More

    ಟ್ಯಾಟೂ ಪ್ರಿಯರೇ ಎಚ್ಚರ… ಈ ಟ್ಯಾಟೂಗಳನ್ನು ಹಾಕಿಸಿಕೊಂಡ್ರೆ ಶನಿ ಹೆಗಲೇರೋದು ಖಚಿತ!

    ಒಂದು ಕಾಲದಲ್ಲಿ ಟ್ಯಾಟೂಗಳನ್ನು ಪ್ರೀತಿ ಪಾತ್ರರ ನೆನಪಾಗಿ ಹಾಕಿಸಿಕೊಳ್ಳುತ್ತಿದ್ದರು. ಆದರೆ, ಇಂದು ಟ್ಯಾಟೂ ಫ್ಯಾಶನ್​ ಆಗಿ ಬದಲಾಗಿದೆ. ವಿವಿಧ ವಿನ್ಯಾಸದ ಟ್ಯಾಟೂಗಳು ಇದೀಗ ಟ್ರೆಂಡ್​ ಆಗಿದೆ. ಕೆಲವರು ಮೈಯಲ್ಲೆಲ್ಲಾ ಟ್ಯಾಟೂ ಹಾಸಿಕೊಳ್ಳುತ್ತಾರೆ. ಅಂಥವರನ್ನು ನೋಡಿ ನಾವು ಹುಬ್ಬೇರಿಸುತ್ತೇವೆ. ಟ್ಯಾಟೂವಿನಲ್ಲಿ ಸಾಕಷ್ಟು ಡಿಸೈನ್​ಗಳಿವೆ. ಪ್ರತಿಯೊಂದು ವಿನ್ಯಾಸಕ್ಕೂ ಒಂದೊಂದು ಅರ್ಥವಿದೆ.

    ಹೂವುಗಳನ್ನು ನೋಡುವುದು ಸಂತೋಷವನ್ನು ತರುತ್ತದೆ. ಅದು ಧನಾತ್ಮಕ ಶಕ್ತಿಯ ಸಂಕೇತ. ಅದೇ ರೀತಿ ರಕ್ತವನ್ನು ನೋಡಿದರೆ ಭಯ ಉಂಟಾಗುತ್ತದೆ. ಅದು ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಹಣ್ಣನ್ನು ಕಂಡರೆ ನಮಗೆ ತಿನ್ನುವ ಆಸೆಯಾಗುತ್ತದೆ. ಇದು ಕೂಡ ಧನಾತ್ಮಕವಾಗಿದೆ. ಅದೇ ಹಾವನ್ನು ಕಂಡರೆ ನಮಗೆ ಭಯವಾಗುತ್ತದೆ. ಭಯವು ನಕಾರಾತ್ಮಕತೆಯ ಸಂಕೇತವಾಗಿದೆ. ಹಾಗೆಯೇ ನಾವು ಏನನ್ನಾದರೂ ನೋಡಿದರೆ ಅದು ನಮ್ಮಲ್ಲಿ ಧನಾತ್ಮಕತೆಯನ್ನು ಹುಟ್ಟುಹಾಕಬೇಕು ಮತ್ತು ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಬೇಕು. ಹೀಗಾಗಿ ನಮ್ಮ ದೇಹದ ಮೇಲೆ ನಾವು ತುಂಬಾ ಇಷ್ಟಪಟ್ಟು ಹಾಕಿಸಿಕೊಳ್ಳುವ ಟ್ಯಾಟೂ ವಿನ್ಯಾಸವು ಕೂಡ ಧನಾತ್ಮಕವಾಗಿರಬೇಕು. ಏಕೆಂದರೆ ಅದನ್ನು ನೋಡಿದರೆ ನಮ್ಮಲ್ಲಿ ಪಾಸಿಟಿವ್​ ಚಿಂತನೆಗಳು, ಪಾಸಿಟಿವ್ ಎನರ್ಜಿ ಬರಬೇಕು. ಬದಲಾಗಿ ನಕಾರಾತ್ಮಕ ಚಿಂತನೆ ಬರಬಾರದು.

    ಕೆಲವೊಂದು ಟ್ಯಾಟೂಗಳು ನಮ್ಮಲ್ಲಿ ನೆಗೆಟಿವ್​ ಎನರ್ಜಿಯನ್ನು ತರುತ್ತವೆ. ಹೀಗಾಗಿ ಫ್ಯಾಶನ್​ ಹೆಸರಲ್ಲಿ ಯಾವುದೇ ಕಾರಣಕ್ಕೂ ಇಂತಹ ಟ್ಯಾಟೂಗಳನ್ನು ಹಾಕಿಸಿಕೊಳ್ಳಬೇಡಿ. ಒಳ್ಳೆಯ ವಿನ್ಯಾಸ ಟ್ಯಾಟೂಗಳನ್ನು ಹಾಕಿಸಿಕೊಳ್ಳಿ. ಕೆಟ್ಟ ವಿನ್ಯಾಸದ ಟ್ಯಾಟೂಗಳನ್ನು ನೋಡಿದಾಗ ನಿಮ್ಮ ದೇಹ ಮತ್ತು ಮನಸ್ಸು ಖಿನ್ನತೆಗೆ ಜಾರಬಾರದು. ಬದಲಾಗಿ ನಿಮ್ಮ ಮುಖದಲ್ಲಿ ನಗು ಅರಳಿಸಬೇಕು. ಹೀಗಾಗಿ ಕೆಲವು ರೀತಿಯ ಟ್ಯಾಟೂ ವಿನ್ಯಾಸಗಳನ್ನು ಎಂದಿಗೂ ದೇಹದ ಮೇಲೆ ಹಚ್ಚಿಕೊಳ್ಳಬಾರದು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.

    ಮನೆಯಲ್ಲಿ ಒಡೆದ ವಸ್ತುಗಳು ಇರಬಾರದು ಎಂದು ಹೇಳುತ್ತಾರೆ. ಕನ್ನಡಿ, ಗಡಿಯಾರ ಹಾಗೂ ದೇವರ ಫೋಟೋ ಸೇರಿದಂತೆ ಒಡೆದ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂದು ಹೇಳುತ್ತಾರೆ. ಇದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಟ್ಯಾಟೂಗಳಲ್ಲಿ ಕೆಲವೊಂದು ವಿನ್ಯಾಸವನ್ನು ಹಾಕಿಸಿಕೊಳ್ಳಬಾರದು ಎಂಧು ಹೇಳಲಾಗುತ್ತದೆ. ಒಂದು ವೇಳೆ ಈ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡರೆ ಶನಿ ನಿಮ್ಮ ಹೆಗಲೇರಿದಂತೆ. ಹಾಗಾದರೆ ಯಾವ ವಿನ್ಯಾಸದ ಟ್ಯಾಟೂ ಹಾಕಿಸಿಕೊಳ್ಳಬಾರದು ಎಂಬುದನ್ನು ನಾವೀಗ ತಿಳಿಯೋಣ.

    ಬಿರುಕು ಬಿಟ್ಟ ಕನ್ನಡಿ
    ಬಿರುಕು ಬಿಟ್ಟ ಕನ್ನಡಿ ವಿನ್ಯಾಸವನ್ನು ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ಮುರಿದ ಕನ್ನಡಿಯು ದುರದೃಷ್ಟ ಹಾಗೂ ಅಶುಭ ಸಂಕೇತವಾಗಿದೆ. ಜೀವನ ಅಸ್ತವ್ಯಸ್ತಗೊಂಡಿದೆ ಎಂಬ ಅರ್ಥವನ್ನು ನೀಡುತ್ತದೆ. ಈ ವಿನ್ಯಾಸ ಜೀವನದಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಇಂತಹ ಹಚ್ಚೆ ಹಾಕಿಸಿಕೊಂಡವರು ವೈಯಕ್ತಿಕ, ವೃತ್ತಿಪರ ಮತ್ತು ವ್ಯಾಪಾರ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

    ಕುದರೆ ಲಾಳದ ಉಲ್ಟಾ ವಿನ್ಯಾಸ
    ಕುದುರೆ ಲಾಳದ ಚಿಹ್ನೆಯು ಅದೃಷ್ಟದ ಸಂಕೇತವಾಗಿದೆ. ಆದಾಗ್ಯೂ, ಲಾಳದ ಉಲ್ಟಾ ವಿನ್ಯಾಸದ ಟ್ಯಾಟೂವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಈ ವಿನ್ಯಾಸವು ಜೀವನದಲ್ಲಿ ಸಕಾರಾತ್ಮಕತೆಯನ್ನು ಬರಿದುಮಾಡುವ ಅಶುಭ ಸಂಕೇತವಾಗಿದೆ. ಈ ವಿನ್ಯಾಸವನ್ನು ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ.

    ಮುರಿದ ವಾಚ್​
    ಮುರಿದ ವಾಚ್​ ಕೂಡ ದುರಾದೃಷ್ಟದ ಸಂಕೇತವಾಗಿದೆ. ವಾಸ್ತು ಪ್ರಕಾರ ಮುರಿದ ಗಡಿಯಾರವು ನಿಂತ ಸಮಯದ ಸಂಕೇತವಾಗಿದೆ. ಇಂತಹ ವಿನ್ಯಾಸವನ್ನು ದೇಹದ ಮೇಲೆ ಹಚ್ಚಿಕೊಂಡರೆ ಜೀವನದಲ್ಲಿ ಪ್ರಗತಿ ಕುಂಠಿತವಾಗುತ್ತದೆ. ಅಂದಹಾಗೆ ಗಡಿಯಾರವು ಸಮಯವನ್ನು ಸೂಚಿಸುವುದು ಮಾತ್ರವಲ್ಲದೇ ಗ್ರಹಗಳ ಚಲನೆಗೆ ಅನುಗುಣವಾಗಿ ಅದು ಚಲಿಸುತ್ತದೆ. ಆದ್ದರಿಂದ, ಮುರಿದ ಗಡಿಯಾರವನ್ನು ಹಚ್ಚೆ ಹಾಕಿದರೆ, ಅದು ನಕಾರಾತ್ಮಕತೆಯ ಸಂಕೇತವಾಗಿದೆ.

    ದುಃಖದ ಮುಖ
    ದುಃಖದ ಮುಖವು ನಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಯಾರಾದರೂ ಅತ್ತರೆ ಅಶುಭ ಎಂದು ಹೇಳಲಾಗುತ್ತದೆ. ಸಪ್ಪೆ ಅಥವಾ ದುಃಖದ ಮುಖವು ದುರಾದೃಷ್ಟವನ್ನು ಆಕರ್ಷಿಸುತ್ತದೆ. ಜೀವನದಲ್ಲಿ ಭಾವನೆಗಳು ಬಹಳ ಮುಖ್ಯ. ನಾವು ಅವುಗಳನ್ನು ವ್ಯಕ್ತಪಡಿಸುವ ರೀತಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದುಃಖವನ್ನು ವ್ಯಕ್ತಪಡಿಸುವ ಟ್ಯಾಟೂ ವಿನ್ಯಾಸಗಳನ್ನು ದೇಹದ ಮೇಲೆ ಹಾಕಿಸಿಕೊಂಡರೆ, ಜೀವನದಲ್ಲಿ ದುರಾದೃಷ್ಟ ಸಂಭವಿಸುತ್ತದೆ ಎಂದು ಶಾಸ್ತ್ರ ಹೇಳುತ್ತದೆ. (ಏಜೆನ್ಸೀಸ್​)

    ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗ: ಈ 3 ರಾಶಿಯವರಿಗೆ ರಾಜಯೋಗ ಶುರು, ಹರಿದುಬರುತ್ತೇ ಹಣದ ಹೊಳೆ

    ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದೇಕೆ? ನನಗೆ ಪುಳಿಯೋಗರೆನೂ ಬೇಕು… ಅನುಪಮಾ ಉತ್ತರ ಕೇಳಿ ಫ್ಯಾನ್ಸ್​ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts