More

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    ಚೆನ್ನೈ: ವಿವೇಕ್ ತಮಿಳು ಚಿತ್ರರಂಗದ ಶ್ರೇಷ್ಠ ಹಾಸ್ಯ ನಟರಲ್ಲಿ ಒಬ್ಬರು. ತಮಿಳು ಚಿತ್ರರಂಗದಲ್ಲಿ ಚಿನ್ನ ಕಲೈವಾನರ್ ಎಂದೇ ಖ್ಯಾತಿ ಗಳಿಸಿರುವ ವಿವೇಕ್ ರಜನಿಕಾಂತ್, ಅಜಿತ್ ಸೇರಿದಂತೆ ಬಹುತೇಕ ಎಲ್ಲ ಖ್ಯಾತ ನಟರ ಜೊತೆ ನಟಿಸಿದ್ದಾರೆ. ತಮ್ಮ ನೇರ ನುಡಿಯಿಂದ ಪ್ರಸಿದ್ಧರಾಗಿದ್ದ ವಿವೇಕ್ ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

    ಇದನ್ನೂ ಓದಿ: ಜಮ್ಮ ಮತ್ತು ಕಾಶ್ಮೀರ: ಕಂದಕಕ್ಕೆ ಉರುಳಿದ ಟ್ಯಾಕ್ಸಿ, ಹತ್ತು ಜನರ ದುರ್ಮರಣ

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರೇ ವಿವೇಕ್​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. 1980ರಲ್ಲಿ ಬಾಲಚಂದರ್ ಅವರ ಸಿನಿಮಾ ಮೂಲಕ ವಿವೇಕ್ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ವಿವೇಕ್ ಅವರಿಗೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ವಿವೇಕ್ ಅವರು ಕೊನೆಯ ಬಾರಿ ಧರಳ ಪ್ರಭು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಕನ್ನಡ, ತೆಲುಗಿನಲ್ಲೂ ಅಭಿಮಾನಿಗಳಿದ್ದಾರೆ. ವಿವೇಕ್ 2021 ರಲ್ಲಿ ಹೃದಯಾಘಾತದಿಂದ ನಿಧನರಾದರು.

    ದಿವಂಗತ ನಟ ವಿವೇಕ್ ಮಗಳ ಮದುವೆ ಗುರುವಾರ ಅತ್ಯಂತ ಸರಳವಾಗಿ ನೆರವೇರಿದ್ದು, ಚೆನ್ನೈನ ವಿರುಗಂಬಾಕ್ಕಂ ಪದ್ಮಾವತಿ ನಗರದ ಚಿನ್ನ ಕಲೈವರನ್ ರಸ್ತೆಯಲ್ಲಿರುವ ವಿವೇಕ್ ಅವರ ನಿವಾಸದಲ್ಲಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ತುಂಬಾ ಸರಳವಾಗಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    ಮದುವೆಯ ನಂತರ ವಿವೇಕ್ ಪುತ್ರಿ ತೇಜಸ್ವಿನಿ, ಅವರ ಪತಿ ಭರತ್ ತಮ್ಮ ತಂದೆಯ ನೆನಪಿಗಾಗಿ ಸಸಿಗಳನ್ನು ನೆಟ್ಟರು. ತಂದೆಯ ಕನಸಿಗಾಗಿ ಪ್ರಕೃತಿಯನ್ನು ಉಳಿಸಲು ಸಸಿಗಳನ್ನು ನೆಟ್ಟಿದ್ದೇನೆ ಎಂದು ತೇಜಸ್ವಿನಿ ಹೇಳಿದರು. ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಹರಿದಾಡುತ್ತಿದ್ದರೆ, ಅಭಿಮಾನಿಗಳು ಭಾವನಾತ್ಮಕ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

    ಬೆಳ್ಳಿತೆರೆಯಲ್ಲಿ ತಮ್ಮ ನಟನೆಯ ಮೂಲಕ ರಂಜಿಸಿದ ವಿವೇಕ್ ನಿಜ ಜೀವನದಲ್ಲಿ ಅನೇಕರಿಗೆ ಮಾದರಿಯಾಗಿದ್ದಾರೆ. ಅಬ್ದುಲ್ ಕಲಾಂ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡ ವಿವೇಕ್ ಅವರು ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟರು. ನಿರಂತರವಾಗಿ ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಉಳಿಸಲು ಅಭಿಮಾನಿಗಳಿಗೆ ಕರೆ ನೀಡುತ್ತಿದ್ದರು. ಆದರೆ ಅನಿರೀಕ್ಷಿತವಾಗಿ 2021 ರಲ್ಲಿ ವಿವೇಕ್ ನಿಧನರಾದರು. ಅವರ ಹಠಾತ್ ನಿಧನ ಅಭಿಮಾನಿಗಳು ಹಾಗೂ ಚಿತ್ರರಂಗವನ್ನು ದುಃಖದಲ್ಲಿ ಮುಳುಗಿಸಿದೆ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts