More

  ಗಾಳಿ ರಭಸಕ್ಕೆ ಹಾರಿಹೋಗಿ ಐದು ವರ್ಷದ ಮಗು ಸಾವು

  ತೆಲಂಗಾಣ: ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಮಗು ಗಾಳಿಯ ರಭಸಕ್ಕೆ ಹಾರಿ 20 ಮೀಟರ್ ದೂರದಲ್ಲಿ ಬಿದ್ದು ಸಾವನ್ನಪ್ಪಿದೆ. ಮೇದಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಜಜಿತಾಂಡಾದಲ್ಲಿ ಈ ಘಟನೆ ನಡೆದಿದೆ.

  ಸಂಗೀತಾ (5) ಮೃತ ಮಗು. ಪಾಲಕರು ಜಮೀನಿಗೆ ತೆರಳಿದ್ದ ವೇಳೆ ಮನೆಯಲ್ಲಿ ಅವಳಿ ಹೆಣ್ಣು ಮಕ್ಕಳು ಮನೆಯ ಶೆಡ್‌ಗೆ ಕಟ್ಟಿದ ತೊಟ್ಟಿಲಲ್ಲಿ ಆಟವಾಡುತ್ತಿದ್ದರು. ಸುಂಟರ ಗಾಳಿಗೆ ಸಿಕ್ಕು ಒಂದು ಮಗು ಪ್ರಾಣ ಕಳೆದುಕೊಂಡಿದೆ.   

  ಮೇದಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಜಜಿತಾಂಡಾದಲ್ಲಿ ಮಂಜುಳಾ ಮತ್ತು ಮಾನ್‌ಸಿಂಗ್‌ಗೆ ಸಂಗೀತಾ ಮತ್ತು ಸೀತಾ ಅವಳಿ ಮಕ್ಕಳಿದ್ದಾರೆ. ಸಂಗೀತಾ ಪಾಲಕರು ಜಮೀನಿಗೆ ಹೋದಾಗ ಮನೆಯ ಶೆಡ್‌ಗೆ ಕಟ್ಟಿದ ಸೀರೆಯಲ್ಲಿ ಸಂಗೀತ ಆಟವಾಡುತ್ತಿದ್ದಳು. ಅಜ್ಜಿ, ಸೀತಾಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋದರು. ಸಂಗೀತಾ ಮನೆಯಲ್ಲಿ ಒಬ್ಬಳೇ ಆಟವಾಡುತ್ತಿದ್ದಳು.

  ಸ್ವಲ್ಪ ಹೊತ್ತಿನಲ್ಲಿ ಭಾರಿ ಸುಂಟರಗಾಳಿ ಬೀಸಿತು. ಇದರಿಂದ ಚಿನ್ನಾರಿ ಸಂಗೀತ ಭಾರಿ ಸುಂಟರಗಾಳಿಗೆ ಸಿಕ್ಕು ಹಾರಿ ಹೋದಳು. ಮನೆ ಆಚೆ ಹೋಗಿ ಬಿದ್ದಿದ್ದಳು. ಈ ಪರಿಣಾಮ ಮಗುವಿಗೆ ತೀವ್ರ ಗಾಯಗಳಾಗಿವೆ. ಗಾಯಗಳಿಂದ ನರಳುತ್ತಿದ್ದ ಸಂಗೀತಾ ಅವರನ್ನು ಗಮನಿಸಿದ ನೆರೆಹೊರೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಗು ಸಂಗೀತಾ ಮಂಗಳವಾರ ಮೃತಪಟ್ಟಿದೆ.

  ನನಗೆ ಮದುವೆ ಬೇಡ,ಒಂಟಿಯಾಗಿರುತ್ತೇನೆಂದ ಸೀರಿಯಲ್​ ನಟಿ; ಯಾಕಮ್ಮಾ? ಇಂತಾ ನಿರ್ಧಾರ ಎಂದ್ರು ಫ್ಯಾನ್ಸ್​

  ಸಿಲ್ಕ್ ಸ್ಮಿತಾ ಅಂತಿಮ ದರ್ಶನ ಪಡೆದ ಏಕೈಕ ನಟ ಅರ್ಜುನ್​ ಸರ್ಜಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts