More

  ಸೈನಿಕರನ್ನು ಹುರಿದುಂಬಿಸಲು ನೀಲಿ ತಾರೆ ಮೊರೆ ಹೋದ ಯೂಕ್ರೇನ್​! ಯೋಧರ ಜತೆ ಜೋಸೆಫೀನ್ ಜಾಕ್ಸನ್ ಪೋಸ್​

  ಕೈವ್​: ಯೂಕ್ರೇನ್ ತನ್ನ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ರಷ್ಯಾ ವಿರುದ್ಧದ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಪುನರ್ವಸತಿ ಸೇರಿದಂತೆ ಇನ್ನಿತರ ಸಹಾಯ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಜೋಸೆಫೀನ್ ಜಾಕ್ಸನ್ ಎಂದೇ ಖ್ಯಾತಿ ಪಡೆದ ನೀಲಿ ತಾರೆ ಯುಲಿಯಾ ಸೆನಿಯುಕ್ ಜತೆ ಗಾಯಗೊಂಡ ಸೈನಿಕರು ಇತ್ತೀಚೆಗೆ ಚಾರಿಟಿ ಕ್ಯಾಲೆಂಡರ್ ಫೋಟೋಶೂಟ್ ಅನ್ನು ಯೂಕ್ರೇನ್ ಆಯೋಜಿಸಿತು.

  Josephine Jackson 2

  ಯೋಧರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರ ಜೀವನಶೈಲಿಯನ್ನು ಸುಧಾರಿಸಲು ಕ್ಯಾಲೆಂಡರ್ ಫೋಟೋಶೂಟ್ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಯೂಲಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ರಷ್ಯಾ ವಿರುದ್ಧದ ಯೂಕ್ರೇನ್​ ಯುದ್ಧದಲ್ಲಿ ತಮ್ಮ ಕೈ-ಕಾಲುಗಳನ್ನು ಕಳೆದುಕೊಂಡ 12 ಸೈನಿಕರು ಯುಲಿಯಾ ಅವರೊಂದಿಗೆ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ಭಾಗವಹಿಸಿದರು. ನಟಿ ಗೌನ್ ಧರಿಸಿ ಆಗಮಿಸಿದ್ದರು. ಕ್ಯಾಲೆಂಡರ್ ಮಾರಾಟದಿಂದ ಬರುವ ಹಣವನ್ನು ಗಾಯಗೊಂಡ ಸೈನಿಕರ ಪುನರ್ವಸತಿ ಮತ್ತು ಪ್ರಾಸ್ಥೆಟಿಕ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

  Josephine Jackson 1

  ಇನ್ನೂ 2022ರ ಫೆಬ್ರವರಿ 20ರಲ್ಲಿ ಪ್ರಾರಂಭವಾದ ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಈಗಲೂ ಮುಂದುವರಿದಿದೆ. ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಲೇ ಇದೆ. ಯೂಕ್ರೇನ್ ಮಾತ್ರ ರಷ್ಯಾ ಯುದ್ಧಕ್ಕೆ ಇನ್ನೂ ಶರಣಾಗಿಲ್ಲ. ಅದರೆ, ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಯುದ್ಧದ ನಂತರ ಯೂಕ್ರೇನ್ ಆರ್ಥಿಕ ನಾಶದ ಸ್ಥಿತಿಯಲ್ಲಿದೆ. (ಏಜೆನ್ಸೀಸ್​)

  ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

  ದಿನಗೂಲಿ ನೌಕರ ರಾಜಕೀಯ ಪಕ್ಷಕ್ಕೆ 1,368 ಕೋಟಿ ದಾನ ಮಾಡುವ ಮಟ್ಟಕ್ಕೆ ಬೆಳೆದಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts