More

    ಯುವಕನ ತೋಳಿನಲ್ಲಿ ಟ್ಯಾಟೂ ಕ್ಯುಆರ್​ ಕೋಡ್: ಸ್ಕ್ಯಾನ್​ ಮಾಡಿದವರಿಗೆ ಕಾದಿತ್ತು ಅಚ್ಚರಿ..!​

    ರೋಮ್​: ಸಾಮಾನ್ಯವಾಗಿ ಬಾರ್​ ಕೋಡ್​ಗಳು ಅಥವಾ ಕ್ಯುಆರ್​ ಕೋಡ್​ಗಳು ವಸ್ತುಗಳ ಮೇಲೆ ಹಾಗೂ ಶಾಪ್​ಗಳಲ್ಲಿ ಇರುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ಬಾರ್​ಕೋಡ್ ಟ್ಯಾಟೂ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಅಷ್ಟಕ್ಕೂ ಆತ ಟ್ಯಾಟೂ ಬಾರ್​​ಕೋಡ್​ ಹಾಕಿಕೊಳ್ಳಲು ಒಂದು ಕಾರಣವೂ ಇದೆ. ಅದರ ಬಗ್ಗೆ ತಿಳಿದರೆ ನೀವು ಹುಬ್ಬೇರಿಸುವುದಂತೂ ಖಂಡಿತ. ​

    ಇಟಲಿ ಮೂಲದ ಆಂಡ್ರಿಯಾ ಕೊಲೊನೆಟ್ (22) ಹೊಸ ಮಾದರಿಯ ಟ್ಯಾಟೂ ಹಾಕಿಕೊಳ್ಳಲು ಸಾಕಷ್ಟು ಚಿಂತಿಸುತ್ತಿರುತ್ತಾನೆ. ಇದುವರೆಗೂ ಯಾರೂ ಹಾಕಿಸಿಕೊಳ್ಳದ ಟ್ಯಾಟೂ ಹಾಕಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದು ಚಿಂತಿಸುತ್ತಿರುವಾಗ ಟ್ಯಾಟೂ ಕಲಾವಿದ ಗೇಬ್ರಿಯೆಲ್ ಪೆಲ್ಲರೋನ್ ಜತೆ ಮಾತನಾಡಿದ ಬಳಿಕ ಪ್ರಾಯೋಗಿಕ ಆಯ್ಕೆಯನ್ನು ನಿರ್ಧರಿಸುತ್ತಾನೆ.

    ಹಾಕಿಸಿಕೊಳ್ಳುವ ಟ್ಯಾಟೂ ನೈಜವಾಗಿರಬೇಕು ಮತ್ತು ತುಂಬಾ ವಿಭಿನ್ನವಾಗಿ ಇರಬೇಕೆಂದು ಯೋಚಿಸುತ್ತಿರುವಾಗಲೇ ಆತನಿಗೆ ಒಂದು ಐಡಿಯಾ ಬರುತ್ತದೆ. ಕೊನೆಗೆ ಕೊಲೊನೆಟ್, ತನ್ನ ಎಡಗೈಯ ತೋಳಿನನಲ್ಲಿ ಅಧಿಕೃತ ಇಟಾಲಿಯನ್ ಗ್ರೀನ್ ಪಾಸ್‌ನ ಕ್ಯೂಆರ್ ಕೋಡ್‌ ಮಾದರಿಯ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದು ತುಂಬಾ ವಿಭಿನ್ನ ಕಲ್ಪನೆ ಎಂದೇ ಹೇಳಬಹುದಾಗಿದೆ.

    ಈ ಕಲ್ಪನೆ ಹಿಂದೆಯೂ ಒಂದು ದೂರದ ಆಲೋಚನೆ ಇದೆ. ಸದ್ಯದ ಕರೊನಾ ಕಾಲದಲ್ಲಿ ಎಲ್ಲಿ ಹೋದರು ಕರೊನಾ ಲಸಿಕೆ ತೆಗೆದುಕೊಂಡಿದ್ದೀಯಾ ಎಂದು ಕೇಳುತ್ತಾರೆ. ಹೌದು ಎಂದರೆ ಪ್ರಮಾಣ ಪತ್ರ ತೋರಿಸು ಎಂದು ಕೇಳುವುದು ಉಂಟು. ಆದರೆ, ಹೋದ ಕಡೆಯಲೆಲ್ಲ ಪ್ರಮಾಣ ಪತ್ರ ತೆಗೆದುಕೊಂಡ ಹೋಗುವುದಕ್ಕಾಗಲ್ಲ. ಹೀಗಾಗಿಯೇ ಕೊಲೊನೆಟ್ ಪ್ರಮಾಣ ಪತ್ರವನ್ನು ಕ್ಯೂ ಆರ್​ ಕೋಡ್​ ಮೂಲಕ ತನ್ನ ತೋಳಿನ ಮೂಲಕವೇ ಅಳವಡಿಸಿಕೊಂಡಿದ್ದಾನೆ.

    ಯಾರಾದರೂ ತೋಳಿನಲ್ಲಿರುವ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿದರೆ, ಕೊಲೊನೆಟ್ ಲಸಿಕೆ ಪಡೆದಿರುವ ಬಗ್ಗೆ ಮತ್ತು ಕರೊನಾ ನೆಗಿಟಿವ್​ ಇರುವ ಬಗ್ಗೆ ತೋರಿಸುತ್ತದೆ. ಇದೊಂದು ರೀತಿಯಲ್ಲಿ ಡಿಜಿಟಲ್​ ಕೋವಿಡ್​ ಪ್ರಮಾಣ ಪತ್ರದ ವಿಸ್ತೃತ ರೂಪವಾಗಿದೆ. ಎರಡೂ ಡೋಸ್​ ಪಡೆದಿರುವ ಕೊಲೊನೆಟ್ ಅವರ ವಿಭಿನ್ನ ಕಲ್ಪನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಕೋಮಾಗೆ ಜಾರಿದ್ದ ಪ್ರೇಯಸಿ: ನಿಜ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಸಾಬೀತು!

    ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್…

    PHOTOS: ಬಿಕಿನಿ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಾಲಿವುಡ್​ ಬ್ಯೂಟಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts