More

    ಸಿಧು ಮೂಸೆವಾಲಾ ತಾಯಿಯ ವಯಸ್ಸೆಷ್ಟು?, ವೃದ್ಧಾಪ್ಯದಲ್ಲಿ ಗರ್ಭಿಣಿಯಾಗಿದ್ದಕ್ಕೆ ಜನರಿಂದ ಬಂದ ಪ್ರತಿಕ್ರಿಯೆಗಳಿವು!

    ಪಂಜಾಬ್‌: ಖ್ಯಾತ ಗಾಯಕ ಸಿಧು ಮೂಸೆವಾಲಾ ನಿಧನರಾಗಿ ಎರಡು ವರ್ಷಗಳಾಗಿವೆ. ಅವರ ಸಾವಿನ ದೃಶ್ಯ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ, ಇದೀಗ ಸಿಧು ಅಭಿಮಾನಿಗಳಿಗೆ ಸಿಹಿ ಸುದ್ದಿಯಿದೆ. ಅವರ ತಾಯಿ ಚರಣ್ ಕೌರ್ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.

    ಸಿಧು ಅವರ ತಾಯಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ. ವಯಸ್ಸಾದ ಮೇಲೆ ತಾಯಿಯಾಗುತ್ತಿರುವುದಕ್ಕೆ ಸಿಧು ಮೂಸೆವಾಲಾ ತಾಯಿ ಹೆಸರು ಸದ್ಯ ಸುದ್ದಿಯಲ್ಲಿದೆ. ಸಿಧು ಅವರ ತಾಯಿ ಚರಣ್ ಕೌರ್ ಅವರಿಗೆ 58 ವರ್ಷ ಮತ್ತು ಅವರ ತಂದೆಗೆ 60 ವರ್ಷ. ಸಿಧು ತಂದೆ-ತಾಯಿಯ ವಯಸ್ಸು ಬಯಲಾದ ಮೇಲೆ ಹಲವರ ಮನದಲ್ಲಿ ಮೂಡಿರುವ ಪ್ರಶ್ನೆ ಏನೆಂದರೆ ವೃದ್ಧಾಪ್ಯದಲ್ಲಿ ತಾಯಿಯಾಗುವುದು ಹೇಗೆ?, ಇದು ತಮಾಷೆ ಅಲ್ಲವೇ? ಇದು ಹೇಗೆ ಸಂಭವಿಸಬಹುದು? ಇಂತಹ ಹಲವು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡುತ್ತಿವೆ. ಆದರೆ ಈಗ ಅದಕ್ಕೆ ಸಂಬಂಧಿಸಿದ ಬಹುತೇಕ ವಿವರಗಳು ಬೆಳಕಿಗೆ ಬಂದಿವೆ.

    ಮಾಹಿತಿ ನೀಡಿದ ಚಿಕ್ಕಪ್ಪ
    ಚರಣ್ ಕೌರ್ ಗರ್ಭಿಣಿಯಾಗುತ್ತಿರುವ ಸುದ್ದಿಯನ್ನು ಅವರ ಕುಟುಂಬದ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಹೌದು, ಸಿಧು ಮೂಸೆವಾಲಾ ಅವರ ಚಿಕ್ಕಪ್ಪ ಚಮಕೌರ್ ಸಿಂಗ್ ಈ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ. ವರದಿಗಳ ಪ್ರಕಾರ, ಚರಣ್ ಕೌರ್ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಮುಂದಿನ ತಿಂಗಳು ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಅಂದಹಾಗೆ ಆಕೆ ಐವಿಎಫ್ ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದಾರೆ ಎಂದು ಚಮಕೌರ್ ಸಿಂಗ್ ಹೇಳಿದ್ದಾರೆ. ಚರಣ್ ಕೌರ್ ಐವಿಎಫ್ ಮೂಲಕ ಗರ್ಭಧರಿಸಿದ್ದಾರೆ. ಈಗ ಅವರು 58 ನೇ ವಯಸ್ಸಿನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆದರೆ, ಈ ವರದಿಗಳ ಬಗ್ಗೆ ಸಿಧು ಅವರ ಪೋಷಕರು ಇದುವರೆಗೂ ಮೌನ ವಹಿಸಿದ್ದಾರೆ. ಸಿಧು ಅಭಿಮಾನಿಗಳು ಸಹ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿದ್ದಾರೆ.

    ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ ಬಳಕೆದಾರರು
    ಸಿಧು ಅವರ ತಾಯಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಸುದ್ದಿ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಹೀಗಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ‘ಮಕ್ಕಳಿಲ್ಲದೆ ಬದುಕುವುದು ಪೋಷಕರಿಗೆ ಅತ್ಯಂತ ಕಷ್ಟಕರವಾದ ಕೆಲಸ’, ‘ಸಿಧು ಮೂಸೆವಾಲಾ ಅವರು ಮರಳಿ ಬರುತ್ತಿದ್ದಾರೆ’, ‘ಅಭಿನಂದನೆಗಳು… ಭಾಗ 2.’, ‘ಇದು ಅವರ ಜೀವನದ ನಿರ್ಧಾರ ದಯವಿಟ್ಟು ಗೌರವಿಸಿ’ , ‘ಅತಿಯಾಗಿ ವರ್ತಿಸುವ ಅಗತ್ಯವಿಲ್ಲ. ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ನಂತರ, ಅವರು ಇನ್ನೊಂದು ಮಗುವಿನ ಬಗ್ಗೆ ಯೋಚಿಸಬಹುದು… ತಪ್ಪೇನಿಲ್ಲ ಎಂದರೆ, ‘ದಕ್ಷಿಣ ಭಾರತದ ಚಿತ್ರವೊಂದರ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ’ ಎಂದು ಹಾಸ್ಯಮಯವಾಗಿ ಓರ್ವ ಪ್ರತಿಕ್ರಿಯಿಸಿದ್ದಾನೆ.

    ಸಿಧು ಮೂಸೆವಾಲಾ ಸತ್ತಿದ್ದು ಹೇಗೆ?
    ಪಂಜಾಬ್‌ನ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಅವರನ್ನು ಮೇ 29, 2022 ರಂದು ಹತ್ಯೆ ಮಾಡಲಾಯಿತು. ಬಿಷ್ಣೋಯ್ ಗ್ಯಾಂಗ್ ಸಿಧು ಮೂಸೆವಾಲಾ ಅವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಹಾಡಹಗಲೇ ಸಿದ್ದು ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಿಧು ಅವರ ಫ್ಯಾನ್ ಫಾಲೋಯಿಂಗ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಇದೆ. ಗಾಯಕನ ಸಾವಿನಿಂದ ಅಭಿಮಾನಿಗಳು ಸಹ ಶಾಕ್ ಆಗಿದ್ದರು. ಸಿಧು ಅವರ ತಂದೆ ತಾಯಿಗೆ ಒಬ್ಬನೇ ಮಗ. ಸಿಧು ಸಾವಿನ ನಂತರ ಅವರ ತಾಯಿಯೂ ಡಿಪ್ರೆಶನ್​​​ಗೆ ಹೋಗಿದ್ದರು. ಬಹುಶಃ ಅದಕ್ಕಾಗಿಯೇ ಅವರು ಎರಡನೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾರೆ.

    ದಿವಂಗತ ಗಾಯಕ ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಗರ್ಭಿಣಿ, 58 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಬಲ್ಕೌರ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts