More

    ಇಳಿ ವಯಸ್ಸಿನಲ್ಲಿ ಗಂಡು ಮಗು ಜನನ: ಸಿಧು ಮೂಸೆವಾಲ ತಂದೆ-ತಾಯಿಗೆ ಪಂಜಾಬ್​ ಸರ್ಕಾರದಿಂದ ಕಿರುಕುಳ

    ಚಂಡೀಗಢ: ಎರಡನೇ ಪುತ್ರನನ್ನು ಸ್ವಾಗತಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಭಗವಂತ್​ ಮಾನ್​ ನೇತೃತ್ವದ ಪಂಜಾಬ್​ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ತಂದೆ ಬಾಲಕೌರ್​ ಸಿಂಗ್​ ಗಂಭೀರ ಆರೋಪ ಮಾಡಿದ್ದಾರೆ.

    ಬಾಲಕೌರ್​ ಸಿಂಗ್​ ಪತ್ನಿ ಚರಣ್​ ಕೌರ್ ಅವರು ತಮ್ಮ 58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್​ 17ರಂದು ದಂಪತಿ ಗಂಡು ಮ​ಗುವನ್ನು ಸ್ವಾಗತಿಸಿದ್ದಾರೆ. ಸಿಧು ಮೂಸೆವಾಲಾ ಎಂದು ಖ್ಯಾತಿಯಾದ ಮಗ ಶುಭದೀಪ್ ಸಿಂಗ್​ ಸಿಧು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ 2 ವರ್ಷಗಳ ಬಳಿಕ ದಂಪತಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.

    ವಾಹೆಗುರುಗಳ ಆಶೀರ್ವಾದದಿಂದ ನಾವು ನಮ್ಮ ಶುಭದೀಪ್​ನನ್ನು ಮರಳಿ ಪಡೆದಿದ್ದೇವೆ. ಆದರೆ, ಪಂಜಾಬ್​​ ಸರ್ಕಾರ ಬೆಳಿಗ್ಗೆಯಿಂದ ಮಗುವಿನ ದಾಖಲೆಗಳನ್ನು ನೀಡುವಂತೆ ಕಿರುಕುಳ ನೀಡುತ್ತಿದೆ. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಸರ್ಕಾರ ಒತ್ತಾಯಿಸುತ್ತಿದೆ. ಆದರೆ, ಎಲ್ಲಾ ಚಿಕಿತ್ಸೆಗಳು ಮುಗಿಯಲು ಅವಕಾಶ ನೀಡುವಂತೆ ನಾನು ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ವಿನಂತಿಸಲು ಬಯಸುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇದ್ದೇನೆ. ನೀವು ನನ್ನನ್ನು ಕರೆಯುವ ಯಾವುದೇ ಸ್ಥಳಕ್ಕೆ ಬಂದು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ ಎಂದು ಬಾಲಕೌರ್​ ಸಿಂಗ್ ಹೇಳಿದರು.

    ವಯಸ್ಸಾದ ದಂಪತಿ ಮಗುವನ್ನು ಗರ್ಭಧರಿಸಲು ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ವಿಧಾನವನ್ನು ಆಯ್ಕೆ ಮಾಡಿಕೊಂಡರು. ಆದರೆ, ಈ ವಿಚಾರವನ್ನು ಬಾಲಕೌರ್ ಸಿಂಗ್ ವಿಡಿಯೋದಲ್ಲಿ ಉಲ್ಲೇಖಿಸಿಲ್ಲ. 2021ರ ಡಿಸೆಂಬರ್ ತಿಂಗಳಲ್ಲಿ ಸರ್ಕಾರವು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ IVF ಕಾರ್ಯವಿಧಾನಗಳಿಗೆ ಕಟ್ಟುನಿಟ್ಟಾದ ವಯಸ್ಸಿನ ಮಿತಿಯನ್ನು ವಿಧಿಸಿದೆ. ಇದರ ಮಾರ್ಗಸೂಚಿ ಪ್ರಕಾರ ಮಹಿಳೆಯರಿಗೆ 21-50 ವರ್ಷಗಳು ಮತ್ತು ಪುರುಷರಿಗೆ 21-55 ವರ್ಷಗಳಾಗಿರಬೇಕು. ಆದರೆ, ಸಿಧು ಮೂಸೆವಾಲ ತಂದೆ-ತಾಯಿ ಪ್ರಕರಣದಲ್ಲಿ ಚರಣ್​ ಕೌರ್​ಗೆ 58 ವರ್ಷ ಮತ್ತು ಬಾಲಕೌರ್​ ಸಿಂಗ್​ಗೆ 60 ವರ್ಷವಾಗಿದೆ.

    ಬಾಲಕೌರ್​ ಸಿಂಗ್ ಅವರು ಎಲ್ಲಾ ಕಾನೂನು ವಿಧಾನಗಳನ್ನು ಅನುಸರಿಸಿರುವುದಾಗಿ ಮತ್ತು ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದಾರೆ. 2022ರ ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದರು. ಅವರಿಗೆ 28 ವರ್ಷ ವಯಸ್ಸಾಗಿತ್ತು. ಅದೇ ವರ್ಷದಲ್ಲಿ ಮೂಸೆವಾಲಾ ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನಸಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತರು. (ಏಜೆನ್ಸೀಸ್​)

    ಸಿಧು ಮೂಸೆವಾಲಾ ತಾಯಿಯ ವಯಸ್ಸೆಷ್ಟು?, ವೃದ್ಧಾಪ್ಯದಲ್ಲಿ ಗರ್ಭಿಣಿಯಾಗಿದ್ದಕ್ಕೆ ಜನರಿಂದ ಬಂದ ಪ್ರತಿಕ್ರಿಯೆಗಳಿವು!

    ನಮ್ಮ ಹೀರೋನೇ ಗ್ರೇಟ್​ ಅಂತಾ ಕಿತ್ತಾಡೋದಲ್ಲ, ಅಭಿಮಾನ ಅಂದ್ರೆ ಹೀಗಿರಬೇಕು! ಗಂಗೂಲಿ ಅಭಿಮಾನಿಯ ರೋಚಕ ಕತೆ

    ಆಹಾರ ಪಥ್ಯದಲ್ಲಿ ಬದಲಾವಣೆ ಪರಿಣಾಮ; ಮೀನು ಸೇವನೆ ಪ್ರಮಾಣ ಶೇ.81 ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts