More

  15 ನಿಮಿಷಗಳಲ್ಲಿ ಇಲ್ಲಿಂದ ಹೊರಡಿ! ಸೀರಿಯಲ್​ನಿಂದ ಇಬ್ಬರನ್ನು ತೆಗೆದುಹಾಕಿದ ನಿರ್ಮಾಪಕರು, ಕಾರಣ ಶಾಕಿಂಗ್

  ಮುಂಬೈ: ಹೆಸರಾಂತ ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಧಾರವಾಹಿಯಿಂದ ಇಬ್ಬರು ಖ್ಯಾತ ಕಲಾವಿದರಾದ ಶೆಹಜಾದಾ ಧಾಮಿ ಮತ್ತು ಪ್ರತೀಕ್ಷಾ ಹೊನ್ಮುಖೆ ಅವರನ್ನು ವೃತ್ತಿಪರವಲ್ಲದ ನಡವಳಿಕೆಗಾಗಿ ತಕ್ಷಣವೇ ಸೆಟ್​ನಿಂದ ಹೊರ ಹೋಗುವಂತೆ ನಿರ್ಮಾಪಕ ರಾಜನ್ ಶಾಹಿ ಆದೇಶಿಸಿದ್ದು, ಇದೀಗ ಇಬ್ಬರನ್ನು ಸೀರಿಯಲ್​ನಿಂದ ತೆಗೆದುಹಾಕಲಾಗಿದೆ.

  ಇದನ್ನೂ ಓದಿ: ಹಗಲು, ರಾತ್ರಿ ಎನ್ನದೆ ನನಗೆ ಕಿರುಕುಳ ಕೊಟ್ಟಿದ್ದಾನೆ ಎಂದ್ರು ಖ್ಯಾತ ನಟಿ ಕಮ್​ ಆ್ಯಂಕರ್

  ಸೀರಿಯಲ್​ನಲ್ಲಿ ಅರ್ಮಾನ್ ಮತ್ತು ರೂಹಿ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಟ ಶೆಹಜಾದಾ ಧಾಮಿ ಮತ್ತು ನಟಿ ಪ್ರತೀಕ್ಷಾ ಹೊನ್ಮುಖೆ, ತಮ್ಮ ವೃತ್ತಿಪರವಲ್ಲದ ನಡವಳಿಕೆಯಿಂದಾಗಿ ಜನಪ್ರಿಯ ಟಿವಿ ಕಾರ್ಯಕ್ರಮದಿಂದ ಇದೀಗ ಹೊರನಡೆದಿದ್ದಾರೆ. ವರದಿಯ ಪ್ರಕಾರ, ಶೆಹಜಾದಾ ಮತ್ತು ಪ್ರತೀಕ್ಷಾ ಅವರ ವೃತ್ತಿಪರವಲ್ಲದ ನಡವಳಿಕೆಯಿಂದ ಅಸಮಾಧಾನಗೊಂಡ ನಿರ್ಮಾಪಕರು, ದೃಢ ನಿರ್ಧಾರ ಕೈಗೊಂಡು ಇಬ್ಬರನ್ನು ಚಿತ್ರೀಕರಣ ನಡೆಯುತ್ತಿದ್ದ ಸೆಟ್​ನಿಂದ 15 ನಿಮಿಷಗಳೊಳಗೆ ಜಾಗ ಖಾಲಿಮಾಡುವಂತೆ ಹೇಳಿ ಕಳಿಸಿದ್ದಾರೆ.

  ನಟ ಶೆಹಜಾದಾ ಮೊದಲಿನಿಂದಲೂ ನಿರಂತರವಾಗಿ ದುರ್ವತನೆ ತೋರುತ್ತಿದ್ದರು ಮತ್ತು ಚಿತ್ರೀಕರಣದಲ್ಲಿದ್ದವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು ಹಾಗೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆದಾಗ್ಯೂ, ಸಮಸ್ಯೆಯನ್ನು ಪರಿಹರಿಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ, ಅವರ ನಡವಳಿಕೆಯು ಮುಂದುವರೆದಿತ್ತು. ಇದು ಸೆಟ್​ನಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಭಾರೀ ಬೇಸರ ಮೂಡಿಸಿತ್ತು.

  ಇದನ್ನೂ ಓದಿ: ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದೇಕೆ? ನನಗೆ ಪುಳಿಯೋಗರೆನೂ ಬೇಕು… ಅನುಪಮಾ ಉತ್ತರ ಕೇಳಿ ಫ್ಯಾನ್ಸ್​ ಶಾಕ್​

  ಮತ್ತೊಂದೆಡೆ, ಹೊಸದಾಗಿ ಸೀರಿಯಲ್​ಗೆ ಬಂದಿದ್ದ ನಟಿ ಪ್ರತಿಕ್ಷಾ, ತಮ್ಮ ಪಾತ್ರಕ್ಕೆ ಅಗತ್ಯ ಹಾಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಅವರನ್ನು ಕೂಡ ಸೆಟ್​ನಿಂದ ಹೊರಹೋಗುವಂತೆ ನಿರ್ಮಾಪಕರು ಖಾರವಾಗಿ ಹೇಳಿದ್ದಾರೆ. ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವೀಕ್ಷಕರಲ್ಲಿ ಭಾರೀ ಆಶ್ಚರ್ಯ ಮೂಡಿಸಿದೆ,(ಏಜೆನ್ಸೀಸ್).

  ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ಅವಕಾಶ ಕೊಡಿ ಅಂದ್ರೆ ಬಟ್ಟೆ ಬಿಚ್ಚು, ಮಚ್ಚೆ ಇದ್ಯಾ… ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಆಮನಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts