More

    ಯೋಧರ ಬಸ್​​, ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, 25 ಪ್ರಯಾಣಿಕರಿಗೆ ಗಾಯ

    ಸಿಯೋನಿ: ವಿಶೇಷ ಸಶಸ್ತ್ರ ಪಡೆ (ಎಸ್‌ಎಎಫ್) ಯೋಧರು ತೆರಳುತ್ತಿದ್ದ ಬಸ್​ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ. ಸಿಯೋನಿ-ಮಂಡ್ಲಾ ರಾಜ್ಯ ಹೆದ್ದಾರಿಯಲ್ಲಿರುವ ಧನಗಡ ಗ್ರಾಮದ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ.

    ಇದನ್ನೂ ಓದಿ:ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಕಾರಿನಲ್ಲಿದ್ದ ಐದು ಜನರ ಪೈಕಿ ಮೂವರು ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಮಹಾರಾಷ್ಟ್ರದ ನಾಗ್ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ರಾಜ್ಯ ಪೊಲೀಸ್‌ನ 35ನೇ ಬೆಟಾಲಿಯನ್‌ನ ಎಸ್‌ಎಎಫ್‌ನ ಸಿಬ್ಬಂದಿಯನ್ನು ಮಾಂಡ್ಲಾದಿಂದ ಪಾಂಡುರ್ನಾ (ಚಿಂದ್ವಾರ)ಗೆ ಸಾಗಿಸುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಬಸ್​ ಪಲ್ಟಿ ಹೊಡಿದಿದೆ. ಈ ಸಂದರ್ಭದಲ್ಲಿ ಒಬ್ಬ ಯೋಧನಿಗೆ ಗಂಭೀರವಾಗಿ ಗಾಯವಾಗಿದೆ. ಇವರನ್ನು ನಾಗ್ಪುರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಕಿಯೋಲಾರಿ ಪೊಲೀಸ್ ಠಾಣೆಯ ಉಸ್ತುವಾರಿ ಚೈನ್ ಸಿಂಗ್ ಉಕಿ ಪಿಟಿಐಗೆ ತಿಳಿಸಿದ್ದಾರೆ.

    ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕನ್ಹಯ್ಯಾ ಜಸ್ವಾನಿ (75), ನಿಕಲೇಶ್ ಜಸ್ವಾನಿ (45) ಮತ್ತು ಚಾಲಕ ಪುರುಷೋತ್ತಮ್ ಮಹೋಬಿಯಾ (37) ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮೃತರು ಮಂಡಲ ನಿವಾಸಿಗಳು. ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಕಿಯೋಲಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ನಾಗ್ಪುರದಿಂದ ಆಸ್ಪತ್ರೆ ಸಂಬಂಧಿತ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Viral News: 12 ವರ್ಷದ ಬಾಲಕಿಯನ್ನು ಮದುವೆಯಾದ 63ರ ಧರ್ಮಗುರು! ಕಾರಣ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts