More

  ನನಗೆ ಮದುವೆ ಬೇಡ,ಒಂಟಿಯಾಗಿರುತ್ತೇನೆಂದ ಸೀರಿಯಲ್​ ನಟಿ; ಯಾಕಮ್ಮಾ? ಇಂತಾ ನಿರ್ಧಾರ ಎಂದ್ರು ಫ್ಯಾನ್ಸ್​

  ನವದೆಹಲಿ: ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದ ತಮಿಳಿನ ನಟಿಯೊಬ್ಬರು ನಾನು ಎಂದಿಗೂ ಮದುವೆಯಾಗುವುದಿಲ್ಲ ಮತ್ತು ಒಂಟಿಯಾಗಿ ಜೀವನ ನಡೆಸುತ್ತೇನೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  ನಟಿ ಪವಿತ್ರಾ ಜನನಿ ತಮಿಳಿನ ವಿಜಯ್ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದಾರೆ. ವೆಬ್​ ಸರಣಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಸರವಣನ್ ಮೀನಾಕ್ಷಿ ಮತ್ತು ರಾಜಾ ರಾಣಿಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಪವಿತ್ರಾ 2018 ರಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

  ಕಿರುತೆರೆಯಲ್ಲಿ ಖ್ಯಾತ ನಟಿಯಾಗಿರುವ ಪವಿತ್ರಾ ಜನನಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 9 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ನಟಿ ಪವಿತ್ರಾ ಅವರಿಗೆ ಈಗ 32 ವರ್ಷ. ಮದುವೆ ವಯಸ್ಸಿಗೆ ಬಂದ ಪವಿತ್ರಾಗೆ ಆಕೆಯ ಪೋಷಕರು ವರನನ್ನು ಹುಡುಕಲು ಪ್ರಾರಂಭಿಸಿದಾಗ, ಜನನಿ ಅವರು ಮದುವೆಯಾಗುವ ಆಲೋಚನೆಯಲ್ಲಿಲ್ಲ ಎಂದು ಹೇಳುವ ಮೂಲಕವಾಗಿ ಆಘಾತಗೊಳಿಸಿದ್ದಾರೆ.

  ಈ ಕುರಿತು ಮಾತನಾಡಿದ ಅವರು, ಮದುವೆಯೇ ಎಲ್ಲದಕ್ಕೂ ಪರಿಹಾರನಾ? ಪರಿಹಾರ ಎಂದು ಯಾರೂ ಹೇಳಬೇಡಿ. ಮದುವೆಯಾಗದೆ ಜಗತ್ತಿನಲ್ಲಿ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ಮದುವೆಯಾಗದೆ ಒಂಟಿಯಾಗಿಯೇ ಇರಲು ನಿರ್ಧರಿಸಿದ್ದೇನೆ. ನಾನು ಹೀಗೆ ಇರುತ್ತೇನೆ ಮದುವೆ ಬೇಡಾ ಎಂದು ಹೇಳಿದ್ದಾರೆ.

  ನಟಿ ಪವಿತ್ರಾ ಜನನಿ ಬಹಿರಂಗವಾಗಿ ಹೇಳಿದ್ದು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಯಾಕಮ್ಮಾ ನಿನಗೆ ಮದುವೆ ಬೇಡಾ? ಜೀವನ ಮುಂದೆ ಕೂಡಾ ಹೀಗೆ ಇರುವುದಿಲ್ಲ. ಮದುವೆ ಎನ್ನುವುದು ಜೀವನದ ಒಂದು ಘಟ್ಟ ಎಂದು ನೆಟ್ಟಿಗರು ನಟಿಗೆ ಸಲಹೆ ನೀಡಿದ್ದಾರೆ.

  VIDEO | ಹೀಗೆ ಮಾಡಿ ನೋಡಿ ನಿಮ್ಮ ಚಪ್ಪಲಿಗಳು ಎಂದಿಗೂ ಕಳ್ಳತನವಾಗುವುದಿಲ್ಲ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts