More

    ಗಾಜಾದಲ್ಲಿ ಮಹಿಳೆಯರ ಒಳ ಉಡುಪು ಹಿಡಿದುಕೊಂಡು ಗೇಲಿ ಮಾಡುತ್ತಿರುವ ಇಸ್ರೇಲ್ ಸೈನಿಕರು; ಫೋಟೋಗಳು ವೈರಲ್

    ಇಸ್ರೇಲ್: ಇಸ್ರೇಲ್ ಸೈನಿಕರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಸೈನಿಕರು ಇಸ್ರೇಲ್ ಇತ್ತೀಚೆಗೆ ಯುದ್ಧದಲ್ಲಿ ಗೆದ್ದ ಗಾಜಾದ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಸೈನಿಕರು ಮಹಿಳೆಯರ ಬಟ್ಟೆಯೊಂದಿಗೆ ಆಟವಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಮಹಿಳೆಯರ ಒಳ ಉಡುಪುಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿರುವ ವಿಡಿಯೋಗಳು ಹೊರಬಂದಿವೆ.

    ಇಸ್ರೇಲ್ ಸೈನಿಕರು ಈ ರೀತಿ ನಡೆದುಕೊಳ್ಳುತ್ತಿರುವುದು ಅಲ್ಲಿನ ಮಹಿಳೆಯರಿಗೆ ಅವಮಾನಕರ ಎಂದು ಗಾಜಾದ ಜನತೆ ಹೇಳಿದ್ದಾರೆ. ಅಷ್ಟೇ ಅಲ್ಲ, ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೂ ಆಗಿದೆ. ಇಸ್ರೇಲಿ ಸೈನಿಕರ ಈ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದು, ಅವರ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಜನರು.

    ಗಾಜಾದಲ್ಲಿ ಮಹಿಳೆಯರ ಒಳ ಉಡುಪು ಹಿಡಿದುಕೊಂಡು ಗೇಲಿ ಮಾಡುತ್ತಿರುವ ಇಸ್ರೇಲ್ ಸೈನಿಕರು; ಫೋಟೋಗಳು ವೈರಲ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್
    ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಇಸ್ರೇಲ್ ಸೈನಿಕನೊಬ್ಬ ಕೈಯಲ್ಲಿ ಗನ್ ಹಿಡಿದುಕೊಂಡು ಕೋಣೆಯಲ್ಲಿ ಕುಳಿತಿರುವುದು ಕಂಡುಬಂದರೆ, ಮತ್ತೊಬ್ಬ ಸೈನಿಕನು ಮಹಿಳೆಯ ಒಳ ಉಡುಪುಗಳನ್ನು ತನ್ನ ಮುಂದೆ ಹಿಡಿದಿರುವುದು ಕಂಡುಬರುತ್ತದೆ.

    ಇನ್ನೊಂದು ಫೋಟೋದಲ್ಲಿ ಇಸ್ರೇಲಿ ಸೈನಿಕನೊಬ್ಬ ಇದೇ ರೀತಿ ನಡೆದುಕೊಂಡು ಹೋಗುತ್ತಾ ಹೆಲ್ಮೆಟ್ ಧರಿಸಿರುವ ಹೆಣ್ಣಿನ ಪ್ರತಿಮೆಯನ್ನು ಹಿಡಿದಿದ್ದಾನೆ. “ನಾನು ಗಾಜಾದಲ್ಲಿ ಸುಂದರವಾದ ಹೆಂಡತಿ ಮತ್ತು ಶ್ರೇಷ್ಠ ಮಹಿಳೆಯನ್ನು ಕಂಡುಕೊಂಡಿದ್ದೇನೆ” ಎಂದು ಹೇಳುವುದನ್ನು ಕೇಳಬಹುದು.

    ರಾಯಿಟರ್ಸ್ ಪರಿಶೀಲಿಸಿದ ಒಳ ಉಡುಪು ಮತ್ತು ಹೆಣ್ಣಿನ ಪ್ರತಿಮೆಯ ಫೋಟೋಗಳನ್ನು ಹೊಂದಿರುವ ವಿಡಿಯೋವನ್ನು ಪ್ಯಾಲೇಸ್ಟಿನಿಯನ್ ವರದಿಗಾರ ಯುನೆಸ್ ತಿರಾವಿ ಅವರು ಮರು ಪೋಸ್ಟ್ ಮಾಡಿದ್ದಾರೆ. ಅಂದಿನಿಂದ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ.

    ವಿಶ್ವಸಂಸ್ಥೆಯ ವಕ್ತಾರರ ಹೇಳಿಕೆ 
    ಇಸ್ರೇಲ್ ಸೈನಿಕರ ಈ ಕೃತ್ಯದ ನಂತರ ವಿಶ್ವಸಂಸ್ಥೆಯ ಹೇಳಿಕೆಯೂ ಹೊರಬಿದ್ದಿದೆ. ಇಸ್ರೇಲ್ ಸೈನಿಕರ ಈ ಕ್ರಮಗಳು ಪ್ಯಾಲೆಸ್ತೀನ್ ಮಹಿಳೆಯರಿಗೆ ಮತ್ತು ವಿಶ್ವದ ಎಲ್ಲಾ ಮಹಿಳೆಯರಿಗೆ ಅತ್ಯಂತ ಅವಮಾನಕರವಾಗಿದೆ ಎಂದು ಮಾನವ ಹಕ್ಕುಗಳ ಕಚೇರಿಯ ವಕ್ತಾರ ರವೀನಾ ಶಮ್‌ದಾಸಾನಿ ಹೇಳಿದ್ದಾರೆ. 

    ಅಬ್ಬಬ್ಬಾ! ಹಾವಿಗೇ ಮುತ್ತಿಕ್ಕಿದ ಭೂಪ…ಅದಕ್ಕೆ ಪ್ರತಿಯಾಗಿ ನಾಗಪ್ಪ ಮಾಡಿದ್ದನ್ನು ನೋಡಿದರೆ ಎದೆ ಝಲ್ ಅನ್ನುತ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts