More

  ಹಗಲು, ರಾತ್ರಿ ಎನ್ನದೆ ನನಗೆ ಕಿರುಕುಳ ಕೊಟ್ಟಿದ್ದಾನೆ ಎಂದ್ರು ಖ್ಯಾತ ನಟಿ ಕಮ್​ ಆ್ಯಂಕರ್

  ಹೈದ್ರಾಬಾದ್​: ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಮಾಧ್ಯಮಗಳ ಮುಂದೆ ಮಾತನಾಡಿರುವುದು ಗೊತ್ತೇ ಇದೆ. ತಾವು ಎದುರಿಸಿದ ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಧೈರ್ಯವಾಗಿ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಆ್ಯಂಕರ್ ಕಮ್ ತೆಲಗು ​ ನಟಿ ಆಗಿರುವ ಶ್ಯಾಮಲಾ ಅವರು ತಾವಿ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಾಗ ಎದುರಿಸಿದ್ದ ಕಹಿ ಅನುಭಗಳನ್ನು ಬಿಚ್ಚಿಟ್ಟಿದ್ದಾರೆ.

  ಧಾರಾವಾಹಿಯಿಂದ ಬಂದ ಶ್ಯಾಮಲಾ ಆ್ಯಂಕರ್ ಆಗಿ ಮಿಂಚುತ್ತಿದ್ದಾರೆ. ಶ್ಯಾಮಲಾ ಅವರು ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ ಮತ್ತು ಚಲನಚಿತ್ರ ಬಿಡುಗಡೆ ಪೂರ್ವ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಸಂದರ್ಶನಗಳಲ್ಲಿ ನಿರತರಾಗಿದ್ದಾರೆ. ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಾಯಿ ಧರಮ್ ತೇಜ್ ಅಭಿನಯದ ವಿರೂಪಾಕ್ಷ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಶ್ಯಾಮಲಾ ಅವರ ಇತ್ತೀಚಿನ ಕಾಮೆಂಟ್‌ಗಳು ಈಗ ವೈರಲ್ ಆಗಿವೆ.anchor shyamala

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶ್ಯಾಮಲಾ ಮಾತನಾಡಿ, ನಾನು ಮತ್ತು ನನ್ನ ತಾಯಿ ಸಿನಿಮಾದಲ್ಲಿ ನಟಿಸಲು ಇಲ್ಲಿಗೆ ಬಂದಿದ್ದೇವೆ. ಆದರೆ ಮೊದಲು ಧಾರಾವಾಹಿಗಳಲ್ಲಿ ಅವಕಾಶಗಳು ಬಂದವು. ಆದರೆ ಕೆಲವರು ಶೂಟಿಂಗ್ ನಲ್ಲಿ ನನಗೆ ಕಿರಿಕಿರಿ ಮಾಡುತ್ತಿದ್ದರು. ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು. ಅಲ್ಲದೇ ಪ್ರಪೋಸ್ ಮಾಡಿ ಗಲಾಟೆ ಮಾಡಿದ್ದಾರೆ. ನನಗೆ ಎಲ್ಲವನ್ನೂ ಸಹಿಸಲಾಗಲಿಲ್ಲ ಎಂದಿದ್ದಾರೆ.

  ಧಾರಾವಾಹಿಗಳನ್ನು ಬಿಡಬೇಕು ಅಂದುಕೊಂಡೆ.. ಅದೇ ಸಮಯಕ್ಕೆ ಒಬ್ಬ ಕ್ಯಾಮರಾಮನ್ ನನಗೆ ತುಂಬಾ ಕಿರುಕುಳ ಕೊಟ್ಟ. ಹಗಲು ರಾತ್ರಿ ಫೋನ್ ಮಾಡಿ ಹುಚ್ಚುಚ್ಚಾಗಿ ಮಾತನಾಡಿ ಬೆದರಿಕೆ ಹಾಕುತ್ತಿದ್ದ. ಅಮ್ಮನಿಗೆ  ದಿಕ್ಕೇ ತೋಚದಂತಾಯಿತು. ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ.. ನಿನ್ನ ಮಗಳಿಗೆ ಹೇಳು.. ಅವಳಿಗೆ ಅರ್ಥವಾಗುತ್ತಿಲ್ಲ. ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದರು. ಅವನು ನನಗೆ ಏನಾದರೂ ಹಾನಿ ಮಾಡುತ್ತಾನೆ ಎಂದು ನನ್ನ ತಾಯಿ ಹೆದರುತ್ತಿದ್ದರು. ವಾಪಸ್ ಹೋಗೋಣ ಎಂದಿದ್ದಳು ಎಂದುಬ ಹೇಳಿದ್ದಾರೆ.

  ಸಾವು-ಬದುಕಿನ ಮಧ್ಯೆ ನಟಿ ಹೋರಾಟ; ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಮನವಿ ಮಾಡಿದ ಗೆಳತಿ

  ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಕನ್ನಡದ ನಟಿ ಯಮುನಾ; ಈಗ ಎಲ್ಲಿದ್ದಾರೆ? ಹೇಗಿದ್ದಾರೆ ನೋಡಿ..

  ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

  ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts