More

    ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

    ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) 2024 ಶುರುವಾಗುವ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಅನ್​ಬಾಕ್ಸ್​ ಈವೆಂಟ್​ ಆಯೋಜನೆ ಮಾಡಿತ್ತು. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮಲ್ಲಿ ಭಾಗವಹಿಸಿ ಯಶಸ್ಸಿಗೊಳಿಸಿದರು. ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಕ್ರೀಡಾಂಗಣದ ಹೊರಗೆ ಸಾಕಷ್ಟು ಅಭಿಮಾನಿಗಳು ಸಹ ಕಿಕ್ಕಿರಿದು ನಿಂತಿದ್ದರು. ಸ್ಮೃತಿ ಮಂದಾನ ಪಡೆ ಡಬ್ಲ್ಯುಪಿಎಲ್​ನಲ್ಲಿ ಟ್ರೋಫಿ ಜಯಿಸಿರುವು ಆರ್​ಸಿಬಿ ಪುರುಷರ ತಂಡಕ್ಕೆ ಹೊರ ಹುರುಪು ನೀಡಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ಆರ್​ಸಿಬಿ ಹೊಸ ಜರ್ಸಿಯನ್ನು ಸಹ ಅನಾವರಣ ಮಾಡಲಾಯಿತು. ಅಲ್ಲದೆ, ರಾಯಲ್​ ಚಾಲೆಂಜರ್ಸ್​ ಬ್ಯಾಂಗಲೋರ್​ನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಂತಾ ಹೆಸರನ್ನು ಸಹ ಬದಲಾಯಿಸಲಾಯಿತು. ಈ ಬಾರಿ ಕಪ್​ ಗೆದ್ದ ಆರ್​ಸಿಬಿ ಮಹಿಳಾ ತಂಡವನ್ನು ಸನ್ಮಾನಿಸಿ, ಗೌರವಿಸಲಾಯಿತು. ಆದರೆ, ಈ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿ ಮಾಡಿದ ಕಾಮೆಂಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ದಯವಿಟ್ಟು ಈ ರೀತಿ ಕರೆಯುವುದನ್ನು ನಿಲ್ಲಿಸಿ ಎಂದು ಅಭಿಮಾನಿಗಳಲ್ಲಿ ಕೊಹ್ಲಿ ಮನವಿ ಮಾಡಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಕೊಹ್ಲಿ ತಮ್ಮ ಹೊಸ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡರು. ಹೊಸ ಹೇರ್ ಸ್ಟೈಲ್​ನಲ್ಲಿ ಹಾಲಿವುಡ್ ಹೀರೋ ರೀತಿ ಕೊಹ್ಲಿ ಎಂಟ್ರಿ ಕೊಟ್ಟರು. ಅನ್​ಬಾಕ್ಸ್​ ಕಾರ್ಯಕ್ರಮ ಸಾಕಷ್ಟು ಸಂಭ್ರಮದಿಂದ ಕೂಡಿತ್ತು. ಜರ್ಸಿ ಅನಾವರಣ ಸಂದರ್ಭದಲ್ಲಿ ಕೊಹ್ಲಿ ಅವರನ್ನು ವೇದಿಕೆಗೆ ಕರೆಯಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ವಿಶೇಷ ಮನವಿ ಮಾಡಿದರು. ತನ್ನನ್ನು ಕಿಂಗ್​ (ರಾಜ) ಎಂದು ಕರೆಯಬೇಡಿ ಎಂದು ಕೊಹ್ಲಿ ಕೇಳಿಕೊಂಡರು. ಬದಲಾಗಿ ಕೇವಲ ವಿರಾಟ್ ಎಂದು ಕರೆದರೆ ಸಾಕು ಎಂದರು.

    ವೇದಿಕೆ ಮೇಲೆ ಬಂದ ಕೊಹ್ಲಿಗೆ ಆ್ಯಂಕರ್​ ಪ್ರಶ್ನೆಯೊಂದನ್ನು ಕೇಳಿದರು. ರಾಜನಿಗೆ ಏನು ಅನಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೆಲ್ಲ ಕಿಂಗ್​ ಕೊಹ್ಲಿ.. ಕೊಹ್ಲಿ ಎಂದು ಕೂಗಿದರು. ಈ ಪ್ರತಿಕ್ರಿಯಿಸಿ ಕೊಹ್ಲಿ, ಎಲ್ಲ ಪ್ರೇಕ್ಷಕರು ಸುಮ್ಮನಿರಬೇಕು. ಇಲ್ಲಿಂದ ನಾವು ಬೇಗ ಚೆನ್ನೈಗೆ ಹೊರಡಬೇಕು. ನೀವೆಲ್ಲರೂ ನನ್ನನ್ನು ರಾಜ ಎಂದು ಕರೆಯುವಾಗ ನನಗೆ ತುಂಬಾ ಮುಜುಗರವಾಗುತ್ತದೆ. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದರು. ಆದರೆ ತನ್ನನ್ನು ಕಿಂಗ್​ ಎಂದು ಕರೆಯಬಾರದು ಎಂದು ಕೊಹ್ಲಿ ಗಂಭೀರವಾಗಿ ಹೇಳಲಿಲ್ಲ. ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುವ ಉದ್ದೇಶದಿಂದ ಕೂಲ್ ಆಗಿ ನಗುತ್ತಲೇ ಹೇಳಿದರು.

    ಕೊಹ್ಲಿಯ ಈ ಕಾಮೆಂಟ್ ಇದೀಗ ವೈರಲ್ ಆಗಿದೆ. ವಿರಾಟ್ ಏನೇ ಹೇಳಲಿ ಅಭಿಮಾನಿಗಳಿಗೆ ಮಾತ್ರ ಕೊಹ್ಲಿ ಯಾವತ್ತಿದ್ರೂ ಕಿಂಗ್​. ಕಿಂಗ್​ ಕೊಹ್ಲಿ ಎಂದು ಕರೆಯುವುದನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ. (ಏಜೆನ್ಸೀಸ್)

    ದಿನಗೂಲಿ ನೌಕರ ರಾಜಕೀಯ ಪಕ್ಷಕ್ಕೆ 1,368 ಕೋಟಿ ದಾನ ಮಾಡುವ ಮಟ್ಟಕ್ಕೆ ಬೆಳೆದಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ

    ಮುಸ್ಲಿಮರಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾನೆ: ದಾವೂದ್​ ಇಬ್ರಾಹಿಂನನ್ನು ಹೊಗಳಿದ ಪಾಕ್​ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts