಲ್ ಹೇಳಿದ್ದರು. ಅಲ್ಲದೆ, ನಿಮ್ಮೊಂದಿಗೆ ಎಬಿ ಡಿವಿಲಿಯರ್ಸ್ ಅವರನ್ನು ಸಹ ಐಪಿಎಲ್ ನಿಂದ ನಿಷೇಧಿಸಬೇಕು ಎಂದಿದ್ದರು. ಲೀಗ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದೀರಿ. 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ನೀವು ಪಕ್ಕಕ್ಕೆ ಸರಿದು ಆ ಜವಾಬ್ದಾರಿಯನ್ನು ನಮ್ಮಂತಹವರಿಗೆ ಒಪ್ಪಿಸಬೇಕು ಎಂದು ರಾಹುಲ್ ಈ ಹಿಂದೆ ಹೇಳಿದ್ದ ವಿಡಿಯೋ ಇದೀಗ ಮತ್ತೆ ವೈರಲ್​ ಆಗುತ್ತಿದೆ.

    ಇನ್ನೂ ರಾಹುಲ್ ಅವರನ್ನು ಐಪಿಎಲ್​ನಿಂದ ಬ್ಯಾನ್ ಮಾಡಬೇಕು ಎಂದು ಹೇಳಿದಾಗ ಕೊಹ್ಲಿ ಒಂದು ಸಲ ಜೋರಾಗಿ ನಕ್ಕರು. ಕೆ.ಎಲ್. ರಾಹುಲ್​ ಮಾತನಾಡುವವರೆಗೂ ವಿರಾಟ್ ನಗುತ್ತಲೇ ಇದ್ದರು. ಈ ವಿಡಿಯೋವನ್ನುಇ ನೋಡಿದ ನೆಟಿಜನ್‌ಗಳು ನಗುತ್ತಿದ್ದಾರೆ. ಕೊಹ್ಲಿ ಇಲ್ಲದ ಐಪಿಎಲ್ ಅನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಲ್ಲದೆ, ವಿರಾಟ್ ಅವರು ಹೆಚ್ಚು ಸೀಸನ್ ಆಡುತ್ತಾರೆ. ಐಪಿಎಲ್​ನಲ್ಲಿ ಅವರ ದಾಖಲೆಗಳನ್ನು ಮುರಿಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

    ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದ ರಾಹುಲ್, ಐಪಿಎಲ್ ಮೂಲಕ ಪುನರಾಗಮನ ಮಾಡುತ್ತಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅವರನ್ನು ಫಿಟ್ ಎಂದು ಘೋಷಿಸಿದೆ. ಆದರೆ ಅವರು ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ವಿಕೆಟ್ ಕೀಪಿಂಗ್‌ನಿಂದ ದೂರವಿದ್ದರೆ ಉತ್ತಮ ಎಂದು ಸಲಹೆ ನೀಡಿದೆ. (ಏಜೆನ್ಸೀಸ್​)

    ದಿನಗೂಲಿ ನೌಕರ ರಾಜಕೀಯ ಪಕ್ಷಕ್ಕೆ 1,368 ಕೋಟಿ ದಾನ ಮಾಡುವ ಮಟ್ಟಕ್ಕೆ ಬೆಳೆದಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ

    ಯುವಕನಾದ ನನ್ನನ್ನು ಬಲಿಪಶು ಮಾಡಿದರು ಅದೇ ಪರಿಸ್ಥಿತಿ ವೈದ್ಯರಿಗೆ ಆಗಬಾರದು: ನಿಖಿಲ್​ ಕುಮಾರಸ್ವಾಮಿ

    ಸೈನಿಕರನ್ನು ಹುರಿದುಂಬಿಸಲು ನೀಲಿ ತಾರೆ ಮೊರೆ ಹೋದ ಯೂಕ್ರೇನ್​! ಯೋಧರ ಜತೆ ಜೋಸೆಫೀನ್ ಜಾಕ್ಸನ್ ಪೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts