More

    ಟಿ20 ವಿಶ್ವಕಪ್​ನಲ್ಲಿ ಚಾಹಲ್​ಗೆ ಇಲ್ಲ ಚಾನ್ಸ್? ಭಾರತದ ಸಂಭಾವ್ಯ ತಂಡ ಹೀಗಿದೆ…

    ಬೆಂಗಳೂರು: ಹಾಲಿ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ಪರ ಗಮನಸೆಳೆದು ಪರ್ಪಲ್​ ಕ್ಯಾಪ್​ ರೇಸ್​ನಲ್ಲಿರುವ ನಡುವೆಯೂ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಅವರನ್ನು ಮುಂಬರುವ ಟಿ20 ವಿಶ್ವಕಪ್​ ತಂಡದಿಂದ ಹೊರಗಿಡಲಾಗುತ್ತದೆ ಎನ್ನಲಾಗಿದೆ. ಕುಲದೀಪ್​ ಯಾದವ್​ ಮೊದಲ ಆಯ್ಕೆಯ ಸ್ಪಿನ್ನರ್​ ಆಗಿದ್ದರೆ, ರವೀಂದ್ರ ಜಡೇಜಾ ಜತೆಗೆ ಆಲ್ರೌಂಡ್​ ಸಾಮರ್ಥ್ಯದಿಂದ ಅಕ್ಷರ್​ ಪಟೇಲ್​ ಮತ್ತೋರ್ವ ಸ್ಪಿನ್ನರ್​ ಆಗಿರುತ್ತಾರೆ. ರವಿ ಬಿಷ್ಣೋಯಿ ಕೂಡ ಅವಕಾಶ ವಂಚಿತರಾಗಲಿದ್ದಾರೆ ಎನ್ನಲಾಗಿದೆ.

    ಇನ್ನು 4ನೇ ವೇಗಿ ಸ್ಥಾನಕ್ಕೆ ಸಂದೀಪ್​ ಶರ್ಮ ಅಚ್ಚರಿಯ ಆಯ್ಕೆಯಾಗುವ ರೇಸ್​ನಲ್ಲಿದ್ದಾರೆ. ಐಪಿಎಲ್​ನಲ್ಲಿ ನಿಧಾನಗತಿ ಮಧ್ಯಮ ವೇಗದ ಎಸೆತಗಳಿಂದ ಸಂದೀಪ್​ ಶರ್ಮ ಮಿಂಚುತ್ತಿದ್ದಾರೆ. ಆದರೆ ಹಾರ್ದಿಕ್​ ಪಾಂಡ್ಯ ತಂಡದಲ್ಲಿದ್ದರೆ 4ನೇ ವೇಗಿ ಅಗತ್ಯವಿದೆಯೇ ಎಂಬ ಗೊಂದಲವೂ ಟೀಮ್​ ಮ್ಯಾನೇಜ್​ಮೆಂಟ್​ಅನ್ನು ಕಾಡುತ್ತಿದೆ. ಇನ್ನು ಕೀಪರ್​ ಸ್ಥಾನದ ರೇಸ್​ನಲ್ಲಿ ಕೆಎಲ್​ ರಾಹುಲ್​ರನ್ನು ಸಂಜು ಸ್ಯಾಮ್ಸನ್​ ಹಿಮ್ಮೆಟ್ಟಲಿದ್ದಾರೆ ಎನ್ನಲಾಗಿದೆ. ಶಿವಂ ದುಬೆ, ರಿಂಕು ಸಿಂಗ್​ ಅವರಲ್ಲೊಬ್ಬರು ಅಥವಾ ಇಬ್ಬರೂ ಆಯ್ಕೆಯಾಗುವುದು ನಿಶ್ಚಿತವೆನಿಸಿದೆ.

    ಟಿ20 ವಿಶ್ವಕಪ್​ಗೆ ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​, ರಿಷಭ್​ ಪಂತ್​ (ವಿ.ಕೀ), ಸಂಜು ಸ್ಯಾಮ್ಸನ್​ (ವಿ.ಕೀ), ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಶಿವಂ ದುಬೆ, ರಿಂಕು ಸಿಂಗ್​, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್​ ಸಿಂಗ್​, ಆವೇಶ್​ ಖಾನ್​/ಮೊಹಮದ್​ ಸಿರಾಜ್​.
    ಇತರ ಪ್ರಮುಖ ಸ್ಪರ್ಧಿಗಳು: ಕೆಎಲ್​ ರಾಹುಲ್​, ಯಜುವೇಂದ್ರ ಚಾಹಲ್​, ಶುಭಮಾನ್​ ಗಿಲ್​, ರವಿ ಬಿಷ್ಣೋಯಿ, ಸಂದೀಪ್​ ಶರ್ಮ, ತಿಲಕ್​ ವರ್ಮ.

    ಆರ್ಚರಿ ವಿಶ್ವಕಪ್​ನಲ್ಲಿ ಐತಿಹಾಸಿಕ ಪದಕ ಸಾಧನೆ ಮೆರೆದ ಭಾರತದ ಬಿಲ್ಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts