More

    ನಮ್ಮ ಹೀರೋನೇ ಗ್ರೇಟ್​ ಅಂತಾ ಕಿತ್ತಾಡೋದಲ್ಲ, ಅಭಿಮಾನ ಅಂದ್ರೆ ಹೀಗಿರಬೇಕು! ಗಂಗೂಲಿ ಅಭಿಮಾನಿಯ ರೋಚಕ ಕತೆ

    ಕೋಲ್ಕತ: ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಬ್ಯಾನರ್ಜಿ. ಕೋಲ್ಕತ್ತಾದಲ್ಲಿ ವಾಸ ಮಾಡುತ್ತಿದ್ದಾರೆ. ಎಲ್ಲ ಯುವಕರಂತೆ ಈತನಿಗೂ ಕ್ರಿಕೆಟ್ ಹುಚ್ಚು. ರಾಯಲ್ ಬೆಂಗಾಲ್ ಟೈಗರ್, ಭಾರತೀಯ ಕ್ರಿಕೆಟ್‌ನ ದಾದಾ ಸೌರವ್ ಗಂಗೂಲಿ ಅಂದರೆ ಬ್ಯಾನರ್ಜಿಗೆ ಪಂಚಪ್ರಾಣ.

    ವರ್ಷಗಳು ಕಳೆದಂತೆ ಗಂಗೂಲಿ ಮೇಲಿನ ಬ್ಯಾನರ್ಜಿ ಅಭಿಮಾನವು ಎಲ್ಲೆಯನ್ನೇ ಮೀರಿತು. ಅಂತಿಮವಾಗಿ ಬ್ಯಾನರ್ಜಿ ತಮ್ಮ ಹೆಸರಿನ ಮುಂದೆ ಗಂಗೂಲಿ ಹೆಸರನ್ನು ಅಧಿಕೃತವಾಗಿ ಸೇರಿಸಿಕೊಂಡರು. ವ್ಯಕ್ತಿ ಪೂಜೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಬ್ಯಾನರ್ಜಿ ಅಭಿಮಾನವನ್ನು ಅವರನ್ನು ಪಾಸಿಟಿವ್ ಟ್ರ್ಯಾಕ್​ಗೆ ತಿರುಗಿಸಿತು. ಬ್ಯಾನರ್ಜಿ ಅವರು ತಮ್ಮ ಆರಾಧ್ಯ ಕ್ರಿಕೆಟಿಗನ ಸ್ಫೂರ್ತಿಯಿಂದಲೇ ಜೀವನದಲ್ಲೂ ಗೆದ್ದರು.

    ಅಂದಹಾಗೆ ಬ್ಯಾನರ್ಜಿ ಮೊದಲು ಸರಾಸರಿ ವಿದ್ಯಾರ್ಥಿಯಾಗಿದ್ದರು. ಬ್ಯಾನರ್ಜಿಗೆ ಗಂಗೂಲಿ ಆಟ ಬಿಟ್ಟರೆ ಬೇರೆ ಪ್ರಪಂಚ ಗೊತ್ತಿರಲಿಲ್ಲ. ಆದರೆ, ಗಂಗೂಲಿ ಕೆಲ ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತರಾಗಿದರು. ಇದರಿಂದ ಸಹಜವಾಗಿಯೇ ಬ್ಯಾನರ್ಜಿ ಅವರು ಪಂದ್ಯಗಳನ್ನು ನೋಡುವುದನ್ನು ಕಡಿಮೆ ಮಾಡಿದರು. ದಾದಾ ನಂತರ ಕ್ರಿಕೆಟ್​ನಲ್ಲೂ ತಲೆಮಾರು ಬದಲಾಯಿತು. ಧೋನಿ, ಕೊಹ್ಲಿ, ರೋಹಿತ್‌ನಂತಹ ಸ್ಟಾರ್‌ಗಳು ಹುಟ್ಟಿದ್ದಾರೆ. ಆಟದ ವೇಗ ಹೆಚ್ಚಿದೆ. ಕಾಲವು ಗಂಗೂಲಿ, ಸಚಿನ್​ರಂತಹ ಸ್ಟಾರ್​ಗಳನ್ನು ದಂತಕಥೆಗಳನ್ನಾಗಿಸಿ ಮುಂದೆ ಸಾಗಿದೆ.

    ಕಾಲ ಸಾಗಿದರೂ ಬ್ಯಾನರ್ಜಿ ಮಾತ್ರ ಗಂಗೂಲಿ ಅಭಿಮಾನಕ್ಕೆ ಅಂಟಿಕೊಂಡರು. ಗಂಗೂಲಿ ಅವರು ಕ್ರಿಕೆಟ್​ನಿಂದ ದೂರವಾದ ಬಳಿಕ ಏನು ಮಾಡಬೇಕೆಂದು ತಿಳಿಯದೆ, ನಿಧಾನವಾಗಿ ಗಂಗೂಲಿ ಜೀವನ ಮತ್ತು ವೃತ್ತಿ ಜೀವನವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ಹುಟ್ಟಿನಿಂದಲೇ ರಾಜಮನೆತನ.. ಈಡನ್‌ನಲ್ಲಿ ಮೊದಲ ಶತಕ, ಕಠಿಣ ಸಂದರ್ಭದಲ್ಲಿ ಟೀಮ್​ ಇಂಡಿಯಾ ನಾಯಕತ್ವ ವಹಿಸಿಕೊಂಡ ಕ್ಷಣಗಳು ಮತ್ತು ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ ರೀತಿ, ಗಂಗೂಲಿ ಅವರ ಕಠಿಣ ಪರಿಶ್ರಮ, ಬದ್ಧತೆಯನ್ನು ಅರ್ಥಮಾಡಿಕೊಂಡ ನಂತರ ಬ್ಯಾನರ್ಜಿಯವರ ಆಲೋಚನೆಗಳಲ್ಲಿ ಬದಲಾವಣೆಯಾಯಿತು.

    ಬ್ಯಾನರ್ಜಿ ತನ್ನ ನೆಚ್ಚಿನ ಕ್ರಿಕೆಟಿಗ ಗಂಗೂಲಿಯಂತೆ ಕಠಿಣ ಪರಿಶ್ರಮ ಪಡಲು ನಿರ್ಧರಿಸಿದರು. ಪೋಲೀಸ್ ಆಗುವ ಗುರಿಯನ್ನು ಹೊಂದಿದ್ದರು. ಇದಕ್ಕಾಗಿ ಹಗಲು ರಾತ್ರಿ ಶ್ರಮಿಸಿದರು. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಎಂದು ಅರಿತರು. ಜೀವನದಲ್ಲಿ ವಿಜೇತರಾಗಲು ತಮ್ಮ ಶಕ್ತಿ ಮೀರಿ ಹೋರಾಡಿದರು. ಈ ಸಂಪೂರ್ಣ ಪ್ರಯಾಣದುದ್ದಕ್ಕೂ ಗಂಗೂಲಿಯವರ ಮಾರ್ಗದರ್ಶನ ಬ್ಯಾನರ್ಜಿಯ ಪ್ರೇರಕ ಶಕ್ತಿಯಾಗಿತ್ತು. ಒಟ್ಟಿನಲ್ಲಿ ಆ ಪಯಣದಲ್ಲಿ ಬ್ಯಾನರ್ಜಿ ಯಶಸ್ವಿಯಾದರು. ಅಂತಿಮವಾಗಿ, ಅವರು ಕೋಲ್ಕತ್ತಾದ ಪೊಲೀಸ್ ಠಾಣೆಗೆ ಎಸ್‌ಐ ಆಗಿ ಸೇರಿದರು.

    ಬ್ಯಾನರ್ಜಿ ಅಧಿಕಾರಿಯಾದ ಮೇಲೂ ಗಂಗೂಲಿಯೇ ಜೀವನ. ಒಂದು ದಿನ ಅವನು ತನ್ನ ಪ್ರಯಾಣದ ಬಗ್ಗೆ ತನ್ನ ಗುರುಗಳಿಗೆ ತಿಳಿಸಲು ದಾದಾನನ್ನು ಭೇಟಿ ಮಾಡಲು ಹೋದರು. ಅಭಿಮಾನಿಯೊಬ್ಬನ ಮೇಲೆ ತುಂಬಾ ಪ್ರಭಾವ ಬೀರಿದ್ದಕ್ಕೆ ಗಂಗೂಲಿ ಕೂಡ ತುಂಬಾ ಖುಷಿಪಟ್ಟಿದ್ದಾರೆ. ಸದ್ಯ ದಾದಾ ಅಭಿಮಾನಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಗಂಗೂಲಿಯಂತಹ ಶ್ರೇಷ್ಠ ನಾಯಕತ್ವದ ಗುಣಗಳಿರುವ ವ್ಯಕ್ತಿಯನ್ನು ಮೆಚ್ಚಿದ ಬ್ಯಾನರ್ಜಿ ಇಂದು ಜೀವನದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಸಂಪೂರ್ಣ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಐಪಿಎಲ್​ ತಂಡಗಳಿಗೆ ಈ ಬೀಸ್ಟ್​ ಅಂದ್ರೆ ಭಯ! RCBಯ ಈ ಬಿರುಗಾಳಿಯನ್ನು ತಡೆಯುವವರು ಯಾರು?

    ಖಡಕ್‌ ರೊಟ್ಟಿ-ಶೇಂಗಾ ಚಟ್ನಿಯೇ ನನಗಿಷ್ಟ ಎಂದ ಕನ್ನಡತಿ ಶ್ರೇಯಾಂಕಾ ಪಾಟೀಲ್‌; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts