More

    ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಸಿಗಲು ರೋಹಿತ್​ ಶರ್ಮ ಕಾರಣ! ರಾಬಿನ್​ ಉತ್ತಪ್ಪ ಸ್ಪೋಟಕ ಹೇಳಿಕೆ

    ಮುಂಬೈ: ಐಪಿಎಲ್​-2024 ಆರಂಭಕ್ಕೂ ಮುನ್ನ ಮತ್ತು ನಂತರ ಮುಂಬೈ ಇಂಡಿಯನ್ಸ್ ತಂಡ ಬಹಳ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ದಿಢೀರ್​ ಬದಲಾದ ತಂಡದ ನಾಯಕತ್ವ. ಮುಂಬೈಗೆ 5 ಬಾರಿ ಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ಆಟಗಾರ ರೋಹಿತ್ ಶರ್ಮರನ್ನು ನಾಯಕತ್ವದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ಕೂರಿಸಿದ್ದು, ಬಹಳ ಚರ್ಚೆಗೆ ಗ್ರಾಸವಾಯಿತು.

    ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಪಾಂಡ್ಯ ಅವರನ್ನು ಕರೆತಂದು ಮುಂಬೈ ತಂಡದ ನಾಯಕನನ್ನಾಗಿ ಮಾಡುವ ಮೂಲಕ ರೋಹಿತ್​ ಅವರಿಗೆ ಫ್ರಾಂಚೈಸಿ ಅಗೌರವ ತೋರಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ಮುಂಬೈ ಪಂದ್ಯ ನಡೆದಾಗಲೆಲ್ಲ ಮೈದಾನದಲ್ಲೇ ಅಭಿಮಾನಿಗಳು ಕೋಪವನ್ನು ತೋರಿಸುತ್ತಿದ್ದರು. ಹಾರ್ದಿಕ್ ಅವರನ್ನು ಗೇಲಿ ಮಾಡುತ್ತಿದ್ದರು. ಕ್ರೀಡಾಂಗಣದ ಪರದೆಯಲ್ಲಿ ಹಾಗೂ ಕ್ರೀಸ್​ನಲ್ಲಿ ಹಾರ್ದಿಕ್ ಕಂಡಾಗಲೆಲ್ಲ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಇದರಿಂದಾಗಿ ಪಾಂಡ್ಯ ಒತ್ತಡಕ್ಕೆ ಸಿಲುಕಿದ್ದು, ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ. ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು ಮುಂಬೈ ನಾಯಕತ್ವದ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.

    ಮುಂಬೈ ನಾಯಕತ್ವ ಬದಲಾವಣೆ ವಿವಾದದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ. ಪಾಡ್‌ಕ್ಯಾಸ್ಟ್ ಶೋನಲ್ಲಿ ಮಾತನಾಡುತ್ತಾ, ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಲು ರೋಹಿತ್ ಅವರೇ ಕಾರಣ ಎಂದು ಹೇಳಿದ್ದಾರೆ. ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿ ಹಿಟ್‌ಮ್ಯಾನ್ ವಿಫಲರಾಗಿದ್ದರಿಂದ ಮುಂಬೈ ತಂಡ ಪಾಂಡ್ಯಗೆ ನಾಯಕತ್ವವನ್ನು ನೀಡಿತು. ಒಂದು ಸಮಯದಲ್ಲಿ ರೋಹಿತ್ ಶರ್ಮಗೆ ಟೂರ್ನಿಯ ಮಧ್ಯದಲ್ಲೇ ನಾಯಕತ್ವವನ್ನು ನೀಡಲಾಯಿತು. ಅದೂ ಕೂಡ ರಿಕ್ಕಿ ಪಾಂಟಿಂಗ್‌ನಂತಹ ದಂತಕಥೆಯನ್ನು ಬಿಟ್ಟು ರೋಹಿತ್​ಗೆ ಜವಾಬ್ದಾರಿಯನ್ನು ವಹಿಸಲಾಯಿತು. ಪಾಂಟಿಂಗ್ ಜೊತೆಗೆ ಹರ್ಭಜನ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದರು. ಕಳೆದ 4 ವರ್ಷಗಳಿಂದ ರೋಹಿತ್ ಉತ್ತಮವಾಗಿ ಆಡುತ್ತಿಲ್ಲ. 2020ರ ನಂತರ ಮುಂಬೈ ತಂಡ ಮತ್ತೆ ಕಪ್ ಗೆದ್ದಿಲ್ಲ ಎಂದು ಉತಪ್ಪ ಹೇಳಿದರು.

    ರೋಹಿತ್ ಕಳೆದ ನಾಲ್ಕು ಸೀಸನ್​ಗಳಲ್ಲಿ ಬ್ಯಾಟ್ಸ್‌ಮನ್ ಮತ್ತು ನಾಯಕರಾಗಿ ವಿಫಲರಾಗಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಅವರು 300ಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ. ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಅವರ ಯಶಸ್ಸಿನ ಪ್ರಮಾಣ ಕುಸಿದಿದೆ. ಇದು ಹಾರ್ದಿಕ್‌ಗೆ ಪ್ಲಸ್ ಆಗಿದೆ ಎಂದು ಉತ್ತಪ್ಪ ಹೇಳಿದರು.

    ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಪಾಂಡ್ಯ ಮಾನಸಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಫಿಟ್‌ನೆಸ್ ಮತ್ತು ಪ್ರದರ್ಶನದ ಬಗ್ಗೆ ಟ್ರೋಲ್‌ಗಳು, ಟೀಕೆಗಳು ಮತ್ತು ನಕಾರಾತ್ಮಕತೆಗಳು ನನ್ನನ್ನು ನೋಯಿಸುತ್ತಿವೆ ಎಂದು ಹಾರ್ದಿಕ್ ಸ್ವತಃ ಹೇಳಿಕೊಂಡಿದ್ದಾರೆ. ಪಾಂಡ್ಯ ಮಾತ್ರವಲ್ಲದೆ ಯಾರಿಗಾದರೂ ಇಂತಹ ಪರಿಸ್ಥಿತಿ ಎದುರಾದರೆ ಅದು ತುಂಬಾ ಕಷ್ಟ ಎಂದು ಉತ್ತಪ್ಪ ವಿವರಿಸಿದರು. (ಏಜೆನ್ಸೀಸ್​)

    1986ರಲ್ಲಿ ರಾಯಲ್​ ಎನ್​ಫೀಲ್ಡ್​ ಬೈಕ್​​ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ನಾ ಕೊಟ್ಟ ಬ್ಯಾಟ್​ ಮುರಿದುಬಿಟ್ಟಾ? ರಿಂಕು ಸಿಂಗ್​ ವಿರುದ್ಧ ಕೊಹ್ಲಿ ಗರಂ, ಆಣೆ ಮಾಡ್ತೀನಿ ಅಂದ್ರು ಒಪ್ಪದ ವಿರಾಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts