More

    ದಿನಗೂಲಿ ನೌಕರ ರಾಜಕೀಯ ಪಕ್ಷಕ್ಕೆ 1,368 ಕೋಟಿ ದಾನ ಮಾಡುವ ಮಟ್ಟಕ್ಕೆ ಬೆಳೆದಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ

    ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ದಾನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಫ್ಯೂಚರ್​ ಗೇಮಿಂಗ್​ ಪ್ರೈವೆಟ್​ ಲಿಮಿಟೆಡ್​ ಕಂಪನಿಯ ಸಂಸ್ಥಾಪಕ ಸ್ಯಾಂಟಿಯಾಗೋ ಮಾರ್ಟಿನ್​ ಹೆಸರು ಮೊದಲ ಸ್ಥಾನದಲ್ಲಿತ್ತು. ಇವರು ಚುನಾವಣಾ ಬಾಂಡ್​ಗಳ ಮೂಲಕ ರಾಜಕೀಯ ಪಕ್ಷಕ್ಕೆ ನೀಡಿದ ದೇಣಿಗೆಯ ಮೊತ್ತ ಬರೋಬ್ಬರಿ 1,368 ಕೋಟಿ ರೂಪಾಯಿ. ಹೀಗಾಗಿ ಮಾರ್ಟಿನ್​ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಯಾರು ಈತ? ಇಷ್ಟೊಂದು ಹಣ ಹೇಗೆ ಬಂತು? ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

    1961ರಲ್ಲಿ ಅಂಡಮಾನ್​ನಲ್ಲಿ ಜನಿಸಿದ ತಮಿಳುನಾಡಿನ ಕೊಯಮತ್ತೂರು ಮೂಲದ ಸಾಂಟಿಯಾಗೋ ಮಾರ್ಟಿನ್​ ಯಾರು? ತಮಿಳುನಾಡಿನಲ್ಲಿ ಲಾಟರಿ ಟಿಕೆಟ್‌ಗಳ ಮಾರಾಟವು ಲಾಭದಾಯಕ ವ್ಯವಹಾರವಾಗಿದ್ದ 1980ರ ದಶಕಕ್ಕೆ ಒಮ್ಮೆ ಹಿಂತಿರುಗಿ ನೋಡೋಣ. ಈ ಸಂದರ್ಭದಲ್ಲಿ ಚೆನ್ನೈನಲ್ಲಿ ಡೆಕ್ಕನ್ ಏಜೆನ್ಸಿಸ್, ಮಧುರೈನಲ್ಲಿ ಕೆಎ ಎಸ್ ಶೇಖರ್ ಮತ್ತು ತಿರುಚ್ಚಿಯಲ್ಲಿ ಅವರ ಸಹೋದರ ರಾಮದಾಸ್ ಅವರ ಪ್ರಾದೇಶಿಕ ಕಂಪನಿಗಳಿದ್ದವು. ಇದೇ ಸಮಯದಲ್ಲಿ ಮಯನ್ಮಾರ್​ನಲ್ಲಿ ದಿನಗೂಲಿ ನೌಕರನಾಗಿದ್ದ ಮಾರ್ಟಿನ್​ ಭಾರತಕ್ಕೆ ಮರಳಿದರು. ಸಹೋದರಿಯರು ನೆಲೆಸಿದ್ದ ಕೊಯಮತ್ತೂರಿನಲ್ಲಿ ಮಾರ್ಟಿನ್​ ನೆಲೆಸಿದರು. ತಾತಾಬಾದ್‌ನಲ್ಲಿದ್ದ ತನ್ನ ಪಾಲಕರ ಮಾಲೀಕತ್ವದ ಸ್ಟೋರ್​ ಒಂದರ ಬಳಿ ಟೀ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿದರು.

    ಆ ದಿನಗಳಲ್ಲಿ ಲಾಟರಿಗೆ ಇದ್ದ ಕ್ರೇಜ್​ ಅನ್ನು ಮಾರ್ಟಿನ್​ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದರಿಂದ ಪ್ರಭಾವಿತನಾದ ಮಾರ್ಟಿನ್​, ತಾನೇ ಒಂದು ಸ್ವಂತ ಅಂಗಡಿ ಓಪನ್​ ಮಾಡಿದಾಗ ತುಂಬಾ ಬೇಗ ಲಾಭ ಪಡೆಯುವ ಮಾರ್ಗ ಇದೇ ಎಂಬುದನ್ನು ಕಂಡುಕೊಂಡರು. ಇದೇ ಲಾಟರಿ ವ್ಯವಹಾರ ಮಾರ್ಟಿನ್​ಗೆ ಡಬಲ್​ ಬೋನಸ್​ ತಂದುಕೊಟ್ಟಿತು ಎಂದು ಮಾರ್ಟಿನ್​ ಪತ್ನಿ ಲೀಮಾ ರೋಸ್​ ಸ್ವತಃ ಹೇಳಿಕೊಂಡಿದ್ದಾರೆ.

    ಒಂದೆಡೆ ಲಾಟರಿ ಮಾರಾಟವು ವೇಗವಾಗಿ ಬೆಳೆಯಿತು. ಇದಿಷ್ಟೇ ಇಲ್ಲದೆ, ಮಾರಾಟವಾಗದೇ ಉಳಿದ ಟಿಕೆಟ್‌ಗಳಿಂದ ಆಗಾಗ ಬಹುಮಾನಗಳು ಸಹ ಬರಲು ಆರಂಭಿಸಿತು. ಇದರಿಂದ ಕಡಿಮೆ ಸಮಯದಲ್ಲಿ ಮಾರ್ಟಿನ್​ ಶ್ರೀಮಂತನಾದ. 1987ರಲ್ಲಿ ಮಾರ್ಟಿನ್​ ಮದುವೆಯಾದರು. ಆಗ ಅವರಿಗ 26 ವರ್ಷ. ಆ ಸಮಯದಲ್ಲಿ ಮಾರ್ಟಿನ್, ಕೊಯಮತ್ತೂರಿನಲ್ಲಿ ಐದು ಲಾಟರಿ ಅಂಗಡಿಗಳನ್ನು ತೆರೆದಿದ್ದರು. ನಂತರ ಅವರು 1988 ರಲ್ಲಿ ಲಾಟರಿ ಟಿಕೆಟ್‌ಗಳನ್ನು ಮುದ್ರಿಸಲು ತೊಡಗಿದರು. ಬಹು ಬ್ರಾಂಡ್‌ಗಳು ಮತ್ತು ಹೆಚ್ಚಿನ ಬಹುಮಾನದ ಕೊಡುಗೆಗಳೊಂದಿಗೆ ತಮ್ಮದೇಯಾದ ಲಾಟರಿ ವ್ಯವಹಾರವನ್ನು ಸಹ ಪ್ರಾರಂಭಿಸಿದರು.

    ಹೀಗೆ ದಿನಗಳು ಕಳೆದಂತೆ 1990ರಲ್ಲಿ ಮಾರ್ಟಿನ್​ ತಮಿಳುನಾಡಿನ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮಿದರು. ಆದರೆ ಮಧುರೈನ ಕೆಎ ಎಸ್ ಶೇಖರ್ ಕಂಪನಿ ಜತೆ ಜಿದ್ದಾಜಿದ್ದಿ ಹೊಂದಿದ್ದರು. ಬಹುಶಃ, ಈ ಪೈಪೋಟಿಯಿಂದಾಗಿಯೇ ಮಾರ್ಟಿನ್​ ವ್ಯಾಪಾರ ಮತ್ತು ತಮಿಳುನಾಡಿನಲ್ಲಿ ಲಾಟರಿ ವ್ಯಾಪಾರಕ್ಕೆ ಮೊದಲ ಹೊಡೆತ ಬಿದ್ದಿತು. ಈ ಲಾಟರಿ ಟಿಕೆಟ್​ಗಳ ಬಡ ಕುಟುಂಬಗಳ ರಕ್ತವನ್ನು ಹೀರುತ್ತಿವೆ ಎಂಬ ಆಕ್ರೋಶಗಳು ವ್ಯಕ್ತವಾದ ಬಳಿಕ 2003ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ತಮಿಳುನಾಡಿನಲ್ಲಿ ಲಾಟರಿ ಟಿಕೆಟ್​ ಅನ್ನು ಬ್ಯಾನ್​ ಮಾಡಿದರು. ಯಾವಾಗ ಬ್ಯಾನ್​ ಆಯಿತು ಮಾರ್ಟಿನ್​ ತಮ್ಮ ಅಂಗಡಿಯನ್ನು ತಮಿಳುನಾಡಿನಲ್ಲಿ ಖಾಲಿ ಮಾಡಿಕೊಂಡು ಕರ್ನಾಟಕ, ಕೇರಳ, ಈಶಾನ್ಯ ಭಾರತ ಮತ್ತು ನೆರೆಯ ರಾಷ್ಟ್ರ ಭೂತಾನ್​ನಲ್ಲಿ ತನ್ನ ಶಾಖೆಗಳನ್ನು ತೆರೆದರು.

    ಜನರ ಮನಸ್ಸನ್ನು ಅರಿತುಕೊಳ್ಳುವಲ್ಲಿ ಮಾರ್ಟಿನ್​ ನಿಪುಣನಾಗಿದ್ದ ಎಂದು ಅವರ ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದಾರೆ. ತಮ್ಮ ಬುದ್ಧಿ ಸಾಮರ್ಥ್ಯದಿಂದ ಜನರನ್ನು ನಿರ್ಣಯಿಸುವ ಮತ್ತು ತನ್ನ ಉದ್ಯಮದ ಮಾರ್ಗವನ್ನು ನ್ಯಾವಿಗೇಟ್ ಮಾಡುವ ಮಾರ್ಟಿನ್​ ಸಾಮರ್ಥ್ಯವೇ ಅವರನ್ನು ‘ಲಾಟರಿ ರಾಜ’ನನ್ನಾಗಿ ಮಾಡಿತು. ಹೀಗಿರುವಾಗ 2000ರ ದಶಕದ ಅಂತ್ಯದ ವೇಳೆಗೆ ಮಾರ್ಟಿನ್, ಅಸಾಧಾರಣ ಸಾಮ್ರಾಜ್ಯವನ್ನೇ ನಿರ್ಮಿಸಿದರು ಮತ್ತು ತಮಿಳುನಾಡು ರಾಜಕೀಯದಲ್ಲೂ ತೊಡಗಿಸಿಕೊಂಡರು. ಒಂದು ಹಂತದಲ್ಲಂತೂ ಡಿಎಂಕೆಗೆ ಮಾರ್ಟಿನ್​ ತುಂಬಾ ಹತ್ತಿರವಾಗಿದ್ದರು.

    ಡಿಎಂಕೆ ಸಂಸ್ಥಾಪಕ ಎಂ. ಕರುಣಾನಿಧಿ ಜತೆಗಿನ ನಿಕಟ ಸಂಪರ್ಕವೇ ಜಯಲಲಿತಾ ಅವರು ಲಾಟರಿ ನಿಷೇಧ ಮಾಡಲು ಕಾರಣ ಎಂದು ಕೆಲವು ವದಂತಿಗಳಿವೆ. ಕೇರಳದ ಸಿಪಿಎಂನ ಮುಖವಾಣಿ ದೇಸಾಬಿಮಾನಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ ಆರೋಪದ ಬಳಿಕ 2008ರಲ್ಲಿ ಮೊದಲ ಬಾರಿಗೆ ಮಾರ್ಟಿನ್​ ವಿವಾದಕ್ಕೆ ಗುರಿಯಾದರು. ಮಾರ್ಟಿನ್​ ಅವರ ನೆಟ್‌ವರ್ಕ್ ಎಷ್ಟು ವಿಸ್ತಾರವಾಗಿದೆಯೆಂದರೆ, ಈಶಾನ್ಯದಲ್ಲಿ ಹಲವಾರು ಅಧಿಕಾರಿಗಳು ಕೂಡ ಮಾರ್ಟಿನ್​ ವೇತನದಾರರ ಪಟ್ಟಿಯಲ್ಲಿದ್ದಾರೆ ಎಂಬ ದೂರುಗಳು ಸಹ ಬಂದವು.

    ಮಾರ್ಟಿನ್​ ಅವರು 2008 ರಿಂದ 2010 ರವರೆಗೆ ಸಿಕ್ಕಿಂ ಸರ್ಕಾರವನ್ನು ವಂಚಿಸಿರುವ ಆರೋಪವಿದೆ. ಜಾರಿ ನಿರ್ದೇಶನಾಲಯ (ED)ದ ಪ್ರಕಾರ 910 ಕೋಟಿ ರೂಪಾಯಿಗಳ ಕಾನೂನುಬಾಹಿರ ಲಾಭವನ್ನು ಮಾರ್ಟಿನ್​ ಗಳಿಸಿದ್ದಾರೆ. ಹೀಗಾಗಿ ಅಂದಿನಿಂದ ಮಾರ್ಟಿನ್​ ಅವರು ಆದಾಯ ತೆರಿಗೆ ಇಲಾಖೆ ಮತ್ತು ಇಡಿಯ ಕಣ್ಗಾವಲಿನಲ್ಲಿದ್ದಾರೆ. ಅಪಾಯಿಂಟ್‌ಮೆಂಟ್ ಇಲ್ಲದಿದ್ದರೂ ಮುಖ್ಯಮಂತ್ರಿಗಳನ್ನು ಮಾರ್ಟಿನ್ ಅವರು​​ ನೇರವಾಗಿ ಭೇಟಿಯಾಗುತ್ತಿದ್ದರು ಎಂದು ಕೊಯಮತ್ತೂರಿನ ಕೈಗಾರಿಕೋದ್ಯಮಿಯೊಬ್ಬರು ಹೇಳುತ್ತಾರೆ. ಅವರು ದೇಣಿಗೆಯಲ್ಲಿ ಉದಾರರಾಗಿದ್ದರೂ ಅದ್ದೂರಿಯಾಗಿ ಬದುಕುತ್ತಿರಲಿಲ್ಲ. ಸರಳ ಜೀವನವನ್ನು ನಡೆಸುತ್ತಿದ್ದರು. ಮುಂಜಾನೆ ಬೇಗ ಏಳುತ್ತಿದ್ದರು, ತುಂಬಾ ಆರೋಗ್ಯ ಪ್ರಜ್ಞೆ ಹೊಂದಿದ್ದರು ಎಂದು ಸ್ನೇಹಿತರು ಹೇಳುತ್ತಾರೆ. ಅಲ್ಲದೆ, ಪ್ರತಿ ರೂಪಾಯಿಯನ್ನು ಮಾರ್ಟಿನ್​ ಲೆಕ್ಕದಲ್ಲಿ ಇಟ್ಟುಕೊಳ್ಳುತ್ತಿದ್ದರು.

    2011ರಲ್ಲಿ ಕರುಣಾನಿಧಿ ಬರೆದ ‘ಇಲೈಜ್ಞಾನ್’ ಚಿತ್ರವನ್ನು ಮಾರ್ಟಿನ್ ನಿರ್ಮಿಸಿದರು, ಆದರೆ, ಈ ಸಿನಿಮಾದ ಫ್ಲಾಪ್​ ಆಯಿತು. ಅಲ್ಲದೆ, ಇದು ಅವರ ಸಿನಿಮಾ ವೃತ್ತಿಜೀವನದ ಆರಂಭ ಮತ್ತು ಅಂತ್ಯವನ್ನು ಗುರುತಿಸಿತು. ಆದಾಗ್ಯೂ, ಕರುಣಾನಿಧಿಯೊಂದಿಗಿನ ಅವರ ಒಡನಾಟ ಚಿತ್ರದ ನಷ್ಟವನ್ನು ಮೀರಿಸಿದೆ. 2011ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದ ಕೆಲವು ತಿಂಗಳ ನಂತರ, ಮಾರ್ಟಿನ್ ಅವರನ್ನು ಭೂಕಬಳಿಕೆ ಪ್ರಕರಣದಲ್ಲಿ ಬಂಧಿಸಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಮಾರ್ಟಿನ್​ ವಿರುದ್ಧ 2011-2012ರಲ್ಲಿ ರಾಜ್ಯದ ವಿವಿಧೆಡೆ ಭೂಕಬಳಿಕೆ, ಅಕ್ರಮ ಲಾಟರಿ ಮಾರಾಟ ಹಾಗೂ ವಂಚನೆಗೆ ಸಂಬಂಧಿಸಿದ 14 ಪ್ರಕರಣಗಳು ದಾಖಲಾಗಿದ್ದವು. 2012, ಮೇ 7 ರಂದು ಬಿಡುಗಡೆಯಾಗುವವರೆಗೂ ಎಂಟು ತಿಂಗಳುಗಳ ಕಾಲ ವಿವಿಧ ಜೈಲುಗಳಲ್ಲಿ ಮಾರ್ಟಿನ್​ ಕಾಲ ಕಳೆದರು.

    ಮಾರ್ಟಿನ್​ ಬಂಧನದ ನಂತರ, ಅವರ ಪತ್ನಿ ರಾಜಕೀಯಕ್ಕೆ ಸೇರಿದರು ಮತ್ತು ಭಾರತೀಯ ಜನನಾಯಕ ಕಚ್ಚಿ (ಐಜೆಕೆ) ಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2014ರಲ್ಲಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದಾಗ ಲೀಮಾ ರೋಸ್ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ವರ್ಷಗಳ ನಂತರ, ಅವರ ಹಿರಿಯ ಮಗ ಚಾರ್ಲ್ಸ್ ಜೋಸ್ ಬಿಜೆಪಿಗೆ ಸೇರಿದರು. ಅವರ ಸಹೋದರ ಟೈಸನ್ ಮಾರ್ಟಿನ್ ತಮ್ಮದೇ ಆದ ‘ತಮಿಲರ್ ವಿಡಿಯಾಲ್ ಕಚ್ಚಿ’ ಪಕ್ಷವನ್ನು ಸ್ಥಾಪಿಸಿದರು. ಮಾರ್ಟಿನ್ ಅವರ ಅಳಿಯ ಅಧವ್ ಅರ್ಜುನ್ ಇತ್ತೀಚೆಗೆ ವಿಸಿಕೆಗೆ ಸೇರಿದ್ದಾರೆ. ಆದರೆ, ಮಾರ್ಟಿನ್ ಮಾತ್ರ ರಾಜಕೀಯದಿಂದ ದೂರವಿದ್ದುಕೊಂಡು ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಮಾಧ್ಯಮಗಳಲ್ಲಿನ ಹೊಸ ಉದ್ಯಮಗಳ ಮೇಲೆ ಕೇಂದ್ರೀಕರಿಸಿದರು. ಆದರೆ, ಲಾಟರಿ ವ್ಯವಹಾರದಲ್ಲಿ ಗಳಿಸಿದ ಯಶಸ್ಸನ್ನು ಈ ಕ್ಷೇತ್ರಗಳಲ್ಲಿ ಸಾಧಿಸಲಿಲ್ಲ.

    ಮಾರ್ಟಿನ್ ಅವರು 2002-2003ರಲ್ಲಿ ಭಾರತದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆದಾರರಾಗಿದ್ದರು. ಅವರು ಮತ್ತು ಅವರ ಕಂಪನಿಗಳ ಸಮೂಹವು 2017 ಜುಲೈನಿಂದ 2023ರ ಸೆಪ್ಟೆಂಬರ್​ವರೆಗೆ (ವರ್ಷಕ್ಕೆ ರೂ 5,000 ಕೋಟಿ) 23,199 ಕೋಟಿ ರೂ. ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಫ್ಯೂಚರ್​ ಗೇಮಿಂಗ್​ ಕಂಪನಿ 2023ರ ಹೇಳಿಕೆಯಲ್ಲಿ ತಿಳಿಸಿದೆ. ಮಾರ್ಟಿನ್ ಅವರು 1985 ಮತ್ತು 2023ರ ನಡುವೆ ಆದಾಯ ತೆರಿಗೆಯಾಗಿ ಸುಮಾರು 4,577 ಕೋಟಿ ರೂ. ಪಾವತಿಸಿದ್ದಾರೆ.

    2023ರ ಅಕ್ಟೋಬರ್‌ನಲ್ಲಿ ಐಟಿ ಅಧಿಕಾರಿಗಳು ಮಾರ್ಟಿನ್​ ಅವರ ಕೊಯಮತ್ತೂರು ನಿವಾಸವನ್ನು ಪರಿಶೀಲಿಸಿದಾಗ ಅವರು ಕೊನೆಯದಾಗಿ ಸುದ್ದಿಯಲ್ಲಿದ್ದರು. ಬಹುಶಃ ಈ ದಾಳಿ ಬೆದರಿಕೆ ಉದ್ದೇಶಿಸಿರಬಹುದು. ಆದರೆ ನಾವು ನಮ್ಮ ವ್ಯವಹಾರಗಳನ್ನು ಕಾನೂನುಬದ್ಧವಾಗಿ ನಡೆಸುತ್ತೇವೆ ಎಂದು ಲೀಮಾ ರೋಸ್ ಈ ಸಂದರ್ಭದಲ್ಲಿ ಹೇಳಿದ್ದರು. ಈ ವಿವಾದದ ಬಗ್ಗೆ ಮಾರ್ಟಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಷ್ಟದ ಪರಿಸ್ಥಿತಿಯಿಂದ ಹೊರಬರಲು ಮಾರ್ಟಿನ್ ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಅವರನ್ನು ಚೆನ್ನಾಗಿ ತಿಳಿದಿರುವವರು ಹೇಳುತ್ತಾರೆ. (ಏಜೆನ್ಸೀಸ್​)

    ನಮ್ಮ ಹೀರೋನೇ ಗ್ರೇಟ್​ ಅಂತಾ ಕಿತ್ತಾಡೋದಲ್ಲ, ಅಭಿಮಾನ ಅಂದ್ರೆ ಹೀಗಿರಬೇಕು! ಗಂಗೂಲಿ ಅಭಿಮಾನಿಯ ರೋಚಕ ಕತೆ

    ಇಳಿ ವಯಸ್ಸಿನಲ್ಲಿ ಗಂಡು ಮಗು ಜನನ: ಸಿಧು ಮೂಸೆವಾಲ ತಂದೆ-ತಾಯಿಗೆ ಪಂಜಾಬ್​ ಸರ್ಕಾರದಿಂದ ಕಿರುಕುಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts