More

    ಗೃಹ ಸಾಲ ನೆಪದಲ್ಲಿ ಬ್ಯಾಂಕಿಗೆ ಧೋಖಾ

    ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮಾರಾಟವಾಗಿರುವ 4 ಪ್ಲ್ಯಾಟ್ ಗಳಿಗೆ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿನಿಂದ ಲಕ್ಷಾಂತರ ರೂ. ಸಾಲ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಶಾಂತಿನಗರದ ಕೆ.ಎಚ್.ರಸ್ತೆ ಇಂಡಿಯನ್ ಓವರಸೀಸ್ ಬ್ಯಾಂಕ್ ಅಧಿಕಾರಿ ಉಮೇಶ್‌ಕುಮಾರ್ ಸಿಂಗ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಕೋಡಿಹಳ್ಳಿಯ ಡೆಸ್ಟಿನಿ ಡೆವಲಪರ್, ಇದರ ವ್ಯವಸ್ಥಾಪಕ ಪಾಲುದಾರರಾದ ಮೃದುಲಾ ಜೋಗಿ, ಮುನಿ ಮಾಸನ ಗೋಪುರಂ ಮತ್ತು ಏಜೆಂಟ್‌ಗಳಾದ ಜಮುನಾ, ಎಂ.ಎಚ್. ದಿಲೀಪ್, ಗುರುಪ್ರಸಾದ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಡೆಸ್ಟಿನಿ ಡೆವಲಪರ್ ಕಡೆಯಿಂದ ತೂಬರಹಳ್ಳಿಯ ಗ್ರಾಮ ವರ್ತೂರು ಹೋಬಳಿಯಲ್ಲಿ ಡೆಸ್ಟಿನಿ ಗ್ಲೋಬಲ್ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಮಾರಾಟ ಮಾಡಿರುವ ಪ್ಲ್ಯಾಟ್ ಗಳನ್ನು ಮತ್ತೊಬ್ಬರಿಗೆ 2ನೇ ಬಾರಿಗೆ ಮಾರಾಟ ಮಾಡಲಾಗಿತ್ತು. ಖರೀದಿದಾರರು ಸಹ ಇಂಡಿಯನ್ ಓವರಸೀಸ್ ಬ್ಯಾಂಕ್‌ನಲ್ಲಿ ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸಿ ಸಾಲ ಪಡೆದಿದ್ದರು. ಅಂದರೆ 33 ಲಕ್ಷ ರೂ., 40 ಲಕ್ಷ ರೂ., 45 ಲಕ್ಷ ರೂ. ಮತ್ತು 54 ಲಕ್ಷ ರೂ. ಸಾಲವನ್ನು ನಾಲ್ವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಪಡೆದುಕೊಂಡಿದ್ದರು.

    ಡೆಸ್ಟಿನಿ ಡೆವಲಪರ್ ವ್ಯವಸ್ಥಾಪಕ ಪಾಲುದಾರರು ಪ್ಲ್ಯಾಟ್ ಖರೀದಿದಾರರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಟ್ಟು ಅವರಿಂದ ಹಣ ಪಡೆದು ಮೋಸ ಮಾಡಿದ್ದಾರೆ. ಖರೀದಿದಾರರು ದಾಖಲೆ ಪರಿಶೀಲನೆ ನಡೆಸಿದಾಗ ಈ ಮೊದಲೇ ಪ್ಲ್ಯಾಟ್ ಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts