More

    ಸಿಮ್ ಬ್ಲಾಕ್ ಮಾಡಿ ನರ್ಸ್‌ಗೆ 74 ಸಾವಿರ ಧೋಖಾ

    ಬೆಂಗಳೂರು: ನರ್ಸ್ ಮೊಬೈಲ್ ಸಿಮ್ ಬ್ಲಾಕ್ ಮಾಡಿದ ಸೈಬರ್ ಕಳ್ಳರು, ಆಕೆಯ ಬ್ಯಾಂಕ್ ಖಾತೆಯಿಂದ 74,500 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ.

    ಜೆ.ಪಿ. ನಗರ 3ನೇ ಹಂತದಲ್ಲಿ ನೆಲೆಸಿರುವ ನರ್ಸ್ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಜೆ.ಪಿ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಇದೇ ತಿಂಗಳು 21ರಂ ಸಂಜೆ 4.50ರಲ್ಲಿ ನರ್ಸ್ ಜಿಯೋ ಮೊಬೈಲ್ ಸಿಮ್ ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ಜಿಯೋ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದಾಗ, ‘ಮೊಬೈಲ್ ಕಳೆದಿದೆ, ತಕ್ಷಣ ಬ್ಲಾಕ್ ಮಾಡಿ ಎಂದು ಜಿಯೋ ಆ್ಯಪ್‌ನಲ್ಲಿ ಮನವಿ ಮಾಡಿ ನಿಷ್ಕ್ರಿಯ ಮಾಡಿಸಿದ್ದೀರಿ’ ಎಂದು ತಿಳಿಸಿದ್ದರು. ಅದಕ್ಕೆ ನರ್ಸ್, ‘ನನ್ನ ನಂಬರ್ ಬ್ಲಾಕ್ ಮಾಡಿಸಿಲ್ಲ’ ಎಂದಿದ್ದರು.

    ಬಳಿಕ ಮತ್ತೆ ಹೆಸರು, ವಿಳಾಸ, ಆಧಾರ್ ನಂಬರ್ ಪಡೆದು ಜಿಯೋ ಮೊಬೈಲ್ ನಂಬರ್ ಆ್ಯಕ್ಟಿವ್ ಮಾಡಿದ್ದರು. ಆದರೆ ಸ್ವಲ್ಪ ಹೊತ್ತಿಗೆ ಮೊಬೈಲ್ ಚಾಲ್ತಿಯಾಗುತ್ತಲೇ ನರ್ಸ್‌ಗೆ ಸೇರಿದ ಕೆನರಾ ಬ್ಯಾಂಕ್ ಖಾತೆಯಿಂದ 4 ಬಾರಿ ಒಟ್ಟು 74,500 ರೂ. ಕಡಿತವಾಗಿತ್ತು. ಕೊನೆಗೆ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಬ್ಲಾಕ್ ಮಾಡಿಸಿದ ನರ್ಸ್, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts