More

    ಬಿರುಬಿಸಿಲನ್ನೂ ಲೆಕ್ಕಿಸದ ಮತದಾರರು

    ದಾವಣಗೆರೆ : ಮತಯಂತ್ರಗಳಲ್ಲಿ ದೋಷ. ಮತದಾನ ಬಹಿಷ್ಕಾರಕ್ಕೆ ಮುಂದಾದವರ ಮನವೊಲಿಕೆ. ಬಿರುಬಿಸಿಲನ್ನೂ ಲೆಕ್ಕಿಸದೆ ಮತಗಟ್ಟೆಗೆ ಬಂದ ಜನರು. ಯುವ ಮತದಾರರ ಉತ್ಸಾಹ. ಗಮನ ಸೆಳೆದ ವಿಶೇಷ ಮತಗಟ್ಟೆಗಳು.
     ಇವು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಮತದಾನದ ವೇಳೆ ಕಂಡುಬಂದ ದೃಶ್ಯಗಳು. ಮತದಾರರು ಬೆಳಗ್ಗೆ  7 ಗಂಟೆಯಿಂದಲೇ ಮತಗಟ್ಟೆಗೆ ಬರತೊಡಗಿದರು. ಕ್ರಮೇಣ ಮತದಾರರ ಸಂಖ್ಯೆ ಜಾಸ್ತಿಯಾಗುತ್ತ ಹೋಯಿತು. ಮತಗಟ್ಟೆಗಳ ಮುಂದೆ ಜನರ ಸಾಲು ಕಂಡುಬಂದವು. ಮಹಿಳೆಯರೂ ಬಹಳಷ್ಟು ಸಂಖ್ಯೆಯಲ್ಲಿದ್ದರು.
     ಬೆಳಗ್ಗೆ 9 ಗಂಟೆಯ ವರೆಗೆ ಶೇ 9.13 ರಷ್ಟು ಮತದಾನವಾಗಿತ್ತು. 11 ಗಂಟೆಯ ವೇಳೆಗೆ ಏರುಗತಿಯಲ್ಲಿ ಸಾಗಿ ಶೇ 23.77 ರಷ್ಟು ದಾಖಲಾಯಿತು. ಮಧ್ಯಾಹ್ನ ಬಿಸಿಲಿನಲ್ಲಿಯು ಸರತಿ ಸಾಲಿನಲ್ಲಿ ನಿಂತ ಜನರಿಂದ ಮತದಾನ ಚುರುಕುಗೊಂಡು 1 ಗಂಟೆಗೆ ಶೇ. 42.27 ಕ್ಕೇರಿತು. ಮಧ್ಯಾಹ್ನ 3 ಗಂಟೆಗೆ ಶೇ. 57.34 ರಷ್ಟು ದಾಖಲಿಸಿ ಸಂಜೆ 5 ಗಂಟೆಗೆ ಶೇ. 70.94 ರಷ್ಟು ಮತದಾನವಾಗಿತ್ತು.
     ಈ ಬಾರಿಯ ಮತದಾನದ ಪ್ರಮಾಣ 2019 ರ ಚುನಾವಣೆಯಲ್ಲಿ ದಾಖಲಾಗಿದ್ದ ಶೇ. 72.96 ರ ದಾಖಲೆಯನ್ನು ಹಿಂದಿಕ್ಕಿದೆ.
     ಬೆಳಗ್ಗೆ 6.30ಕ್ಕೆ ಕೆಲವು ಕಡೆ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದು 5 ಕಂಟ್ರೋಲ್ ಯೂನಿಟ್, 3 ಬ್ಯಾಲಟ್ ಯೂನಿಟ್ ಮತ್ತು ಕೆಲವು ವಿವಿಪ್ಯಾಟ್‌ಗಳನ್ನು ಬದಲಾವಣೆ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
     ಹರಿಹರ ತಾಲೂಕು ಬೆಳ್ಳೂಡಿಯ ಮತಗಟ್ಟೆಯಲ್ಲಿ ಚನ್ನಬಸಮ್ಮ ಎಂಬ 85 ವರ್ಷದ ವೃದ್ಧೆ ಮತದಾನ ಮಾಡಲು ಕಾದು ಕುಳಿತಿದ್ದರು. ಕೆಲವು ಮಹಿಳೆಯರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಭಾನುವಳ್ಳಿಯಲ್ಲಿ ನಾಗಮ್ಮ ಎಂಬ 90 ವರ್ಷದ ವೃದ್ಧೆ ಮತದಾನ ಮಾಡಿದರು. ಶಾಸಕ ಬಿ.ಪಿ. ಹರೀಶ್ ಭೇಟಿ ನೀಡಿದ್ದರು.
     ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು. ವೃದ್ಧರು, ಅಂಗವಿಕಲರು ಗಾಲಿ ಕುರ್ಚಿ ಸೌಲಭ್ಯ ಬಳಸಿಕೊಂಡರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts