More

    ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ವಂಚನೆ

    ಹುಬ್ಬಳ್ಳಿ: ಸೈನಿಕನ ಹೆಸರಲ್ಲಿ ಕರೆ ಮಾಡಿ ಆನ್​ಲೈನ್ ಮೂಲಕ ವಸ್ತು ಖರೀದಿಸುವುದಾಗಿ ನಂಬಿಸಿ ಕ್ಯೂ ಆರ್ ಕೋಡ್ ಕಳಿಸಿ 40,000 ರೂ. ವಂಚಿಸಿರುವ ಕುರಿತು ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಬುಧವಾರ ಮತ್ತೊಂದು ಪ್ರಕರಣ ದಾಖಲಾಗಿದೆ.

    ಗೋಕುಲ ರೋಡ್ ಪ್ರಸನ್ನ ಕಾಲನಿಯ ಅರುಣ ಫಡ್ನವಿಸ್ ಅವರು ‘ಫೂಟ್ ಆಪರೇಟೆಡ್ ಸ್ಯಾನಿಟೈಸರ್ ಡಿಸ್ಪೆನ್ಸರ್’ ಮಾರಾಟ ಮಾಡುವ ಸಲುವಾಗಿ ಇಂಡಿಯಾ ಮಾರ್ಟ್​ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಮೇ 26ರಂದು ಅಪರಿಚಿತನೊಬ್ಬ ಕರೆ ಮಾಡಿ, ‘ತನ್ನ ಹೆಸರು ಸಾಹಿಲ್, ತಾನು ಸೇನೆಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದ. 100ಕ್ಕೂ ಹೆಚ್ಚು ಸಾಮಗ್ರಿ ಬೇಕು. ಖರೀದಿಸಲು ಸಹಾಯಕ ಕರೆ ಮಾಡುತ್ತಾನೆಂದು ಹೇಳಿದ್ದ. ಸಹಾಯಕನ ಹೆಸರಲ್ಲಿ ಮತ್ತೊಬ್ಬ ಕರೆ ಮಾಡಿ ಹಣ ಜಮೆ ಮಾಡುತ್ತೇನೆ ಎಂದು ವಾಟ್ಸ್ಯಾಪ್ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿದ್ದ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಪಿನ್ ಹಾಕಿ ಸಬ್​ವಿುಟ್ ಮಾಡಿದ ಬಳಿಕ ಹಂತ ಹಂತವಾಗಿ ಅರುಣ ಅವರ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಿಂದ 40 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಪತ್ತೆಗೆ ಕ್ರಮ: ಆರೋಪಿಯ ಹೆಸರು, ವಿಳಾಸ ಮತ್ತಿತರ ವಿವರ ನೀಡುವಂತೆ ವಾಟ್ಸ್ಯಾಪ್ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಪತ್ರ ಬರೆಯಲಾಗಿದೆ. ಆರೋಪಿಯ ವಿವರ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಎಂದು ಸೈಬರ್ ಕ್ರೖೆಂ ಠಾಣೆ ಇನ್ಸ್​ಪೆಕ್ಟರ್ ಡಿ.ಕೆ. ಪ್ರಭುಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts