More

    ಅಂಬಾನಿ ಮದುವೆಯಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡಿದ್ದ ಈಕೆ ಮುಂದೊಂದು ದಿನ ಖ್ಯಾತ ನಟಿಯಾಗುತ್ತಾರೆಂದು ಯಾರು ಊಹಿಸಿರಲಿಲ್ಲ!

    ಮುಂಬೈ: ಬಾಲಿವುಡ್​​​ನ ಈ ನಟಿ ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಈ ನಟಿಗೂ ವಿವಾದಗಳಿಗೂ ಬಹಳ ನಂಟು. ಬಹುಶಃ ಅದಕ್ಕಾಗಿಯೇ ಅವರನ್ನು ಬಿ-ಟೌನ್‌ನ ಕಾಂಟ್ರವರ್ಸಿ ಕ್ವೀನ್ ಎಂದು ಕರೆಯುತ್ತಾರೆ. ಆದರೆ ಬಹುತೇಕರಿಗೆ ತಿಳಿಯದ ವಿಚಾರವೆಂದರೆ ತನ್ನ ಬಾಲ್ಯವನ್ನು ಬಡತನದಲ್ಲಿ ಕಳೆದಿದ್ದೇನೆ ಎಂದು ಸ್ವತಃ ಆಕೆ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

    ನಿಮಗೀಗ ಈ ನಟಿ ಯಾರಿರಬಹುದೆಂಬ ಚಿಕ್ಕ ಸುಳಿವು ಸಿಕ್ಕಿರಬೇಕಲ್ಲವೇ, ಹೌದು. ನಿಮ್ಮ ಊಹೆ ನಿಜ. ಆ ನಟಿ ಬೇರಾರೂ ಅಲ್ಲ ರಾಖಿ ಸಾವಂತ್. ರಾಖಿಯ ನಿಜವಾದ ಹೆಸರು ನೀರಾ ಭೇದ. ರಾಖಿಯ ತಾಯಿ ಜಯಾ ಭೇದಾ. ಇವರು ಪೊಲೀಸ್ ಪೇದೆಯನ್ನು ಮದುವೆಯಾಗಿದ್ದರು. ರಾಖಿಯ ತಂದೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದರು. ಆ ಪೊಲೀಸ್ ಠಾಣೆಯ ಹೆಸರು ಆನಂದ್ ಸಾವಂತ್. ಅಲ್ಲಿಂದ ರಾಖಿ ತನ್ನ ಉಪನಾಮವನ್ನು ಸಾವಂತ್ ಎಂದು ಇಟ್ಟುಕೊಂಡಿದ್ದಾರೆ.

    ಅಂಬಾನಿ ಮದುವೆಯಲ್ಲಿ ಪರಿಚಾರಿಕೆ
    ರಾಖಿ ತನ್ನ 10 ನೇ ವಯಸ್ಸಿನಲ್ಲಿ ಹಣ ಸಂಪಾದಿಸಲು ಪ್ರಾರಂಭಿಸಿದರು. ಇದಕ್ಕಾಗಿ ರಾಖಿ ಕ್ಯಾಟರರ್ ಜೊತೆ ಕೆಲಸ ಮಾಡುತ್ತಿದ್ದರು. ಪರಿಚಾರಿಕೆಯಾಗಿ (ಸಹಾಯಕಿ) ರಾಖಿಯ ದಿನದ ಸಂಪಾದನೆ 50 ರೂ. ಇದೇ ವೇಳೆ, ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ವಿವಾಹದಲ್ಲಿ ಪರಿಚಾರಿಕೆಯಾಗಿ ಅತಿಥಿಗಳಿಗೆ ರಾಖಿ ಊಟ ಬಡಿಸಿದರು. ಇದೇ ಪರಿಚಾರಿಕೆ ಮುಂದೆ ಚಿತ್ರರಂಗದ ಖ್ಯಾತ ನಟಿಯಾಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ.

    1997 ರಲ್ಲಿ ಪ್ರಾರಂಭ
    ರಾಖಿ ಸಾವಂತ್ 1997 ರಲ್ಲಿ ‘ಅಗ್ನಿಚಕ್ರ’ ಚಿತ್ರದ ಮೂಲಕ ದೊಡ್ಡ ಪರದೆಗೆ ಕಾಲಿಟ್ಟರು. ರಾಖಿಯ ನಿರ್ಧಾರದಿಂದ ಆಕೆಯ ಮನೆಯವರು ತುಂಬಾ ಕೋಪ ವ್ಯಕ್ತಪಡಿಸಿದರು. ಆದರೆ ಯಾರ ಮಾತಿಗೂ ಕಿವಿಗೊಡದ ರಾಖಿ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸತೊಡಗಿದರು. ಅನೇಕ ಸೂಪರ್‌ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ರಾಖಿ. ಆದರೆ 2003 ರಲ್ಲಿ ಬಿಡುಗಡೆಯಾದ ಮೊಹಬ್ಬತ್ ಹೈ ಮಿರ್ಚಿ ಹಾಡಿನಿಂದ ರಾಖಿಗೆ ನಿಜವಾದ ಮನ್ನಣೆ ಸಿಕ್ಕಿತು. ಇದರ ನಂತರ ರಾಖಿ ಸೂಪರ್ ಹಿಟ್ ಮ್ಯೂಸಿಕ್ ವಿಡಿಯೋ ಪರ್ದೇಸಿಯಾದಲ್ಲಿ ಕಾಣಿಸಿಕೊಂಡರು.

    ರಾಖಿ ಫೇಮಸ್ ಆದದ್ದು ಹೇಗೆ?
    2006 ರಲ್ಲಿ ರಾಖಿ ಬಿಗ್ ಬಾಸ್​​​ನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದ ಈ ಸೀಸನ್ ಅನ್ನು ಅರ್ಷದ್ ವಾರ್ಸಿ ನಡೆಸಿಕೊಟ್ಟರು. ಸ್ವಲ್ಪ ಸಮಯದ ನಂತರ ರಾಖಿ ಸ್ವಯಂವರದಲ್ಲಿ ಭಾಗಿಯಾದರು. ಇಲ್ಲಿಂದ ಸಾಕಷ್ಟು ಲೈಮ್ ಲೈಟ್ ಗೆ ಬಂದರು. 2019 ರಲ್ಲಿ, ರಾಖಿ ರಿತೇಶ್ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಂತರ ಇಬ್ಬರೂ ದೂರವಾದರು. ಅಂತಿಮವಾಗಿ ರಾಖಿ ಆದಿಲ್ ದುರಾನಿ ಅವರನ್ನು ವಿವಾಹವಾದರು. ರಾಖಿ ಆದಿಲ್ ಮೇಲೆ ವಿವಾಹೇತರ ಸಂಬಂಧದ ಆರೋಪ ಮಾಡಿದ್ದರು. ಇದೀಗ ಆದಿಲ್ ರಾಖಿಯನ್ನು ಬಿಟ್ಟು ಎರಡನೇ ಮದುವೆಯಾಗಿದ್ದಾರೆ.

    ರಾಖಿ ಸಾವಂತ್ ನಿವ್ವಳ ಮೌಲ್ಯ
    ರಾಖಿಯ ಮೊದಲ ಗಳಿಕೆ 50 ರೂ.ಗಳಿಂದ ಆರಂಭವಾಯಿತು. ಇಂದು ಬ್ಯಾಂಕ್ ಬ್ಯಾಲೆನ್ಸ್ ಕೋಟಿಗಟ್ಟಲೆಯಿದೆ. ವರದಿಗಳ ಪ್ರಕಾರ ರಾಖಿಯ ನಿವ್ವಳ ಮೌಲ್ಯ 37 ಕೋಟಿ ರೂ. ಸಹಜವಾಗಿಯೇ ರಾಖಿ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರು ಕಾರ್ಯಕ್ರಮಗಳು, ಈವೆಂಟ್ಸ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಮುಂಬೈನ ಅಂಧೇರಿಯಲ್ಲಿ ರಾಖಿ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೇ ಮುಂಬೈನ ಜುಹುದಲ್ಲಿ ರಾಖಿಗೆ ಎರಡು ಬಂಗಲೆಗಳಿವೆ.

    ಈ 5 ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಜಾನ್ವಿ ಕಪೂರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts