More

    ಅಫೇರ್​ಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಜೀವನ ಎಂದು ಭಾವಿಸಿದ್ದಾರೆ: ಬಿಗಿಲ್​ ನಟಿಯ ಶಾಕಿಂಗ್​ ಹೇಳಿಕೆ

    ಹೈದರಾಬಾದ್​: ಗಾಯತ್ರಿ ರೆಡ್ಡಿ. ಈ ನಟಿಯ ಹೆಸರು ಕೆಲವೇ ಜನರಿಗೆ ಮಾತ್ರ ಗೊತ್ತು. ಆದರೆ, ಈಕೆ ಮಾಡಿದ ಸಿನಿಮಾಗಳು ಮತ್ತು ನಟಿಸಿದ ಪಾತ್ರಗಳು ಎಷ್ಟೋ ಮಂದಿಗೆ ತಿಳಿದಿದೆ. ಗಾಯತ್ರಿ ಬಿಗಿಲ್ ಚಿತ್ರದಲ್ಲಿ ಫುಟ್ಬಾಲ್ ಆಟಗಾರ್ತಿಯಾಗಿ ನಟಿಸಿದ್ದಾರೆ. ಆ ನಂತರ ತೆಲುಗಿನ ಲಿಫ್ಟ್​ ಚಿತ್ರದಲ್ಲಿನ ತಮ್ಮ ಅಭಿನಯದಿಂದ ವಿಶೇಷ ಮನ್ನಣೆ ಗಳಿಸಿದರು. ಇದಲ್ಲದೆ, ಅವರು ತೆಲುಗಿನ ಶಿಕಾರು ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

    ಗಾಯತ್ರಿ ಅವರು ನಟಿಸಿದ್ದು ಮೂರೇ ಸಿನಿಮಾ. ಸದ್ಯ ಸಿನಿಮಾಗಳಿಗೆ ಗುಡ್ ಬೈ ಹೇಳಿ ಸಿವಿಲ್ ಇಂಜಿನಿಯರ್​ನನ್ನು ಮದುವೆಯಾಗಿ ಖುಷಿ ಜೀವನ ಕಳೆಯುತ್ತಿದ್ದಾರೆ. ಗಾಯತ್ರಿ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ತಮ್ಮದೇಯಾದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಆಗಾಗ ತಮ್ಮ ಅಭಿಪ್ರಾಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಾನು ಸ್ವಾರ್ಥಿ ಎಂಬ ಶೀರ್ಷಿಕೆಯುಳ್ಳ ವಿಡಿಯೋ ವೈರಲ್ ಆಗಿದೆ.

    ಗಾಯತ್ರಿ ರೆಡ್ಡಿ ತನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸದ್ಯ ಬಿಡುಗಡೆ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ಮಹಿಳೆಯರಿಗಾಗಿ ಉತ್ತಮ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಅನುಭವವನ್ನು ಮಹಿಳೆಯರೊಂದಿಗೆ ಹಂಚಿಕೊಂಡಿದ್ದಾರೆ. ಪಿರಿಯಡ್ಸ್ ಸಮಯದಲ್ಲಿ ನಾನು ಕಾಫಿ ಕುಡಿಯುವುದಿಲ್ಲ ಎಂದಿದ್ದಾರೆ. ಕಾಫಿ ಕುಡಿದರೆ ಹೆಚ್ಚು ತೊಂದರೆಯಾಗುತ್ತದೆ. ಅಲ್ಲದೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಹೆಚ್ಚಾಗುತ್ತದೆ. ಕುಡಿಯಬೇಕು ಅನಿಸಿದರೆ ಲೆಮನ್ ಟೀ, ಜಿಂಜರ್ ಟೀ ಕುಡಿಯುತ್ತೇನೆ. ಪಿರಿಯಡ್ಸ್​ ವೇಳೆ ಕಾಫಿ ಕುಡಿಯದಿರುವುದೇ ಉತ್ತಮ ಎಂದು ಸಲಹೆ ನೀಡಿದ್ದಾರೆ.

    ನನ್ನ ತಾಯಿ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ. ಅದು ನಿಜ. ನನ್ನೊಂದಿಗಿದ್ದ ಕೆಟ್ಟವರ ಜತೆ ನಾನು ಸ್ನೇಹವನ್ನು ಕಡಿದುಕೊಂಡಿದ್ದೇನೆ. ನನಗೂ ಸ್ನೇಹಿತರು ಬೇಕು. ಆದರೆ, ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡುತ್ತಿಲ್ಲ. ಹೀಗಾಗಿ ಅವರಿಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ. ನಾನು ಜೀವನದಲ್ಲಿ ಚೆನ್ನಾಗಿಯೇ ಇದ್ದೇನೆ. ಆದರೆ, ಅವರಿನ್ನೂ ಹಾಗೆಯೇ ಇದ್ದಾರೆ ಮತ್ತು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನಿಮ್ಮ ಜೀವನದಲ್ಲಿ ನಿಮ್ಮ ಬೆಳವಣಿಗೆಗೆ ಸಹಾಯ ಮಾಡದವರ ಜತೆ ಎಂದಿಗೂ ಸ್ನೇಹ ಬೆಳಸಬೇಡಿ ಎಂದು ಗಾಯತ್ರಿ ಹೇಳಿದ್ದಾರೆ.

    ನೀವು ಸ್ನೇಹಿತರೊಂದಿಗೆ ಮಿತಿಯನ್ನು ಹೊಂದಿರಬೇಕು. ನಾನೊಬ್ಬ ಸ್ವಾರ್ಥಿ. ಆದರೆ, ನನ್ನ ಜೀವನಕ್ಕಾಗಿ ನಾನು ಸ್ವಾರ್ಥಿಯಾಗಿದ್ದೇನೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ನನ್ನ ಜೀವನದಲ್ಲಿ ಕೆಲವೇ ಜನರು ಸ್ನೇಹಿತರಿದ್ದಾರೆ. ನನ್ನ ಬೆಳವಣಿಗೆ ನೋಡಿ ಅವರಿಗೆ ಖುಷಿಯಾಗಿದೆ. ನಾನು ನನ್ನ ಸಾಧನೆಗಳನ್ನು ನಿಜವಾಗಿಯೂ ಆನಂದಿಸುವವರಿಗೆ ಮಾತ್ರ ಹೇಳುತ್ತೇನೆ. ಕೆಲವರು ಅಫೇರ್​ಗಳನ್ನು ಇಟ್ಟುಕೊಳ್ಳುವುದು ನಿಜವಾದ ಜೀವನ ಎಂದು ಭಾವಿಸುತ್ತಾರೆ. ಅಂತಹ ಸ್ನೇಹಿತರು ನನಗೆ ಬೇಡ ಎಂದು ಗಾಯತ್ರಿ ರೆಡ್ಡಿ ಅವರು ಹೇಳಿದ್ದಾರೆ. ಇದೀಗ ಅವರ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. (ಏಜೆನ್ಸೀಸ್​)

    ನಟಿ ತ್ರಿಷಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉದ್ಯಮಿಯನ್ನು ವರಿಸಲಿದ್ದಾರೆ 37 ವರ್ಷದ ಸ್ಟಾರ್​ ನಟಿ!

    ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಸಿಗಲು ರೋಹಿತ್​ ಶರ್ಮ ಕಾರಣ! ರಾಬಿನ್​ ಉತ್ತಪ್ಪ ಸ್ಪೋಟಕ ಹೇಳಿಕೆ

    1986ರಲ್ಲಿ ರಾಯಲ್​ ಎನ್​ಫೀಲ್ಡ್​ ಬೈಕ್​​ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts