More

  ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದೇಕೆ? ನನಗೆ ಪುಳಿಯೋಗರೆನೂ ಬೇಕು… ಅನುಪಮಾ ಉತ್ತರ ಕೇಳಿ ಫ್ಯಾನ್ಸ್​ ಶಾಕ್​

  ಹೈದರಾಬಾದ್​: ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಸೌತ್​ ಬ್ಯೂಟಿ ಅನುಪಮಾ ಪರಮೇಶ್ವರನ್, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ.​ ಮೂಲತಃ ಮಲಯಾಳಿಯಾಗಿರುವ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

  ಬಹುಭಾಷಾ ನಟಿಯಾಗಿರುವ ಅನುಪಮಾ ಕೆಲವು ದಿನಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ಟಾಲಿವುಡ್​ನಲ್ಲಿ ಟಿಲ್ಲು ಸ್ಕ್ವೇರ್​ ಸಿನಿಮಾದ ಟ್ರೈಲರ್​ ಬಿಡುಗಡೆಯಾದಾಗಿನಿಂದ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅನುಪಮಾ, ದಿಢೀರನೇ ಅಲ್ಟ್ರಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದು, ಅವರ ಕಟ್ಟಾ ಅಭಿಮಾನಿಗಳಿಗೆ ಬಹಳ ಬೇಸರವಾಗಿದೆ.

  ನಾಯಕ ಸಿದ್ದು ಜೊನ್ನಲಗಡ್ಡ-ಅನುಪಮಾ ಅಭಿನಯದ ‘ಟಿಲ್ಲು ಸ್ಕ್ವೇರ್’ ಚಿತ್ರ ಮಾರ್ಚ್ 29 ರಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಆರಂಭಿಸಿದೆ. ಇದರ ನಡುವೆ ನಿನ್ನೆಯಷ್ಟೇ ಈ ಸಿನಿಮಾದ ‘ಓ ಮೈ ಲಿಲ್ಲಿ’ ಹಾಡು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಅನುಪಮಾ, ನೀಡಿದ ಉತ್ತರಗಳನ್ನು ಕೇಳಿ ಮಾಧ್ಯಮದವರು ದಂಗಾಗಿದ್ದಾರೆ.

  ಈ ಸಿನಿಮಾದಲ್ಲಿ ಹಿಂದೆಂದೂ ಕಾಣದಂತಹ ಅತಿಯಾದ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀರಿ ಅದಕ್ಕೆ ಕಾರಣವೇನು? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅನುಪಮಾ, ಒಬ್ಬ ನಟಿಯಾಗಿ ಹಲವು ವರ್ಷಗಳಿಂದ ಮಾಡಿದ ಪಾತ್ರಗಳನ್ನೇ ಪುನರಾವರ್ತಿಸಿದರೆ ಬೇಸರವಾಗುತ್ತದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಹುಡುಗಿಗೆ ಇಷ್ಟು ಒಳ್ಳೆಯ ಪಾತ್ರ ಸಿಗುವುದಿಲ್ಲ. ಆದರೆ, ಈ ಸಿನಿಮಾದಲ್ಲಿ ಲಿಲ್ಲಿ ಪಾತ್ರ ಸಿಕ್ಕಿದೆ. ಇದನ್ನು ಬಿಟ್ಟುಕೊಟ್ಟರೆ ಅದಕ್ಕಿಂತ ದಡ್ಡತನ ಇಲ್ಲ. ಇಷ್ಟು ಒಳ್ಳೆಯ ಪಾತ್ರವನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. ಎಷ್ಟೇ ಇತಿಮಿತಿಗಳಿದ್ದರೂ ಕಲಾವಿದೆಯಾಗಿ ನಟಿಸುವುದು ನನ್ನ ಕರ್ತವ್ಯ. ನಿರ್ದೇಶಕರು ಕೊಟ್ಟ ಪಾತ್ರಕ್ಕೆ ನಾನು ನೂರಕ್ಕೆ ನೂರಷ್ಟು ಜೀವ ತುಂಬಬೇಕು. ನಾನು ಅದನ್ನು ಮಾಡಲು ಪ್ರಯತ್ನಿಸಿದೆ’ ಎಂದು ಅನುಪಮಾ ಅವರು ಹೇಳಿದರು.

  ಅನುಪಮಾ ಅವರು ಈ ಉತ್ತರ ನೀಡಿದ ನಂತರವೂ ಮತ್ತೊಬ್ಬ ವರದಿಗಾರ ಮತ್ತೆ ಅದೇ ಪ್ರಶ್ನೆ ಕೇಳಿದಾಗ ಅನುಪಮಾ ಸಖತ್ ಕೌಂಟರ್ ಕೊಟ್ಟರು. ನಿಮಗೆ ಬಿರಿಯಾನಿ ಇಷ್ಟ ಅಂತಾ ನೀವು ಪ್ರತಿದಿನ ಮನೆಯಲ್ಲಿ ಬಿರಿಯಾನಿ ತಿನ್ನುತ್ತೀರಾ? ಇಲ್ಲ ತಾನೇ, ನನಗೂ ಪ್ರತಿದಿನ ಬಿರಿಯಾನಿ ತಿನ್ನಲು ಇಷ್ಟವಿಲ್ಲ. ನನಗೂ ಪುಲಾವ್, ಪುಳಿಯೋಗರೆ ಎಲ್ಲ ಬೇಕು ಅಲ್ವಾ ಎಂದು ಕೌಂಟರ್ ಕೊಟ್ಟರು. ಅನುಪಮಾ ಅವರು ನೀಡಿದ ಕಾಮೆಂಟ್ಸ್ ಈಗ ವೈರಲ್ ಆಗುತ್ತಿದ್ದು, ಇದನ್ನು ಕೇಳಿ ಅಭಿಮಾನಿಗಳೂ ಕೂಡ ಶಾಕ್​ ಆಗಿದ್ದಾರೆ.

  ಅಂದಹಾಗೆ ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

  ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ದೀರ್ಘ ಕಾಲದ ಲಿಪ್​ಲಾಕ್ ದೃಶ್ಯ​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದು, ಈ ಬಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

  ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

  ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

  ಇವರೇ ನೋಡಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts