More

    ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗ: ಈ 3 ರಾಶಿಯವರಿಗೆ ರಾಜಯೋಗ ಶುರು, ಹರಿದುಬರುತ್ತೇ ಹಣದ ಹೊಳೆ

    ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ಬಳಿಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಯಾವಾಗ ಒಂದೇ ರಾಶಿಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಇದ್ದಾಗ, ಅವು ಸಂಯೋಗವನ್ನು ರೂಪಿಸುತ್ತವೆ. ಈ ಅಪರೂಪದ ಕ್ಷಣವನ್ನು ರಾಜಯೋಗವೆಂದೇ ಕರೆಯಲಾಗುತ್ತದೆ. ಇಂದು ಅದೇ ರೀತಿಯ ಒಂದು ಸಂಯೋಗ ನಡೆದಿದೆ. ಶನಿ-ಮಂಗಳ ಗ್ರಹ ಕುಂಭ ರಾಶಿಗೆ ಎಂಟ್ರಿ ಕೊಟ್ಟಿದೆ.

    ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಇಚ್ಛಾ ಶಕ್ತಿ, ಧೈರ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಪ್ರತಿನಿಧಿ ಎಂದು ಹೇಳಲಾಗುತ್ತದೆ. ಅದೇ ರೀತಿ ನಕಾರಾತ್ಮಕ ಪ್ರಭಾವವನ್ನು ಸಹ ಬೀರುತ್ತದೆ. ಮಂಗಳ ಗ್ರಹ ಕೋಪ, ಕ್ರೋಧ, ಕ್ಷುಲ್ಲಕತೆ, ದ್ವೇಷ, ಹಠಾತ್ ಕೋಪ ಮತ್ತು ಸಂವೇದನಾಶೀಲತೆಯಂತಹ ನಕಾರಾತ್ಮಕ ಗುಣಗಳಿಗೂ ಕಾರಣವಾಗಬಹುದು.

    ಇನ್ನೂ ಶನಿ ಗ್ರಹವನ್ನು ಸಾಮಾನ್ಯವಾಗಿ ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದರೂ ಒಳ್ಳೆಯದು ಮತ್ತು ಕೆಟ್ಟದ್ದನ್ನು ಸಮತೋಲನಗೊಳಿಸುವ ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಈ ಗ್ರಹ ಕಷ್ಟಪಟ್ಟು ದುಡಿಯುವಂತೆ ಮತ್ತು ಶಿಸ್ತನ್ನು ಪಡೆಯುವಂತೆ ಸೂಚಿಸುತ್ತದೆ. ಹೀಗಿರುವಾಗ ಈ ಎರಡೂ ಗ್ರಹಗಳು ಸಂಯೋಗವನ್ನು ರಚಿಸಿದರೆ ಏನಾಗುತ್ತದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಸದ್ಯಕ್ಕೆ, ಕುಂಭ ರಾಶಿಯಲ್ಲಿ ಶನಿ-ಮಂಗಳನ ಸಂಯೋಗದಿಂದ ಹಲವಾರು ರಾಶಿಚಕ್ರಗಳು ಲಾಭ ಪಡೆಯಲಿವೆ. ಆ ರಾಶಿಚಕ್ರದವರು ಯಾರು ಎಂಬ ಕುತೂಹಲವಿದೆಯೇ? ಅದನ್ನು ತಿಳಿದುಕೊಳ್ಳಲು ಮುಂದೆ ಓದಿ.

    ಮಾರ್ಚ್​ 15ರ ಸಂಜೆ 5.42ಕ್ಕೆ ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿ ಸಂಯೋಗವಾಗಿದೆ. ಈ ಸಂಯೋಜನೆ ಸುಮಾರು 38 ದಿನಗಳವರೆಗೆ ಇರುತ್ತದೆ. ಅಂದರೆ, ಏಪ್ರಿಲ್​ 22ರವರೆಗೆ ಇರಲಿದೆ. ಏಪ್ರಿಲ್​ 22ರಂದು ಮಂಗಳ ಗ್ರಹ ಕುಂಭ ರಾಶಿಯಿಂದ ಹೊರ ಬರಲಿದೆ. ಈ 38 ದಿನಗಳವರೆಗೆ ಕೆಲವು ರಾಶಿಯವರಿಗೆ ರಾಜಯೋಗ ಇರಲಿದೆ. ಅಂದರೆ, ಸಾಕಷ್ಟು ಲಾಭಗಳು ದೊರೆಯಲಿವೆ. ಈ ಸಂಗತಿಯನ್ನು ಆಸ್ಟ್ರೋಸೇಜ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

    ಯಾವ ರಾಶಿಗಳಿಗೆ ಲಾಭ?
    1. ವೃಷಭ ರಾಶಿ
    ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಗ ವೃಷಭ ರಾಶಿಯವರಿಗೆ ಉತ್ತಮ ಫಲವನ್ನು ನೀಡುತ್ತದೆ. ಒಳ್ಳೆಯ ಸ್ಥಾನ ಲಭಿಸಲಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ಅವಕಾಶ ಇದೆ. ಸ್ಥಳೀಯರು ಕೆಲಸದ ನಿಮಿತ್ತ ವಿದೇಶ ಪ್ರವಾಸವನ್ನೂ ಮಾಡಬಹುದು. ಯಾವುದೇ ಕಠಿಣ ಕೆಲಸ ಮಾಡದೆ ಹಣದ ಒಳಹರಿವಿನ ಸಾಧ್ಯತೆಗಳೂ ಇವೆ.

    2. ಮಿಥುನ ರಾಶಿ
    ಕುಂಭ ರಾಶಿಯಲ್ಲಿ ಮಂಗಳನ ಉಪಸ್ಥಿತಿ ಮಿಥುನ ರಾಶಿಯವರಿಗೆ ತುಂಬಾ ಅದೃಷ್ಟ ತಂದುಕೊಡಲಿದೆ. ಅದರಲ್ಲೂ ವೃತ್ತಿ ಜೀವನದಲ್ಲಿ ಒಳ್ಳೆಯದಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು ಮತ್ತು ಆದಾಯದಲ್ಲಿ ಹೆಚ್ಚಳವು ಆಗಬಹುದು. ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಹೊಸ ಹೂಡಿಕೆದಾರರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ. ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ದಾಂಪತ್ಯದಲ್ಲಿಯೂ ಮಧುರತೆ ಮತ್ತು ಸೌಂದರ್ಯ ಇರುತ್ತದೆ. ಒಟ್ಟಾರೆಯಾಗಿ, ಮಿಥುನ ರಾಶಿಯವರಿಗೆ ಇದು ಉತ್ತಮ ಸಮಯವಾಗಿದೆ.

    3. ಕುಂಭರಾಶಿ
    ಮಂಗಳ ಎಂಟ್ರಿ ಕೊಟ್ಟಿರುವುದರಿಂದ ಕುಂಭರಾಶಿಯವರು ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಗೌರವ ಹೆಚ್ಚಾಗುವ ಅವಕಾಶಗಳಿವೆ. ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಸಾಧಿಸಲು ಸಾಧ್ಯವಾಗುತ್ತದೆ.

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ವಿಡಿಯೋ ಕಾಲ್​ನಲ್ಲಿ ಕೊಹ್ಲಿ ಹೇಳಿದ್ದೇನು? RCB ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ ಸ್ಮೃತಿ ಮಂದಾನ ಉತ್ತರ!

    ಮದ್ವೆಯಾದ್ರೂ ನಿನ್ನೊಂದಿಗೆ ಇರಲ್ಲ ಎಂದ ಮಾವನ ಮಗಳು: ನಂತರ ನಡದೇ ಹೋಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts