More

    ಮದ್ವೆಯಾದ್ರೂ ನಿನ್ನೊಂದಿಗೆ ಇರಲ್ಲ ಎಂದ ಮಾವನ ಮಗಳು: ನಂತರ ನಡದೇ ಹೋಯಿತು ಘೋರ ಕೃತ್ಯ

    ಹಾವೇರಿ: ಮದುವೆಯಾಗಲು ನಿರಾಕರಿಸಿದ ಸೋದರ ಮಾವನ ಮಗಳನ್ನು ತೋಟವೊಂದಕ್ಕೆ ಕರೆದೊಯ್ದು ವಿಷವುಣಸಿ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಹಾನಗಲ್ಲ ಹೊರವಲಯದ ಬೈಚವಳ್ಳಿ ರಸ್ತೆಯ ಮಾವಿನ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಮಂಗಳವಾರ ಪತ್ತೆಯಾಗಿದೆ.

    ದೀಪಾ ಮಂಜಪ್ಪ ಗೊಂದಿ (22) ಮೃತ ಯುವತಿ. ಈಕೆ ತಾಲೂಕಿನ ಮೂಡೂರ ಗ್ರಾಮದ ನಿವಾಸಿ. ಕಳೆದ ಒಂದುವರೆ ತಿಂಗಳ ಹಿಂದೆ ಮೃತ ದೀಪಾಳೊಂದಿಗೆ ಅರಳೇಶ್ವರ ಗ್ರಾಮದ ಮಾಲತೇಶ ಬಾರ್ಕಿ (25) ಜೊತೆಗೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್12 ರಂದು ಮದುವೆ ನಡೆಯಬೇಕಿತ್ತು. ಆದರೆ, ಕಳೆದ ಮಾರ್ಚ 14ರಂದು ಮಾವ ಮಾಲತೇಶ ಬಾರ್ಕಿ ಹಾನಗಲ್ ಪಟ್ಟಣಕ್ಕೆ ದೀಪಾಳನ್ನು ಕರೆಯಿಸಿಕೊಂಡು, ಬಳಿಕ ಬೈಕ್‌ನಲ್ಲಿ ಕರೆದುಕೊಂಡು ಬೈಚವಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ತೋಟವೊಂದಕ್ಕೆ ಕರೆದೊಯ್ದು ವಿಷವುಣಸಿ, ನೇಣು ಬಿಗಿದು ಸಾಯಿಸಿದ್ದಾರೆ. ಇದನ್ನು ಸ್ವತಃ ಮಾಲತೇಶ ಒಪ್ಪಿಕೊಂಡಿದ್ದಾನೆ.

    ದೀಪಾ ನನ್ನನ್ನು ಇಷ್ಟ ಪಡುತ್ತಿರಲಿಲ್ಲ. ನನಗೆ ಸೀಳುತುಟಿ ಇದ್ದುದರಿಂದ ನನ್ನ ಜೊತೆಗೆ ಆಗಾಗ ಜಗಳ ಆಡುತ್ತಿದ್ದಳು. ಮಾರ್ಚ್ 14 ರಂದು ಮಾತುಕತೆಗೆಂದು ಹಾನಗಲ್‌ಗೆ ಕರೆಸಿಕೊಂಡಿದ್ದೆ. ಅವಳು ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಳು. ಅಲ್ಲದೇ ಮದುವೆಯಾದರೆ ನಿನ್ನನ್ನು ಬಿಟ್ಟು ಹೋಗುವುದಾಗಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಅವಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬೈಚವಳ್ಳಿ ರಸ್ತೆಯ ಮಾವಿನ ತೋಟವೊಂದಕ್ಕೆ ಕರೆದೊಯ್ದು ವಿಷವುಣಸಿ ಸಾಯಿಸಿ, ನೇಣು ಬಿಗಿದಿರುವ ಬಗ್ಗೆ ಆರೋಪಿ ಮಾಲತೇಶ ಬಾರ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    ಇದಕ್ಕೂ ಮೊದಲು ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೀಪಾ ಕಾಣೆಯಾಗಿರುವ ಕುರಿತು ಮಾ.14 ರಂದು ಮೃತಳ ತಂದೆ ಮಂಜಪ್ಪ ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಜಾಡನ್ನು ಹಿಡಿದ ಹಾನಗಲ್ ಪೊಲೀಸರ ತಂಡ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

    ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಮಂಜುನಾಥ, ಹಾನಗಲ್ ಸಿಪಿಐ ಆರ್.ವಿರೇಶ, ಪಿಎಸ್ಐ ಚಂದನ್ ಚಲುವಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದಾವಣಗೇರಿ ಎಫ್​ಎಸ್‌ಎಲ್ ಟೀಮ್ ಸ್ಥಳಕ್ಕೆ ಧಾವಿಸಿ ಕೊಳೆತ ಶವದ ಪರೀಕ್ಷೆ ನಡೆಸಿದರು.

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts