More

    ಕೆಲಸ ಇರುವುದು, ಇಲ್ಲದಿರುವುದು ಯಾವುದು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪ್ರಭಾವ ಬೀರುತ್ತೆ? ಇಲ್ಲಿದೆ ಉತ್ತರ….

    ಜೀವನದಲ್ಲಿ ಪ್ರತಿಯೊಬ್ಬರಿಗೂ ಆದಾಯ ಬಹಳ ಮುಖ್ಯ. ಉತ್ತಮ ಆದಾಯವನ್ನು ಗಳಿಸುವ ಉದ್ದೇಶದಿಂದ ನಾವೆಲ್ಲರೂ ಅನೇಕ ಉದ್ಯೋಗಗಳನ್ನು ಹುಡುಕುತ್ತೇವೆ. ಹಾಗಾದರೆ ಕೆಲಸ ಮಾಡುವುದರಿಂದಲೇ ನಿಮಗೆ ಸಂತೋಷ ಸಿಗುತ್ತದೆಯೇ? ಕೆಲಸವಿಲ್ಲದವರಿಗೆ ಜೀವನವು ತೀವ್ರ ಮಾನಸಿಕ ಒತ್ತಡದಿಂದ ಕೂಡಿರುತ್ತದೆ. ನಿರುದ್ಯೋಗಿಯು ತಾನು ನಿಷ್ಪ್ರಯೋಜಕನೆಂಬ ಆಲೋಚನೆಯಿಂದ ಆಗಾಗ ತೊಂದರೆಗೂ ಒಳಗಾಗುತ್ತಾನೆ ಎಂಬುದು ನಿಜ.

    ಆದರೆ, ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಮನಃಶಾಸ್ತ್ರದ ಪ್ರಾಧ್ಯಾಪಕ ಲಾರಿ ಸ್ಯಾಂಟೋಸ್ ಪ್ರಕಾರ, ಯಾವಾಗಲೂ ಕಾರ್ಯನಿರತರಾಗಿರುವ ಅಂದರೆ ಸದಾ ಕೆಲಸದಲ್ಲಿ ಮುಳುಗಿರುವ ಜನರು ಸಹ ತೀವ್ರವಾದ ಮಾನಸಿಕ ಒತ್ತಡವನ್ನು ಹೊಂದಿರುತ್ತಾರೆ. ಕೆಲಸವಿಲ್ಲದವರಲ್ಲಿಯೂ ಇಷ್ಟೇ ಒತ್ತಡ ಇರುತ್ತದೆ. ಯಾವಾಗಲೂ ಕಾರ್ಯನಿರತರಾಗಿರುವ ಜನರು ಕಡಿಮೆ ಉತ್ಪಾದಕತೆಯನ್ನು ಹೊಂದಿರುತ್ತಾರೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಅನೇಕ ಅಧ್ಯಯನಗಳು ಸಾಬೀತು ಮಾಡಿವೆ.

    ಇನ್ನೂ ಕೆಲಸದ ಓವರ್‌ಲೋಡ್‌ನಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಹೇಳಲಾಗುತ್ತದೆ. ಆದರೆ ಇದರಿಂದಲೂ ಒತ್ತಡ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಲೋರಿ. ಈ ರೀತಿಯ ಸಮಯದ ಹೊಂದಾಣಿಕೆಯು ಊಟ, ವಿಶ್ರಾಂತಿ ಮತ್ತು ಸ್ನೇಹಿತರೊಂದಿಗೆ ವಿರಾಮದ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳಲು ಕಾರಣವಾಗಬಹುದು. ದೊಡ್ಡ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸುವುದರಿಂದ ಉತ್ತಮ ಉತ್ಪಾದಕತೆ ಉಂಟಾಗುತ್ತದೆ ನಿಜ ಆದರೆ, ಅಷ್ಟೇ ಒತ್ತಡವನ್ನು ಅನುಭವಿಸಬೇಕಾಗುತ್ತದೆ.

    ಹಾಗಾದರೆ ಒತ್ತಡದಿಂದ ಹೊರ ಬರಲು ಏನು ಮಾಡಬೇಕು ಅಂದರೆ, ಕೆಲಸದ ನಡುವೆ ಸಣ್ಣ ವಿರಾಮಗಳನ್ನು ಎಂಜಾಯ್​ ಮಾಡಬೇಕು. ಸ್ವಲ್ಪ ಧ್ಯಾನ ಮಾಡುವುದು, ಸ್ವಲ್ಪ ವಾಕಿಂಗ್​ ಅಥವಾ ಸ್ನೇಹಿತರೊಂದಿಗೆ ಸಂತೋಷದ ಕ್ಷಣ ಆನಂದಿಸುವುದು ಸೇರಿದಂತೆ ವಿರಾಮ ಕ್ಷಣಗಳನ್ನು ಅನುಭವಿಸಬೇಕು. ಈ ರೀತಿ ಮಾಡುವುದರಿಂದ ಕೆಲಸದ ಒತ್ತಡ ಕಡಿಮೆಯಾಗಿ ಉತ್ಪಾದಕತೆ ಕೂಡ ಹೆಚ್ಚುತ್ತದೆ.

    ಸಮಯವನ್ನು ವ್ಯರ್ಥ ಮಾಡದೇ ಹಣ ಗಳಿಸುವ ಮತ್ತು ಸರಿಯಾಗಿ ಖರ್ಚು ಮಾಡುವ ಮಾರ್ಗವನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ ತಜ್ಞರು. (ಏಜೆನ್ಸೀಸ್​)

    ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​

    ಇಷ್ಟೊಂದು ಅಹಂಕಾರ ಒಳ್ಳೆಯದಲ್ಲ ಈಗಲಾದ್ರೂ ಬದಲಾಗಿ! ಹಾರ್ದಿಕ್ ದುರ್ವರ್ತನೆ ವಿಡಿಯೋ ವೈರಲ್​, ನೆಟ್ಟಿಗರ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts